'ಯುವರತ್ನ'ನ ನಾಯಕಿ ಸಾಯೇಷಾ ಸೈಗಲ್ ಲುಕ್ ರಿವೀಲ್!

ಪುನೀತ್ ರಾಜ್ ಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾಗಿದೆ.

Published: 12th August 2020 12:27 PM  |   Last Updated: 12th August 2020 12:31 PM   |  A+A-


Saiyesha Saigal(File photo)

ಸಾಯೇಷಾ ಸೈಗಲ್(ಸಂಗ್ರಹ ಚಿತ್ರ)

Posted By : Sumana Upadhyaya
Source : Online Desk

ಪುನೀತ್ ರಾಜ್ ಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾಗಿದೆ.

ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಲುಕ್ ನ್ನು ಬಹಿರಂಗಪಡಿಸಿದ್ದ ಚಿತ್ರತಂಡ ನಾಯಕಿಯ ಒಂದು ಲುಕ್ ನ್ನು ಸಹ ತೋರಿಸಿರಲಿಲ್ಲ ಮತ್ತು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಇದೀಗ ಆ ಕಾಯುವಿಕೆಗೆ ಬ್ರೇಕ್​ ಬಿದ್ದಿದೆ. ಚಿತ್ರದ ನಾಯಕಿ ಸಾಯೇಷಾ ಸೈಗಲ್​ ಫಸ್ಟ್ ಲುಕ್​ ರಿಲೀಸ್ ಮಾಡಿದೆ ಯುವರತ್ನ ತಂಡ.

ಅಂದಹಾಗೆ, ಇಂದು ನಟಿ ಸಾಯೇಷಾ ಸೈಗಲ್​ ಜನ್ಮದಿನ. ಆ ಪ್ರಯುಕ್ತ ಅವರ ಲುಕ್​ ಬಿಡುಗಡೆ ಮಾಡಿ ಜನ್ಮದಿನಕ್ಕೆ ಶುಭಕೋರಿದ್ದಾರೆ ನಿರ್ದೇಶಕ ಸಂತೋಷ್ ಆನಂದ್​ರಾಮ್​. ಮುಂಬೈ ಮೂಲದ ಸಾಯೇಷಾ, ಬಾಲಿವುಡ್​ ಸೇರಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ‘ಯುವರತ್ನ’ ಮೂಲಕ ಕನ್ನಡಕ್ಕೆ ಆಗಮಿಸಿದ್ದಾರೆ.

ಯುವರತ್ನ ಚಿತ್ರದಲ್ಲಿ ನಾಯಕಿ ಸಾಯೇಷಾ ಹೆಸರು ವಂದನಾ ಎಂದು, ಚಿತ್ರದ ತಾರಾಗಣದಲ್ಲಿ ದಿಗಂತ್​, ಧನಂಜಯ್​, ಸೋನು ಗೌಡ ಸೇರಿ ಹಲವು ಕಲಾವಿದರಿದ್ದು, ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್​ ಕಿರಗಂದೂರು ನಿರ್ಮಿಸುತ್ತಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp