ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಶೆ:  ತಪ್ಪುಮಾಡಿದವರ ಬೆತ್ತಲೆ ಮಾಡಿ ಎಂದ ಜಗ್ಗೇಶ್

ಸ್ಯಾಂಡಲ್ ವುಡ್ ನಟ ನಟಿಯರು ಮಾದಕವಸ್ತು ಜಾಲದಲ್ಲಿ ಸಿಕ್ಕಿರುವುದರ ಬಗ್ಗೆ ಪೋಲೀಸ್ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ನವರಸರ ನಾಯಕ, ಹಿರಿಯ ನಟ ಜಗ್ಗೇಶ್ ಈ ಡ್ರಗ್ಸ್ ಜಾಲದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ತಪ್ಪುಮಾಡಿದವರ ಬೆತ್ತಲೆ ಮಾಡಿ!ಆಗಲಾದರು ಜನಕ್ಕೆ ಅರಿವಾಗಲಿ" ಎಂದು ಅವರು ಹೇಳೀದ್ದಾರೆ.

Published: 29th August 2020 02:52 PM  |   Last Updated: 29th August 2020 02:52 PM   |  A+A-


ಜಗ್ಗೇಶ್

Posted By : Raghavendra Adiga
Source : Online Desk

ಸ್ಯಾಂಡಲ್ ವುಡ್ ನಟ ನಟಿಯರು ಮಾದಕವಸ್ತು ಜಾಲದಲ್ಲಿ ಸಿಕ್ಕಿರುವುದರ ಬಗ್ಗೆ ಪೋಲೀಸ್ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ನವರಸರ ನಾಯಕ, ಹಿರಿಯ ನಟ ಜಗ್ಗೇಶ್ ಈ ಡ್ರಗ್ಸ್ ಜಾಲದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ತಪ್ಪುಮಾಡಿದವರ ಬೆತ್ತಲೆ ಮಾಡಿ!ಆಗಲಾದರು ಜನಕ್ಕೆ ಅರಿವಾಗಲಿ" ಎಂದು ಅವರು ಹೇಳೀದ್ದಾರೆ.

ಸಿನಿಮಾ ರಂಗದವರ ಡ್ರಗ್ಸ್ ಜಾಲದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸರಣಿ ಟ್ವೀಟ್ ಮೂಲಕ ಹಂಚಿಕೊಂಡಿರುವ ಜಗ್ಗೇಶ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಸರಿಯಾಗಿ ಬಾಳಿಬದುಕುವ ನಿರ್ದಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ! ನಾನು ನನ್ನಿಷ್ಟ! ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರು  ನಶೆ ಹಾದರದ ಬಿಸಿ ಹೆಂಚಿನಮೇಲೆ ಸ್ವಲ್ಪ ಕಾಲಬದುಕಿ  ವಿಕೃತ ಆನಂದ ಅನುಭವಿಸಿ ಸೀದುಹೋಗುತ್ತಾರೆ! ಏಕ್ ಮಾರ್ ದೋ ತಕಡ  ತಪ್ಪುಮಾಡಿದವರ ಬೆತ್ತಲೆ ಮಾಡಿ!ಆಗಲಾದರು ಜನಕ್ಕೆ ಅರಿವಾಗಲಿ!

 

 

"ಬಲವಂತಕ್ಕೆ 2017 ಒಬ್ಬ ರಾಜಕಾರಣಿ ಪಾರ್ಟಿಗೆ  ಹೋಗಿದ್ದೆ!ಅರ್ಧಘಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ!ಬಂದುಸೇರಿದ ಅರ್ಧಉಡುಗೆ ಸುಂದರಿಯರು!ಅದಕಂಡು ನಾನು ನನ್ನ ಆತ್ಮೀಯ ಯುವನಟ ಗ....!ಹೇಳದೆಕೇಳದೆ ಲಿಫ್ಟು ಬಳಸದೆ 12ಮಹಡಿ ಇಳಿದು ಓಡಿದೆವು!ಅದೆಕಡೆ ಇಂದಿಗು ನನಗೆ ಯಾರು ಕರೆಮಾಡದಂತೆ ಮೊಬೈಲ್ ವರ್ಜಿಸಿದೆ! ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು!

"ಶ್ರೇಷ್ಠ ಮನುಜನ್ಮ!ಅದುನಶ್ವರ ಸತ್ಯ!ಆದರು ಆ ನಶ್ವರದೇಹ ನಶಿಸುವಮುನ್ನ ಸಾರ್ಥಕಪಡಿಸಿ ಬದುಕಬೇಕು!ನಶೆ ಹಾದರದ ಹಿಂದೆ ಬರಿ ಸಿನಿಮ ಅಲ್ಲಾ ಸಮಾಜವೆ ಆಕರ್ಷಶಿತ ಆಗುತ್ತಿದೆ! ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ ಅವರ ಹೆಜ್ಜೆ ತಪ್ಪುದಾರಿ ತುಳಿಯದು!ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೆ ನಶೆಹಾದರದ ದಾಸರು!ಉಪ್ಪುತಿಂದವ ನೀರುಕುಡಿಯುವ!"  ಜಗ್ಗೇಶ್ ಟ್ವೀಟ್ ನಲ್ಲಿ ಹೇಳಿದ್ದಾರೆ.

 

 

 

 

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp