ಶಿವಮೊಗ್ಗ: ನಟ ವಿಜಯ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿ ಬಂಕ್ ಸಿಬ್ಬಂದಿ ಎಡವಟ್ಟು!

ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಅವರು ಉದ್ದಕ್ಕಿದ್ದಂತೆ ತಮ್ಮ ಪೆಟ್ರೋಲ್ ಬಂಕ್ ಗೆ ಬಂದು ಪೆಟ್ರೋಲ್ ಹಾಕಲು ಹೇಳಿದ್ದನ್ನು ಕಂಡ ಪೆಟ್ರೋಲ್ ಬಂಕ್ ಸಿಬ್ಬಂದಿ ಒಬ್ಬರು ಅತಿಯಾದ  ಉತ್ಸಾಹದಿಂದ ನಟನ ಕಾರಿಗೆ ಪೆಟ್ರೋಲ್ ಬದಲಿಗೆ ಡೀಸೆಲ್ ತುಂಬಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪೆಟ್ರೋಲ್ ಬಂಕ್ . ಸಿಬ್ಬಂದಿಯ ಅವಿವೇಕದ ನಡೆಯಿಂದ ನಟ ಹಾಗೂ ಆತನ ಕುಟುಂಬ  ಬೇರೆ ಕಾರ

Published: 11th August 2020 08:28 PM  |   Last Updated: 11th August 2020 08:28 PM   |  A+A-


Posted By : Raghavendra Adiga
Source : The New Indian Express

ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಅವರು ಇದ್ದಕ್ಕಿದ್ದಂತೆ ತಮ್ಮ ಪೆಟ್ರೋಲ್ ಬಂಕ್ ಗೆ ಬಂದು ಪೆಟ್ರೋಲ್ ಹಾಕಲು ಹೇಳಿದ್ದನ್ನು ಕಂಡ ಪೆಟ್ರೋಲ್ ಬಂಕ್ ಸಿಬ್ಬಂದಿ ಒಬ್ಬರು ಅತಿಯಾದ  ಉತ್ಸಾಹದಿಂದ ನಟನ ಕಾರಿಗೆ ಪೆಟ್ರೋಲ್ ಬದಲಿಗೆ ಡೀಸೆಲ್ ತುಂಬಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪೆಟ್ರೋಲ್ ಬಂಕ್ . ಸಿಬ್ಬಂದಿಯ ಅವಿವೇಕದ ನಡೆ ನಟ ಹಾಗೂ ಆತನ ಕುಟುಂಬ  ಬೇರೆ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುವಂತೆ ಮಾಡಿದೆ.

ವಿಜಯ ರಾಘವೇಂದ್ರ ಹಾಗೂ ಅವರ ಕುಟುಂಬ ಸಾಗರ ತಾಲೂಕಿನ  ಜೋಗ್ ಫಾಲ್ಸ್‌ಗೆ ಪ್ರವಾಸ ಹೋಗಿದ್ದರು ಎಂದು ಮೂಲಗಳು ಹೇಳಿದೆ. ಬೆಂಗಳೂರಿಗೆ ಹಿಂದಿರುಗುವಾಗ ನಟ ಪೆಟ್ರೋಲ್ ತುಂಬಲು ತನ್ನ ಕಾರನ್ನು ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿದ್ದಾರೆ. ಆಗ ಸಿಬ್ಬಂದಿಯೊಬ್ಬರು ನಟನನ್ನು ಗುರುತಿಸಿದ್ದು ತಕ್ಷಣ ಉತ್ಸಾಹದಿಂದ, ಸಂತಸದಿಂದ ಉಬ್ಬಿ ಹೋಗಿದ್ದಾನೆ,  ಆದರೆ ಇದೇ ಉತ್ಸಾಹದಲ್ಲಿ ಅವರು ಕಾರಿಗೆ ಪೆಟ್ರೋಲ್ ಬದಲಾಗಿ ಡೀಸೆಲ್ ತುಂಬಿಸಿದ್ದಾರೆ.

ಇದಾದ ನಂತರ ನಂತರ, ಪೆಟ್ರೋಲ್ ಬಂಕ್ ಮಾಲೀಕರು ಮಧ್ಯಪ್ರವೇಶಿಸಿ ನಟ ಮತ್ತು ಅವರ ಕುಟುಂಬವನ್ನು ಮತ್ತೊಂದು ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸಿದರು.

ವಿಜಯ ರಾಘವೇಂದ್ರ ಅವರ ಕಾರನ್ನು ದುರಸ್ತಿ ಮತ್ತು ಸರ್ವೀಸ್ ಗಾಗಿ ಇರಿಸಿಕೊಳ್ಳಲಾಗಿದ್ದು ಪತ್ರಿಕೆ ಈ ಬಗ್ಗೆ ನಟ ವಿಜಯ ರಾಘವೇಂದ್ರ ಅವರನ್ನು ಮಾತನಾಡಿಸಿದಾಗ ಅವರು ಘಟನೆಯಿಂದ ಅಸಮಾಧಾನ ಹೊಂದಿರುವುದು ಪತ್ತೆಯಾಗಿದೆ, ಅಲ್ಲದೆ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ, 

Stay up to date on all the latest ಸಿನಿಮಾ ಸುದ್ದಿ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp