ಕ್ರೇಜಿಸ್ಟಾರ್ ಮಗ ಎಂಬ ಹಣೆಪಟ್ಟಿ ಮುಖ್ಯವಲ್ಲ, ಸ್ವಂತ ಪ್ರತಿಭೆ ತೋರಿಸಬೇಕು: ವಿಕ್ರಮ್ ರವಿಚಂದ್ರನ್ 

ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಹುಟ್ಟುಹಬ್ಬದ ದಿನವಾದ ನಿನ್ನೆ (ಆಗಸ್ಟ್ 16) ತ್ರಿವಿಕ್ರಮ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿತ್ತು.
ವಿಕ್ರಮ್ ರವಿಚಂದ್ರನ್
ವಿಕ್ರಮ್ ರವಿಚಂದ್ರನ್

ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಹುಟ್ಟುಹಬ್ಬದ ದಿನವಾದ ನಿನ್ನೆ (ಆಗಸ್ಟ್ 16) ತ್ರಿವಿಕ್ರಮ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿತ್ತು.

ಎ2 ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಟೀಸರ್ ನಲ್ಲಿ ವಿಕ್ರಮ್ ರವಿಚಂದ್ರ ನ್ ರನ್ನು ಮಾಸ್ ಅವತಾರದಲ್ಲಿ ತೋರಿಸಲಾಗಿದೆ. ತಮ್ಮ ಮೊದಲ ಚಿತ್ರ ಪಾನ್ ಇಂಡಿಯಾ ಮಟ್ಚದಲ್ಲಿ ತೆರೆಗೆ ಬರುತ್ತಿದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ವಿಕ್ರಮ್.

ಸಹನಾ ಮೂರ್ತಿ ನಿರ್ದೇಶನದ ತ್ರಿವಿಕ್ರಮವನ್ನು ಗೌರಿ ಎಂಟರ್ಟೈನರ್ಸ್ ತಯಾರಿಸುತ್ತಿದ್ದು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗುತ್ತಿದೆ. ಮೊದಲ ಚಿತ್ರವನ್ನೇ ಬಹುಭಾಷೆಗಳಲ್ಲಿ ತರುತ್ತಿರುವ ಬಗ್ಗೆ ಮಾತನಾಡಿರುವ ವಿಕ್ರಮ್ ಇದರ ಕ್ರೆಡಿಟ್ ಎಲ್ಲವೂ ನಿರ್ಮಾಪಕರಿಗೆ ಸಲ್ಲಬೇಕು ಎನ್ನುತ್ತಾರೆ. 

ನನಗೆ ಇದು ಸಂಪೂರ್ಣವಾಗಿ ಕನ್ನಡದಲ್ಲಿಯೇ ತೆರೆಗೆ ಬರಬೇಕು ಎನಿಸುತ್ತಿತ್ತು. ಆದರೆ ಚಿತ್ರಕ್ಕೆ ಸಿಗುತ್ತಿರುವ ಬೇಡಿಕೆ ನೋಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತರುವ ಆಲೋಚನೆ ಹೊಂದಿದ್ದಾರೆ ನಿರ್ಮಾಪಕರು. ನನಗೆ ಮೊದಲೇ ಗೊತ್ತಾಗುತ್ತಿದ್ದರೆ ನಿರ್ದಿಷ್ಟ ದೃಶ್ಯ ಮತ್ತು ಪರಿಸ್ಥಿತಿಗನುಗುಣವಾಗಿ ಆಯಾ ಭಾಷೆಗಳ ಸ್ಥಳೀಯತೆಗೆ ತಕ್ಕಂತೆ ಅಭಿನಯಿಸಲು ಸಹಾಯವಾಗುತ್ತಿತ್ತು. ಅದರಿಂದ ಎಲ್ಲಾ ಭಾಷಿಕರಿಗೆ ಬೇಗನೆ ಹಿಡಿಸುತ್ತದೆ. ಆದರೂ ನನಗೆ ಖುಷಿಯಿದೆ, ಅಷ್ಟಕ್ಕೂ ಇದು ಜೂಜಾಟವಿದ್ದಂತೆ ಎನ್ನುವ ವಿಕ್ರಮ್ ರವಿಚಂದ್ರನ್ ಇದೇ ನಿರ್ದೇಶಕರು ಮತ್ತು ನಿರ್ಮಾಣ ತಂಡದ ಜೊತೆ ಇನ್ನೊಂದು ಚಿತ್ರ ಮಾಡುವ ಸುಳಿವು ನೀಡಿದ್ದಾರೆ.

ತಂದೆ ರವಿಚಂದ್ರನ್ ಜೊತೆಗೆ ಕೆಲಸ ಮಾಡಿ ಅನುಭವ ಹೊಂದಿರುವ ವಿಕ್ರಮ್ ರವಿಚಂದ್ರನ್ ಬೇರೊಬ್ಬ ನಿರ್ದೇಶಕರ ಜೊತೆ ಕೆಲಸ ಮಾಡುವ ಅನುಭವ ಬಗ್ಗೆ ಹೇಳುವುದು ಹೀಗೆ: ಆರಂಭದಲ್ಲಿ ಬೇರೆಯವರ ಜೊತೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿತ್ತು. ಸಹನಾ ಮೂರ್ತಿಯವರ ಜೊತೆ ಬಾಂಧವ್ಯ ಉತ್ತಮವಾಗಿ ಬೆಳೆಸಿಕೊಂಡೆ, ಇದರಿಂದ ಶೂಟಿಂಗ್ ಆರಂಭವಾಗುವ ಹೊತ್ತಿಗೆ ಸೋದರನ ಭಾವನೆ ಬೆಳೆಯಿತು, ಇದು ಸೆಟ್ ನಲ್ಲಿ ಕೆಲಸ ಮಾಡಲು ಸಹಾಯವಾಯಿತು ಎನ್ನುತ್ತಾರೆ.

ಕ್ರೇಜಿ ಸ್ಟಾರ್ ಪುತ್ರನಾಗಿ ಅವರ ಕೀರ್ತಿ, ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವುದು ಮುಖ್ಯ, ಸ್ಟಾರ್ ಮಗ ಎಂಬ ಭಾವನೆ ಇಲ್ಲ, ನನ್ನ ತಂದೆಯವರ ಮಾತು ಕೇಳುತ್ತೇನೆ, ಕಲಾವಿದರಾಗಿ ನಿರ್ದೇಶಕ ಹೇಳಿದಂತೆ ಕೇಳಬೇಕು, ಅವರ ದೃಷ್ಟಿಕೋನದಂತೆ ನಾವು ಕೆಲಸ ಮಾಡಬೇಕು ಎನ್ನುತ್ತಾರೆ ತಂದೆ. ಅದನ್ನು ನಾನು ಪಾಲಿಸಿಕೊಂಡು ಹೋಗುತ್ತೇನೆ, ಕ್ರೇಜಿ ಸ್ಟಾರ್ ಮಗ ಎಂದಾಕ್ಷಣ ಜನ ಅಪಾರವಾದದ್ದನ್ನು ನಿರೀಕ್ಷಿಸುತ್ತಾರೆ, ಇಲ್ಲಿ ನನ್ನ ಸ್ವಂತ ಪ್ರತಿಭೆ, ಶ್ರಮ ತೋರಿಸಬೇಕು ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com