'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಸಿನಿಮಾದಲ್ಲಿ ಧ್ರುವನ್

ಕೃಷ್ಣ ಜನ್ಮಾಷ್ಟಮಿ ದಿನದಂದು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾ ತಂಡಕ್ಕೆ ನಟ ದರ್ಶನ್​ ಶುಭ ಹಾರೈಸಿದ್ದಾರೆ. ಪಾರ್ವತಮ್ಮ ರಾಜ್​ಕುಮಾರ್ ಸಹೋದರನ ಪುತ್ರನಾದ ಧ್ರುವನ್ ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

Published: 13th August 2020 01:07 PM  |   Last Updated: 13th August 2020 01:19 PM   |  A+A-


Actor Darshan and team

ಧ್ರುವನ್ ಸಿನಿಮಾಗೆ ದರ್ಶನ್ ಹಾರೈಕೆ

Posted By : Shilpa D
Source : The New Indian Express

ಬೆಂಗಳೂರು: ಕೃಷ್ಣ ಜನ್ಮಾಷ್ಟಮಿ ದಿನದಂದು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾ ತಂಡಕ್ಕೆ ನಟ ದರ್ಶನ್​ ಶುಭ ಹಾರೈಸಿದ್ದಾರೆ. ಪಾರ್ವತಮ್ಮ ರಾಜ್​ಕುಮಾರ್ ಸಹೋದರನ ಪುತ್ರನಾದ ಧ್ರುವನ್ ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ದರ್ಶನ್​ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಧ್ರುವನ್​ ಚೊಚ್ಚಲ ಸಿನಿಮಾಗೆ ನಾಗೇಂದ್ರ ಪ್ರಸಾದ್ ಹಾಗೂ ಡಿ ಭಗವಾನ್ ಆಕ್ಷನ್ ಕಟ್ ಹೇಳ್ತಿದ್ದಾರೆ.

ಭರತ್ ವಿಷ್ಣುಕಾಂತ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದಾರೆ. ಈ ಮೊದಲು ಸೂರಜ್ ಕುಮಾರ್ ಎಂಬ ಹೆಸರಿಟ್ಟುಕೊಂಡಿದ್ದ ಧ್ರುವನ್ ರಘು ಕೋವಿ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕಿತ್ತು, ಈ ಸಿನಿಮಾವನ್ನು ಬಿಎಸ್ ಸುಧೀಂದ್ರ ನಿರ್ಮಿಸುತ್ತಿದ್ದು ಪ್ರಿಯಾ ವಾರಿಯರ್ ನಟಿಸಬೇಕಿತ್ತು, ಕಳೆದ ವರ್ಷದ ನವೆಂಬರ್ ನಲ್ಲಿ ಶಿವರಾಜ್ ಕುಮಾರ್ ಮತ್ತು ದರ್ಶನ್ ಸಮ್ಮುಖದಲ್ಲಿಲಾಂಚ್ ಆಗಿತ್ತು. ಆದರೆ ಸಿನಿಮಾ ಶೂಟಿಂಗ್ ಆರಂಭವಾಗಲೇ ಇಲ್ಲ, ಆ ಸಿನಿಮಾ ಅಪ್ ಡೇಟ್ ಬಗ್ಗೆ ಯಾವುದು ಮಾಹಿತಿಗಳು ಇಲ್ಲ,

ನಾನು ತುಂಬಾ ಸಮಯ ಕಾದದ್ದೆ ಬಂತು. ನಿರ್ಮಾಪಕರ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ, ಹೀಗಾಗಿ ನನ್ನ ಕೆರಿಯರ್ ಆರಂಭಿಸಲು ನಾನು ಮುಂದಾಗಗಿದ್ದೇನೆ, ಭಗವಾನ್ ಶ್ರೀ ಕೃಷ್ಣ ಪರಮಾತ್ಮ ನಿರ್ಮಾಪಕರು ಸ್ಪಷ್ಟತೆ ಹೊಂದಿದ್ದಾರೆ. ಯಾವ ರೀತಿ ಸಿನಿಮಾ ಶೂಟಿಂಗ್ ನಡೆಸಬೇಕೆಂಬ ಪ್ಲಾನ್ ಮಾಡಿದ್ದಾರೆ, ಹಿಂದಿನ ಸಿನಿಮಾ ಪ್ರಾಜೆಕ್ಟ್ ಮುಂದುವರಿಸುವುದು ರಘು ಕೋವಿ ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ಧ್ರುವನ್ ಹೇಳಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp