ಅಯೋಧ್ಯೆಯಲ್ಲಿ ರಾಮಮಂದಿರ: ಸ್ಯಾಂಡಲ್ ವುಡ್ ನಟಿ ರಮ್ಯಾ ಪ್ರತಿಕ್ರಿಯೆ ಇದು
ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ನ ಸಾಮಾಜಿಕ ಮಾದ್ಯಮ ಮಾಜಿ ನಿರ್ವಾಹಕಿ ರಮ್ಯಾ ಮತ್ತೆ ಸಾಮಾಜಿಕ ತಾಣದಲ್ಲಿ ಸಕ್ರಿಯವಾಗಿದ್ದಾರೆ. ಇದೀಗ ಅವರು ಅಯೋಧ್ಯೆಯ ರಾಮಮಂದಿರದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆಯುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
Published: 07th August 2020 04:03 PM | Last Updated: 07th August 2020 04:10 PM | A+A A-

ನಟಿ ರಮ್ಯಾ
ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ನ ಸಾಮಾಜಿಕ ಮಾದ್ಯಮ ಮಾಜಿ ನಿರ್ವಾಹಕಿ ರಮ್ಯಾ ಮತ್ತೆ ಸಾಮಾಜಿಕ ತಾಣದಲ್ಲಿ ಸಕ್ರಿಯವಾಗಿದ್ದಾರೆ. ಇದೀಗ ಅವರು ಅಯೋಧ್ಯೆಯ ರಾಮಮಂದಿರದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆಯುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
"ರಾಮಮಂದಿರ ನಿರ್ಮಾಣ ಪ್ರಾರಂಭವಾಗಿದೆ ಎಂದು ಹಿಂದೂಗಳು ಆನಂದದಿಂದಿದ್ದಾರೆ. ನನಗೆ ಸಹ ಖುಷಿಯಾಗಿದೆ. ಮಸೀದಿ ನಿರ್ಮಾಣ ಪ್ರಾರಂಭ ಆದಾಗ ಮುಸ್ಲಿಮರು ಸಹ ಆನಂದ ಪಡುತ್ತಾರೆ. ಆಗಲೂ ನಾನು ಖುಷಿ ಪಡುತ್ತೇನೆ. ಆದರೆ ಸದಾ ಸಂತಸದಿಂದಿರಲು, ದೇವರನ್ನು ಕಾಣಲು ಮಂದಿರ, ಮಸೀದಿಗಳೇ ಬೇಕಾಗಿಲ್ಲ ಎನ್ನುವುದನ್ನು ಜನರು ಅರಿತ ವೇಳೆ ನನಗೆ ಅತ್ಯಂತ ಹೆಚ್ಚು ಖುಷಿ ಆಗಲಿದೆ." ನಟಿ ಹೇಳಿದ್ದಾರೆ.
ಸರಿ ಸುಮಾರು ಒಂದು ವರ್ಷದಿಂದ ಸಾಮಾಜಿಕ ತಾಣದಿಂದ ದೂರ ಉಳಿದಿದ್ದ ನಟಿ ರಮ್ಯಾ ಅಯೋಧ್ಯೆ ರಾಮಮಂದಿರ ಭೂಮಿ ಪೂಜೆ ನಡೆದ ಎರಡು ದಿನಗಳ ನಂತರ ಅದರ ಬಗ್ಗೆ ಪ್ರತಿಕ್ರಯಿಸುವ ಮೂಲಕ ಮತ್ತೆ ಸುದ್ದಿಯ ಮುನ್ನೆಲೆಗೆ ಬರುತ್ತಿದ್ದಾರೆ. "ದೇವರು ನಮ್ಮಲ್ಲಿಯೇ ಇದ್ದಾನೆ" ಎಂದು ಸಾಮರಸ್ಯದ ಸಂದೇಶ ಸಾರಿರುವ ರಮ್ಯಾ ಎಲ್ಲಾ ಜಾತಿ ಮತಗಳ, ಧರ್ಮದವರ ಮನ ಗೆಲ್ಲಲು ಮುಂದಾಗಿದ್ದಾರೆ.