ಪ್ರಥಮ ಬಾರಿಗೆ ಎಟಿಟಿಯಲ್ಲಿ ‘ದಿ ಪೈಂಟರ್’ ಕನ್ನಡ ಚಿತ್ರ ಬಿಡುಗಡೆ

ಕೋವಿಡ್ ಸಂದರ್ಭದಲ್ಲಿಯೂ ಹೊಸ ಕನ್ನಡ ಚಿತ್ರ “ದಿ ಪೈಂಟರ್” ನಾಡಿದ್ದು,(ಆಗಸ್ಟ್ 14) ರಾತ್ರಿ 9 ಘಂಟೆಗೆ ಶ್ರೇಯಸ್ ಡಾಟ್ ಕಾಮ್ ಎಟಿಟಿ (ANY TIME THEATER) ಯಲ್ಲಿ ಏಕ ಕಾಲಕ್ಕೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. 
ದಿ ಪೇಂಟರ್

ಕೆಲವು ದಿನಗಳ ಹಿಂದೆ ಉಗ್ರಂ ರೋರಿಂಗ್ ಸ್ಟಾರ್ ಶ್ರೀಮುರಳಿ ಯವರು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಸಾಮಾಜಿಕ ತಾಣದಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ. 

ವೆಂಕಟ್ ಭಾರದ್ವಾಜ್ ನಿರ್ದೇಶನ, ನಟನೆಯ ಈ ಚಿತ್ರ ಎಟಿಟಿಯಲ್ಲಿ ತೆರೆ ಕಾಣುತ್ತಿರುವ  ಪ್ರಥಮ ಕನ್ನಡ ಚಿತ್ರವಾಗಿದೆ, 

ರಾಜ್ ಕಮಲ್ , ಶಿನವ್ , ವೆಂಕಟ್ ಶಾಸ್ತ್ರಿ, ಶಮೀಕ್, ಕಬೀರ್ , ಉಮಾ, ಮಧುರ, ಶಮಾ ಮಣಿಮಾರನ್ ಇನ್ನೂ ಮೊದಲಾದವರು ಅಭಿನಯಿಸಿರುವ ಈ ಚಿತ್ರ ಕ್ಕೆ ಚಂದನ್​. ಪಿ ಅವರ ಸಂಕಲನ, ಲವ್ ಪ್ರಾಣ್ ಮೆಹ್ತಾ ಸಂಗೀತವಿದೆ,  ರಾಜ್​ಕಮಲ್ ನಿರ್ಮಾಣದ ಚಿತ್ರವನ್ನು  ಪ್ಲೇ ಸ್ಟೋರ್ ನಲ್ಲಿ  Shreyaset.com ATTಯನ್ನು ಡೌನ್​​​​​​​​ಲೋಡ್ ಮಾಡಿ 50 ರೂಪಾಯಿ ಪಾವತಿಸಿದರೆ ವೀಕ್ಷಿಸಬಹುದಾಗಿದೆ, 

ಇನ್ನು ಈ ಚಿತ್ರದ ಆದಾಯದಲ್ಲಿ ಶೇ.20 ರಷ್ಟನ್ನು ಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ನೀಡಲು ಚಿತ್ರತಂಡ ತೀರ್ಮಾನಿಸಿದೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com