ಆಗಸ್ಟ್ 15ರ ನಂತರ 'ಕೆಜಿಎಫ್ ಚಾಪ್ಟರ್-2' ಚಿತ್ರೀಕರಣ

ದೇಶಾದ್ಯಂತ ಲಾಕ್ ಡೌನ್ ನಿರ್ಬಂಧ ಸಡಿಲಿಕೆಯಾಗುತ್ತಿದ್ದಂತೆ ಚಿತ್ರೋದ್ಯಮ ಕೂಡ ತನ್ನ ಚಟುವಟಿಕೆಗಳನ್ನು ನಿಧಾನವಾಗಿ ಪುನರಾರಂಭಿಸಲು ತಯಾರಿ ನಡೆಸುತ್ತಿದೆ. ಕೊನೆಯ ಭಾಗದ ಚಿತ್ರೀಕರಣದಲ್ಲಿರುವ ಚಿತ್ರತಂಡಗಳು ಮತ್ತೆ ಕೆಲಸ ಆರಂಭಿಸಲು ಸಜ್ಜಾಗಿವೆ.
ಚಿತ್ರದ ದೃಶ್ಯ
ಚಿತ್ರದ ದೃಶ್ಯ

ಬೆಂಗಳೂರು: ದೇಶಾದ್ಯಂತ ಲಾಕ್ ಡೌನ್ ನಿರ್ಬಂಧ ಸಡಿಲಿಕೆಯಾಗುತ್ತಿದ್ದಂತೆ ಚಿತ್ರೋದ್ಯಮ ಕೂಡ ತನ್ನ ಚಟುವಟಿಕೆಗಳನ್ನು ನಿಧಾನವಾಗಿ ಪುನರಾರಂಭಿಸಲು ತಯಾರಿ ನಡೆಸುತ್ತಿದೆ. ಕೊನೆಯ ಭಾಗದ ಚಿತ್ರೀಕರಣದಲ್ಲಿರುವ ಚಿತ್ರತಂಡಗಳು ಮತ್ತೆ ಕೆಲಸ ಆರಂಭಿಸಲು ಸಜ್ಜಾಗಿವೆ.

ಕೆಜಿಎಫ್ ಚಾಪ್ಟರ್-2 ಚಿತ್ರೀಕರಣ ಈ ತಿಂಗಳ 15ರ ಬಳಿಕ ಆರಂಭವಾಗಲಿದೆ ಎಂಬ ಮಾಹಿತಿ ಚಿತ್ರತಂಡದಿಂದ ಲಭ್ಯವಾಗಿದೆ. ಯಶ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ -2 ಇನ್ನು 25 ದಿನಗಳ ಶೂಟಿಂಗ್ ಬಾಕಿಯಿರಿಸಿಕೊಂಡಿದೆ. ಶೇಕಡಾ 90ರಷ್ಟು ಭಾಗದ ಚಿತ್ರೀಕರಣ ಪೂರೈಸಿರುವ ತಂಡ ಇನ್ನು ಫೈಟಿಂಗ್ ದೃಶ್ಯಗಳು ಮತ್ತು ಕೆಲ ಸನ್ನಿವೇಶಗಳ ಚಿತ್ರೀಕರಣ ಉಳಿಸಿಕೊಂಡಿದೆ.

ಬೆಂಗಳೂರಿನ ಮಿನರ್ವ ಮಿಲ್ಸ್ ಹತ್ತಿರ ದೊಡ್ಡ ಸೆಟ್ ಹಾಕಲಾಗಿದ್ದು ಅಲ್ಲಿ ಇನ್ನುಳಿದ ಶೆಡ್ಯೂಲ್ ನ ಮೊದಲ ಭಾಗದ ಚಿತ್ರೀಕರಣ ನಡೆಯಲಿದೆ. ಕೆಜಿಎಫ್ ಚಾಪ್ಟರ್ 2 ತಂಡದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಕೆಜಿಎಫ್ ಚಿತ್ರವನ್ನು ಭಾರೀ ಬಜೆಟ್ ನೊಂದಿಗೆ ತಯಾರಿಸಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದೀಗ ಕೆಜಿಎಫ್-2ವನ್ನು ಇನ್ನೂ ಅದ್ದೂರಿಯಾಗಿ ಚಿತ್ರತಂಡ ತಯಾರಿಸುತ್ತಿದ್ದು ಕೋವಿಡ್-19 ಸೋಂಕಿನ ಮಧ್ಯೆ ಸುರಕ್ಷಿತ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ನಡೆಸಲು ತಂಡ ಮುಂದಾಗಿದೆ.

ಅಕ್ಟೋಬರ್ 23ರಂದು ಕೆಜಿಎಫ್ -2 ತೆರೆಗೆ ಬರಲಿದೆ ಎಂದು ಈ ಹಿಂದೆ ಘೋಷಿಸಿದ್ದರೂ ಕೂಡ ಇಂದಿನ ಪರಿಸ್ಥಿತಿಯಿಂದಾಗಿ ಅಂದೇ ತೆರೆಗೆ ಬರಲಿದೆಯೇ ಅಥವಾ ಮುಂದೂಡಲ್ಪಡುತ್ತದೆಯೇ ಎಂದು ಚಿತ್ರತಂಡ ಇನ್ನೂ ತೀರ್ಮಾನಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com