ಪ್ರಭಾಸ್ 3ಡಿ ಮಹಾಕಾವ್ಯ ಆದಿ ಪುರುಷ್ ಗೆ ಕಾರ್ತಿಕ್ ಪಳನಿ ಛಾಯಾಗ್ರಹಣ

ಕೀರ್ತಿ ಸುರೇಶ್ ನಟನೆಯ ಪೆಂಗ್ವಿನ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ಕಾರ್ತಿಕ್, ಹಿಂದಿ ಸಿನಿಮಾಗಳಾದ ಲವ್ ಶಗುನ್, ಜೀನತ್ ಮತ್ತು ಕನ್ನಡದ ಪ್ರೆಂಚ್ ಬಿರಿಯಾನಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

Published: 21st August 2020 12:35 PM  |   Last Updated: 21st August 2020 12:35 PM   |  A+A-


adipurush

ಆದಿ ಪುರುಷ್

Posted By : shilpa
Source : The New Indian Express

ಪ್ರಭಾಸ್ ನಟನೆಯ ಬಿಗ್ ಬಜೆಟ್ ಸಿನಿಮಾ ಆದಿ ಪುರುಷ್ ಗೆ ಕಾರ್ತಿಕ್ ಪಳನಿ ಕ್ಯಾಮೆರಾ ವರ್ಕ್ ಮಾಡಲಿದ್ದಾರೆ.

ಕೀರ್ತಿ ಸುರೇಶ್ ನಟನೆಯ ಪೆಂಗ್ವಿನ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ಕಾರ್ತಿಕ್, ಹಿಂದಿ ಸಿನಿಮಾಗಳಾದ ಲವ್ ಶಗುನ್, ಜೀನತ್ ಮತ್ತು ಕನ್ನಡದ ಪ್ರೆಂಚ್ ಬಿರಿಯಾನಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಹಿರಿಯ ಛಾಯಾಗ್ರಾಹಕ ತಿರ್ರು ಅವರ ಸಹಾಯಕರಾಗಿ ಕಾರ್ತಿಕ್ ಕೆಲಸ ಮಾಡಿ ಅನುಭವವಿದೆ. ಆದಿ ಪುರುಷ್ ಸಿನಿಮಾ ಇನ್ನೂ ಆರಂಭದ ಹಂತದಲ್ಲಿದ್ದು, ಇನ್ನೂ ಪ್ರೀ ಪ್ರೊಡಕ್ಷನ್ ಕೆಲಸ ಆರಂಭವಾಗಿಲ್ಲ,ವಿಭಿನ್ನ ದೃಷ್ಟಿಯಲ್ಲಿ ಸಿನಿಮಾದ ಬಗ್ಗೆ ಇನ್ನೂ ಚರ್ಚೆಯಾಗಬೇಕಿದೆ, ಹೀಗಾಗಿ ಜನವರಿಯಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ.

ತಾನಾಜಿ ನಿರ್ದೇಶಕ ಓಂ ರಾವತ್ ರೆಟ್ರೋಫೈಲ್ಸ್ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗಲಿದೆ. ಕ್ರಿಶನ್ ಕುಮಾರ್, ಪ್ರಸಾದ್ ಸುತಾರ್ ಮತ್ತು ರಾಜೇಶ್ ನಾಯರ್ ಸಹ ನಿರ್ಮಾಪಕರಾಗಿ ತೊಡಗಿಸಿಕೊಂಡಿದ್ದಾರೆ.

ಅದ್ದೂರಿ ಸೆಟ್‌ಗಳು, ಅದ್ಭುತ ಆಕ್ಷನ್ ಸನ್ನಿವೇಶಗಳು ಮತ್ತು ಸಾಟಿಯಿಲ್ಲದ ವಿಎಫ್‌ಎಕ್ಸ್ ಕೆಲಸಗಳೊಂದಿಗೆ ಅದಿಪುರುಷ್ ಭವ್ಯವಾದ ನಿರ್ಮಾಣವೆಂದು ರಾವತ್ ಹೇಳಿದ್ದಾರೆ.

ಇದನ್ನು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತದೆ ಮತ್ತು ನಂತರ ಮಲಯಾಳಂ, ತಮಿಳು, ಕನ್ನಡ ಮತ್ತು ಇತರ ವಿದೇಶಿ ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ.


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp