‘ಕೋಲು ಮಂಡೆ ಜಂಗಮ' ಹಾಡಿಗೆ ರ‍್ಯಾಪ್ ಟಚ್: ಧಾರ್ಮಿಕ ಭಾವನೆಗಳ ಧಕ್ಕೆಗೆ ಆಕ್ರೋಶ, ಕ್ಷಮೆ ಕೇಳಿದ ಚಂದನ್ ಶೆಟ್ಟಿ

ಜನಪ್ರಿಯ ಜಾನಪದ ಗೀತೆ ಕೋಲು ಮಂಡೆ ಜಂಗಮ ಹಾಡಿಗೆ ಕನ್ನಡದ ರ‍್ಯಾಪರ್, ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ರ‍್ಯಾಪ್ ಟಚ್ ನೀಡಿ, ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದರು. 
ಚಂದನ್ ಶೆಟ್ಟಿ
ಚಂದನ್ ಶೆಟ್ಟಿ

ಬೆಂಗಳೂರು: ಜನಪ್ರಿಯ ಜಾನಪದ ಗೀತೆ ಕೋಲು ಮಂಡೆ ಜಂಗಮ... ಹಾಡಿಗೆ ಕನ್ನಡದ ರ‍್ಯಾಪರ್, ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ರ‍್ಯಾಪ್ ಟಚ್ ನೀಡಿ, ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದರು. 

ಆದರೆ ಚಂದನ್ ಶೆಟ್ಟಿ ಅವರ ರ‍್ಯಾಪ್ ಹಾಡು ಮಲೆ ಮಹದೇಶ್ವರ ಸ್ವಾಮಿ ಭಕ್ತಾದಿಗಳು ಕೆಂಡಾಮಂಡಲರಾಗಿದ್ದಾರೆ. ಹಾಡಿಗೆ ರ‍್ಯಾಪ್ ಟಚ್ ನೀಡುವಾಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ, ಅಷ್ಟೇ ಅಲ್ಲದೇ ಶಿವಶರಣೆ ಸಂಕಮ್ಮ ಅವರ ಬಗ್ಗೆ ಅಶ್ಲೀಲವಾಗಿ ಚಿತ್ರೀಕರಿಸಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗತೊಡಗಿತ್ತು. 

  
ಈ ಹಿನ್ನೆಲೆಯಲ್ಲಿ ರ‍್ಯಾಪರ್ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದು, . ಈಗಿನ ಪೀಳಿಗೆಗೆ ನಮ್ಮ ಜಾನಪದ ಹಾಡು ತಲುಪಲಿ ಎಂಬ ಉದ್ದೇಶದಿಂದ ಕೋಲು ಮಂಡೆ ಜಂಗಮ ಹಾಡಿಗೆ ರ‍್ಯಾಪ್ ಟಚ್ ನೀಡಿದ್ದೆ. ಇದರಲ್ಲಿ ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡುವ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ, ಭಕ್ತಾದಿಗಳ ಅಸಮಾಧಾನಕ್ಕೆ ಕಾರಣವಾಗಿರುವ ಅಂಶವನ್ನು ಹಾಡಿನಿಂದ ತೆಗೆದುಹಾಕುವುದಾಗಿ ಚಂದನ್ ಶೆಟ್ಟಿ ತಿಳಿಸಿದ್ದಾರೆ.

ಆಗಸ್ಟ್ 23 ರಂದು ಬಿಡುಗಡೆಯಾಗಿದ್ದ ಈ ವಿಡಿಯೋ , ಈಗಾಗಲೇ 35 ಲಕ್ಷಕ್ಕೂ ಅಧಿಕ  ವೀಕ್ಷಣೆ ಕಂಡಿದೆ. ಯೂಟ್ಯೂಬ್‍ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com