ಶೀಘ್ರವೇ ಜ್ಯೂನಿಯರ್ ಯಶ್ ಗೆ ನಾಮಕರಣ: ರಾಧಿಕಾ ಪಂಡಿತ್
ಸ್ಯಾಂಡಲ್ ವುಡ್ ರಾಕಿಂಗ್ ದಂಪತಿ ಯಶ್, ರಾಧಿಕಾ ಅವರಂತೆ ಅವರ ಮುದ್ದು ಮಕ್ಕಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹವಾ ಮಾಡಿದ್ದಾರೆ.
ಮಗಳಿಗೆ ಆಯ್ರಾ ಎಂದು ಹೆಸರಿಟ್ಟಿರುವ ಯಶ್ ದಂಪತಿ, ಇದೀಗ ತಮ್ಮ ಪುತ್ರನಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ.
Published: 24th August 2020 03:16 PM | Last Updated: 24th August 2020 03:16 PM | A+A A-

ಜ್ಯೂನಿಯರ್ ಯಶ್
ಸ್ಯಾಂಡಲ್ ವುಡ್ ರಾಕಿಂಗ್ ದಂಪತಿ ಯಶ್, ರಾಧಿಕಾ ಅವರಂತೆ ಅವರ ಮುದ್ದು ಮಕ್ಕಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹವಾ ಮಾಡಿದ್ದಾರೆ.
ಮಗಳಿಗೆ ಆಯ್ರಾ ಎಂದು ಹೆಸರಿಟ್ಟಿರುವ ಯಶ್ ದಂಪತಿ, ಇದೀಗ ತಮ್ಮ ಪುತ್ರನಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ.
ಮಗುವಿಗೆ ನಾಮಕರಣ ಮಾಡದ ಹಿನ್ನಲೆಯಲ್ಲಿ ಜ್ಯೂನಿಯರ್ ಯಶ್ ಎಂತಲೇ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದರು. ಬೇಗ ಪುತ್ರನಿಗೆ ಹೆಸರಿಡಿ ಎಂದು ಮಗುವಿನ ಫೋಟೋಗೆ ಕಮೆಂಟ್ ಮಾಡುವ ಮೂಲಕ ಅಭಿಮಾನಿಗಳು ದುಂಬಾಲು ಬೀಳುತ್ತಿದ್ದರು. ಇದಕ್ಕೆ ಉತ್ತರ ಎಂಬತೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಜ್ಯೂನಿಯರ್ ಯಶ್ ಗೆ ಶೀಘ್ರವೇ ನಾಮಕರಣ ನೆರವೇರಿಸುತ್ತೇವೆ ಎಂದು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.
2019ರ ಅಕ್ಟೋಬರ್ 30ರಂದು ರಾಧಿಕಾ ಪಂಡಿತ್ ಫೋರ್ಟಿಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾಗಿ ಆರು ತಿಂಗಳ ಬಳಿಕ ಏಪ್ರಿಲ್ 30 ರಂದು ಯಶ್ ಮತ್ತು ರಾಧಿಕಾ ಸಾಮಾಜಿಕ ತಾಣಗಳಲ್ಲಿ ಜ್ಯೂನಿಯರ್ ಯಶ್ ಚಿತ್ರವನ್ನು ಹಂಚಿಕೊಂಡಿದ್ದರು. ಅಲ್ಲದೆ ಇತ್ತೀಚೆಗೆ ನಡೆದ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಯಶ್-ರಾಧಿಕಾ ದಂಪತಿ ತಮ್ಮಿಬ್ಬರು ಮಕ್ಕಳಿಗೆ ರಾಧೆ-ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ್ದರು.