ಯುವ ರಾಜ್‌ಕುಮಾರ್ ಸಿನಿ ಪ್ರವೇಶಕ್ಕಾಗಿತಯಾರಾಗ್ತಿದೆ  400 ವರ್ಷಗಳ ಹಿಂದಿನ ಕಥೆ!

ಈ ಹಿಂದೆ ಕೆಜಿಎಫ್: ಚಾಪ್ಟರ್ 1ರಲ್ಲಿ ಪ್ರಶಾಂತ್ ನೀಲ್ ಅವರೊಂದಿಗೆ ಸಹಾಯಕನಾಗಿ ಕೆಲಸ ಮಾಡಿದ ಪುನೀತ್, ಯುವ ರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕರ ಪಾಲಿಗೂ ಇದು ಮೊದಲ ಚಿತ್ರವೇ ಆಗಿದ್ದು ಸಧ್ಯ ಚಿತ್ರದ ಚಿತ್ರಕಥೆ ಕೆಲಸ ಪ್ರಗತಿಯಲ್ಲಿದೆ. 
ಯುವ ರಾಜ್‌ಕುಮಾರ್ ಪುನೀತ್
ಯುವ ರಾಜ್‌ಕುಮಾರ್ ಪುನೀತ್

ಈ ಹಿಂದೆ ಕೆಜಿಎಫ್: ಚಾಪ್ಟರ್ 1ರಲ್ಲಿ ಪ್ರಶಾಂತ್ ನೀಲ್ ಅವರೊಂದಿಗೆ ಸಹಾಯಕನಾಗಿ ಕೆಲಸ ಮಾಡಿದ ಪುನೀತ್, ಯುವ ರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕರ ಪಾಲಿಗೂ ಇದು ಮೊದಲ ಚಿತ್ರವೇ ಆಗಿದ್ದು ಸಧ್ಯ ಚಿತ್ರದ ಚಿತ್ರಕಥೆ ಕೆಲಸ ಪ್ರಗತಿಯಲ್ಲಿದೆ. 

ಪುನೀತ್ 400 ವರ್ಷಗಳ ಹಿಂದಿನ ಚರಿತ್ರೆಯ ಆಧಾರದ  ಮೇಲೆ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. -ನಿರ್ದೇಶಕರ ಪ್ರಕಾರ ಈ ಚಿತ್ರದ ಕಥಾನಕ ಇತಿಹಾಸದೆಲ್ಲೆಲ್ಲೂ ದಾಖಲಾಗಿಲ್ಲ. ಕಥೆಯ ಪರಿಕಲ್ಪನೆ ಹೇಗಿದೆ ಎಂದು  ವಿವರಿಸಿದ ಪುನೀತ್, "ಇದು ಅಣ್ಣಾವ್ರ  (ಡಾ. ರಾಜ್‌ಕುಮಾರ್) ಅವರ ಅಭಿಮಾನಿಯಾಗಿದ್ದ ಬಳ್ಳಾರಿಯ ಪೊಲೀಸ್ ಕಾನ್‌ಸ್ಟೆಬಲ್ ಹೇಳಿದ ಕಥೆ,. ಅದೇ ಕಥೆಯನ್ನು ತುಸು ವಿಸ್ತರಿಸಿ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದೇನೆ ಎಂದಿದ್ದಾರೆ.

ಚಿತ್ರಕಥೆ  ಅಂತಿಮ ಹಂತದಲ್ಲಿದೆ ಎನ್ನುವ ನಿರ್ದೇಶಕ  “ನಾನು ಇತ್ತೀಚೆಗೆ ನನ್ನ ತಂದೆಯೊಡನೆ  ತುಂಗಭದ್ರಾ ತೀರದಲ್ಲಿರುವ ಬಳ್ಳಾರಿಗೆ ಭೇಟಿ ನೀಡಿದ್ದೆ. ಅಲ್ಲಿ ನಾನು ಕೋಟೆಯ ಸ್ಮಾರಕಗಳು ಮತ್ತು ಅವಶೇಷಗಳನ್ನು ನೋಡಿದ್ದೇನೆ. ನಾಶವಾಗಿರುವ ಅದರ ಅವಶೇಷಗಳ ಸರಿಯಾದ ರಕ್ಷಣೆಯಾಗಿಲ್ಲ. ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಜನರೊಂದಿಗೆ ನಾನು ಈ ಕುರಿತು ಚರ್ಚಿಸಿದ್ದೇನೆ. ಅವರು ಇತಿಹಾಸ ಮತ್ತು ಸ್ಥಳದ ಮಹತ್ವದ ಬಗ್ಗೆ ನಮಗೆ ಸಂಕ್ಷಿಪ್ತ ಮಾಹಿತಿ ನೀಡಿದರು ಮತ್ತು ಅದು ಈಗ ಡಿಕೋಡ್ ಆಗುತ್ತಿದೆ. "

ನಾನೂರು ವರ್ಷಗಳ ಹಿಂದೆ ನಡೆದ ಘಟನೆಯನ್ನು ಕಥೆಯಾಗಿಸುವುದು ಒಂದು ಸವಾಲು.  ಎಂದು ಪುನೀತ್ ಹೇಳುತ್ತಾರೆ, ಈ ಚಿತ್ರವು ಅರ್ಧದಷ್ಟು ನೈಜ ಮತ್ತು ಅರ್ಧದಷ್ಟು ಕಲ್ಪನೆಯನ್ನು ಒಳಗೊಂಡಿದೆ. "ಕಥೆಯು ನಿಜವಾದ ಘಟನೆಗಳನ್ನು ಆಧರಿಸಿದ್ದರೂ, ನಿರೂಪಣೆಯು ಸಿನಿಮೀಯ ಮಾದರಿಯಲ್ಲೇ ಇರುತ್ತದೆ"

ಚಿತ್ರಮಂದಿರಗಳು ಮತ್ತೆ ತೆರೆದ ನಂತರವೇ ಚಿತ್ರವನ್ನು ಪ್ರಾರಂಭಿಸಲು ತಂಡ ನೋಡುತ್ತಿರುವುದಾಗಿ ಚಿತ್ರ ನಿರ್ದೇಶಕ ಹೇಳಿದ್ದಾರೆ. "ನಾವು ಭವ್ಯವಾದ ಮುಹೂರ್ತ ಕಾರ್ಯಕ್ರಮ ನಡೆಸುತ್ತೇವೆ.  ಲಾಂಚ್ ವೀಡಿಯೊವನ್ನು ದೊಡ್ಡ ಪರದೆಯಲ್ಲಿ ಬಿಡುಗಡೆ ಮಾಡಲು ನಾವು ಬಯಸುತ್ತೇವೆ, ಮತ್ತು ಚಿತ್ರಮಂದಿರಗಳು ಮತ್ತೆ ತೆರೆದಾಗ ಮಾತ್ರ ಅದು ಸಾಧ್ಯವಾಗುತ್ತದೆ. " ಎಂದು ಪುನೀತ್ ಹೇಳುತ್ತಾರೆ.

ಏತನ್ಮಧ್ಯೆ, ಚೊಚ್ಚಲ ಬಾರಿ ತೆರೆ ಮೇಲೆ ನಾಯಕನಾಗಿ ಬರುತ್ತಿರುವ  ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್ ಅವರು ತಮ್ಮ  ಹೋಂ ವರ್ಕ್ ಅನ್ನು ತಮ್ಮ ಕಡೆಯಿಂದಲೇ ಮಾಡುತ್ತಿದ್ದಾರೆ. ಕ್ಯಾಮೆರಾವನ್ನು ಎದುರಿಸಲು ತಯಾರಾಗುತ್ತಿರುವ ನಟ ಸ್ಟೋರಿ ಬೋರ್ಡ್ ಬಗ್ಗೆ ಚರ್ಚಿಸಲು ನಿರ್ದೇಶಕರು ಮತ್ತು ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com