'6 ಕಮರ್ಷಿಯಲ್ ಸಿನಿಮಾಗಳ ತಯಾರಿಕೆಗೆ ಬೇಕಾಗುವ ಸಮಯ ಒಂದು ಐತಿಹಾಸಿಕ ಚಿತ್ರಕ್ಕೆ ಬೇಕು'

ದರ್ಶನ್ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಆಗಿ ಆಗಸ್ಟ್ 9ಕ್ಕೆ ಒಂದು ವರ್ಷವಾಗಿದ್ದು, ನಟ ದರ್ಶನ್ ಅಭಿಮಾನಿಗಳು ವರ್ಷಾಚರಣೆ ಸಂಭ್ರಮಾಚರಣೆಯಲ್ಲಿದ್ದಾರೆ.
ದರ್ಶನ್
ದರ್ಶನ್

ದರ್ಶನ್ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಆಗಿ ಆಗಸ್ಟ್ 9ಕ್ಕೆ ಒಂದು ವರ್ಷವಾಗಿದ್ದು, ನಟ ದರ್ಶನ್ ಅಭಿಮಾನಿಗಳು ವರ್ಷಾಚರಣೆ ಸಂಭ್ರಮಾಚರಣೆಯಲ್ಲಿದ್ದಾರೆ.

ನಾಗಣ್ಣ ನಿರ್ದೇಶನದ 50ನೇ ಚಿತ್ರ ಕುರುಕ್ಷೇತ್ರ ಸಿನಿಮಾವನ್ನು ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿರುವ ದರ್ಶನ್ ಮೊದಲ ಕ್ರೆಡಿಟ್ ಅನ್ನು ನಿರ್ಮಾಪಕರಿಗೆ ನೀಡಿದ್ದಾರೆ, ಮುನಿರತ್ನ ಅವರು ನಿರ್ಮಾಪಕರಾಗದಿದ್ದರೇ ಕುರುಕ್ಷೇತ್ರ ಸಿನಿಮಾ  ತಯಾರಾಗುತ್ತಿರಲಿಲ್ಲ,  ಹೀಗಾಗಿ ಕುರುಕ್ಷೇತ್ರದ ನಿಜವಾದ ಹೀರೋ ಮುನಿರತ್ನ ಅವರೇ ಆಗಿದ್ದಾರೆ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ದರ್ಶನ್ ಕಮರ್ಷಿಯಲ್ ಸ್ಟಾರ್ ಎಂದೇ ಪ್ರಸಿದ್ದರಾಗಿದ್ದಾರೆ, ಅದರ ಜೊತೆಗೆ ಐತಿಹಾಸಿಕ ಮಕ್ಕು ಪೌರಾಣಿಕ ಸಿನಿಮಾಗಳಿಗೂ ದರ್ಶನ್ ಅವರ ಬೇಡಿಕೆಯಿದೆ, 2012ರ ರಲ್ಲಿ ಸಂಗೊಳ್ಳಿ ರಾಯಣ್ಣ ಸಿನಿಮಾ ನಂತರ ಮತ್ತೆ ಮದಕರಿ ನಾಯಕನಿಗಾಗಿ  ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ.

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ವೀರಮದಕರಿ ಸಿನಿಮಾ ರಾಕ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ, ಕೊರೋನಾ ಸಾಂಕ್ರಾಮಿಕ ರೋಗ ನಿವಾರಣೆಯಾಗಲು ಚಿತ್ರತಂಡ ಕಾಯುತ್ತಿದ್ದು ಶೂಟಿಂಗ್ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. 

ದರ್ಶನ್ ಐತಿಹಾಸಿಕ ಸಿನಿಮಾಗಾಗಿ ತರುಣ್ ಸುಧೀರ್ ಚಿತ್ರಕಥೆ ಬರೆಯುತ್ತಿದ್ದಾರೆ. ಎಸ್ ಉಮಾಪತಿ, ದರ್ಶನ್ ಮತ್ತು ತರುಣ್ ಸುಧೀರ್ ರಾಬರ್ಟ್ ನಂತರ ಮತ್ತೆ ಜೊತೆಯಾಗುತ್ತಿದ್ದಾರೆ.

2012 ರಲ್ಲಿ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ ಚಿತ್ರದ ಪೌರಾಣಿಕ ಯೋಧನ ಪಾತ್ರದ ನಂತರ, ಈಗ ವೀರ ಮದಕರಿ ನಾಯಕನ ಪಾತ್ರವನ್ನು ಮಾಡಲು ಅವರು ಎದುರು ನೋಡುತ್ತಿದ್ದಾರೆ. 

ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾಗಳನ್ನು ಪರದೆಯ ಮೇಲೆ ತರುವ ಪ್ರೀತಿ ಹೊಂದಿರುವ ನಿರ್ದೇಶಕ ಜೊತೆಗೆ ನಾನು ಭಾಗವಾಗಿರುತ್ತೇನೆ ಎಂದು ದರ್ಶನ್ ಹೇಳಿದ್ದಾರೆ. 

ಅಂತಹ ಚಿತ್ರಗಳಲ್ಲಿ ನಟಿಸುವುದು ಸಾಮಾನ್ಯ ಕೆಲಸವಲ್ಲ, ಒಂದು ಐತಿಹಾಸಿಕ ಸಿನಿಮಾ ಮಾಡಬೇಕೆಂದರೇ ಆರು ಕಮರ್ಷಿಯಲ್ ಸಿನಿಮಾಗಳಿಗೆ ಬೇಕಾದಷ್ಟು ಸಮಯ ಬೇಕಾಗುತ್ತದೆ ಎಂದು ದರ್ಶನ್ ತಿಳಿಸಿದ್ದಾರೆ.

ಅಪಾರ ಪ್ರಮಾಣದ ವರ್ಕೌಟ್ ಮಾಡಬೇಕಾಗುತ್ತದೆ, ಹೀಗಾಗಿ ನನ್ನ ಮೇಲೆ ಜಾವಾಬ್ದಾರಿಯಿರುತ್ತದೆ, ರಾಜ್ ಕುಮಾರ್ ಮತ್ತು ಹಿರಿಯ ನಟರು ಅಭಿನಯಿಸಿದ ಇಂತಹ ಚಿತ್ರಗಳನ್ನು ನಾನು ವೀಕ್ಷಿಸುತ್ತೇನೆ, ಅದನ್ನು ನೋಡಿ ನಾನು ಕೂಡ ಹಾಗೆಯೇ ಕನ್ನಡಿ ಮುಂದೆ ನಿಂತು ಅಭ್ಯಾಸ ಮಾಡುತ್ತೇನೆ, ನನಗೆ ಆ ಪಾತ್ರ ಸರಿ ಹೊಂದುತ್ತದೆಯೆ ಎಂದು ಪರಿಶೀಲನೆ ಮಾಡುತ್ತೇನೆ, ಒಂದು ವೇಳೆ ಆ ಪಾತ್ರ ನನಗೆ ಹೊಂದುತ್ತದೆ ಎಂದಾದರೇ ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ ಎಂದು ದರ್ಶನ್ ತಿಳಿಸಿದ್ದಾರೆ.

ನನ್ನ ಸ್ವಂತ ಮಗ ಮತ್ತು ಆ ವಯಸ್ಸಿನ ಮಕ್ಕಳ ಉದಾಹರಣೆಯನ್ನು ತೆಗೆದುಕೊಳ್ಳಲು ನಾನು ಬಯಸುತ್ತೇನೆ. ಪಾತ್ರಗಳ ಮೂಲಕ ಇತಿಹಾಸ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕೇವಲ ಎರಡು ಸಾಲುಗಳಲ್ಲಿ ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಇತಿಹಾಸವನ್ನು ಬಹಳ ಆಳವಾಗಿ ತಿಳಿದುಕೊಳ್ಳಬೇಕು, ಜೊತೆಗೆ ಪಾತ್ರಕ್ಕೆ ನ್ಯಾಯ ಒದಗಿಸಬೇಕು, ಇಂತ ಸಿನಿಮಾಗಳು ಮುಂದಿನ ಪೀಳಿಗೆಗೆ ಉಪಯೋಗವಾಗುವಂತಿರಬೇಕು ಎಂದು ದರ್ಶನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com