ಹಳೆಯ ಹಾಡುಗಳೆಲ್ಲವನ್ನೂ ತೆಗೆದುಹಾಕಿ ಹೊಸ ನವೀನ ಸಂಗೀತದೊಂದಿಗೆ ಬರುತ್ತಿದೆ 'ರೇಮೋ' ಚಿತ್ರ

ರೇಮೋ ಚಿತ್ರತಂಡ ಉಳಿದಿರುವ ಭಾಗದ ಚಿತ್ರೀಕರಣಕ್ಕೆ ಕಾಯುತ್ತಿದೆ. ಲಾಕ್ ಡೌನ್ ಗೆ ಮೊದಲು ಮಾಡಿಕೊಂಡಿದ್ದ ಸಂಗೀತವನ್ನು ತೆಗೆದುಹಾಕಿ ತಾವು ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೊಸ ಹಾಡುಗಳನ್ನು ಮಾಡುತ್ತಿರುವುದಾಗಿ ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ.
ರೇಮೋ ಚಿತ್ರದ ಸ್ಟಿಲ್
ರೇಮೋ ಚಿತ್ರದ ಸ್ಟಿಲ್

ರೇಮೋ ಚಿತ್ರತಂಡ ಉಳಿದಿರುವ ಭಾಗದ ಚಿತ್ರೀಕರಣಕ್ಕೆ ಕಾಯುತ್ತಿದೆ. ಲಾಕ್ ಡೌನ್ ಗೆ ಮೊದಲು ಮಾಡಿಕೊಂಡಿದ್ದ ಸಂಗೀತವನ್ನು ತೆಗೆದುಹಾಕಿ ತಾವು ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೊಸ ಹಾಡುಗಳನ್ನು ಮಾಡುತ್ತಿರುವುದಾಗಿ ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ.

ಈ ಲಾಕ್ ಡೌನ್ ಸಮಯದಲ್ಲಿ ಜನರ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಸಹಾಯವಾಯಿತು, ಅದರಲ್ಲೂ ಯುವಜನತೆಯ ಆಸಕ್ತಿಯೇನು ಎಂದು ಗೊತ್ತಾಯಿತು. ಅವರು ಯಾವ ರೀತಿಯ ಸಂಗೀತ ಇಷ್ಟಪಡುತ್ತಾರೆ ಎಂದು ಸಹ ತಿಳಿಯಿತು.

ಹಿಂದೆ ಅರ್ಜುನ್ ಜನ್ಯ ಚಿತ್ರಕ್ಕಾಗಿ ಮಾಡಿದ್ದ ಸಂಗೀತ ಕೆಟ್ಟದಾಗಿತ್ತು ಎಂದಲ್ಲ. ಬದಲಿಗೆ ಜನರಿಗೆ ಹೆಚ್ಚು ಇಷ್ಟವಾಗಲು ಸಂಗೀತಕ್ಕೆ ವಿವಿಧ ಹಂತಗಳಲ್ಲಿ ರೂಪ ಕೊಡಲು ನಿರ್ಧರಿಸಿದೆವು. ಹೊಸ ಆಲೋಚನೆ, ಹೊಸ ಸಂಗೀತ ನಿರ್ದೇಶನ ಮಾಡಿದ್ದೇವೆ ಎಂದು ರೇಮೋ ಚಿತ್ರಕ್ಕೆ ಮಾಡಿರುವ ಹೊಸ ಸಂಗೀತದ ಬಗ್ಗೆ ಹೇಳುತ್ತಾರೆ. ಚಿತ್ರದಲ್ಲಿ ಆರು ಹಾಡುಗಳಿವೆಯಂತೆ.

ಸಂಗೀತಕ್ಕೆ ಹೊಸ ಇನ್ಸ್ಟ್ರುಮೆಂಟ್ ಗಳೊಂದಿಗೆ ಪ್ರಯೋಗ ಮಾಡುತ್ತಿದ್ದು ಅದರಲ್ಲಿ ಹೊಸ ಹಾಡುಗಾರರಿರುತ್ತಾರೆ. ಪ್ರದ್ಯುಮ್ನ ನರಹರಿ ಗೀತೆ ಬರೆದಿದ್ದಾರೆ. ಕೊರೋನಾ ಇಲ್ಲದಿದ್ದರೆ ರೇಮೋ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗುತ್ತಿತ್ತು ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್. ಈ ಚಿತ್ರದಲ್ಲಿ ಆಶಿಕಾ ಮತ್ತು ಇಶಾನ್ ನಾಯಕಿ-ನಾಯಕ.

ಸಿ ಆರ್ ಮನೋಹರ್ ನಿರ್ಮಾಣದ ಚಿತ್ರದಲ್ಲಿ ಶರತ್ ಕುಮಾರ್, ಮಧು ಸಹ ನಟಿಸಿದ್ದಾರೆ. ವೈಧಿ ಅವರ ಕ್ಯಾಮರಾ, ಕಾರುಣ್ಯ ರಾಮ್ ಅವರ ಅತಿಥಿ ಪಾತ್ರವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com