ಉಪ್ಪು ತಿಂದವರು ನೀರು ಕುಡಿಯಬೇಕು-ನಟ ಜಗ್ಗೇಶ್

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ನಡೆಯುತ್ತಿದೆ ಎಂಬ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಹೇಳಿಕೆ ಹಲವು ರೂಪ ಪಡೆದುಕೊಳ್ಳುತ್ತಿದೆ. ಅವರ ಹೇಳಿಕೆ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಪರ-ವಿರೋಧ ಚರ್ಚೆಗಳು ಕೇಳಿಬರುತ್ತಿವೆ.

Published: 31st August 2020 08:44 AM  |   Last Updated: 31st August 2020 08:53 AM   |  A+A-


Actor Jaggesh

ನಟ ಜಗ್ಗೇಶ್

Posted By : Sumana Upadhyaya
Source : Online Desk

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ನಡೆಯುತ್ತಿದೆ ಎಂಬ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಹೇಳಿಕೆ ಹಲವು ರೂಪ ಪಡೆದುಕೊಳ್ಳುತ್ತಿದೆ. ಅವರ ಹೇಳಿಕೆ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಪರ-ವಿರೋಧ ಚರ್ಚೆಗಳು ಕೇಳಿಬರುತ್ತಿವೆ.

ಈ ಮಧ್ಯೆ ಸಮಾಜದ ಆಗುಹೋಗುಗಗಳಿಗೆ ಸಾಮಾಜಿಕ ಮಾಧ್ಯಮ ಮೂಲಕ ಸ್ಪಂದಿಸುತ್ತಾ ಬರುವ ಹಿರಿಯ ನಟ ಜಗ್ಗೇಶ್ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ಬದುಕುವ ಹಟ ಇದ್ದವರು ಹಿಮಾಲಯ ಏರುತ್ತಾರೆ, ಬದುಕನ್ನು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ, ಎಲ್ಲ ಅವರವರ ಹಣೆಬರಹ ಎಂದು ಟ್ವೀಟ್ ಮಾಡಿದ್ದಾರೆ.

ನಮ್ಮ ಕಾಲದಲ್ಲಿ 30 ಸಿನಿಮಾ ಮಾಡಿದರೂ ನಿರ್ಮಾಪಕರ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು ಕುಳಿತು ಸಿಕ್ಕ ಹಣವನ್ನು ತೆಗೆದುಕೊಂಡು ರೇಷನ್ ಅಂಗಡಿ ಮುಂದೆ ಅಕ್ಕಿ, ಸೀಮೆ ಎಣ್ಣೆಗೆ ಕ್ಯೂನಲ್ಲಿ ನಿಂತು ಖರೀದಿಸುತ್ತಿದ್ದೆವು. ಇಂದು 2 ಸಿನೆಮಾ ಮಾಡಿದವರು ಕುಬೇರರ ಮಕ್ಕಳಾಗಿ ಬಿಡುತ್ತಾರೆ, ಮೋಜು-ಮಸ್ತಿ ಮಾಡುತ್ತಾರೆ, ಅದು ಹೇಗೆ ಎಂದು ನಟ ಜಗ್ಗೇಶ್ ಇಂದಿನ ಸಿನೆಮಾ ಪ್ರಪಂಚದ ಸ್ಥಿತಿಗತಿ, ಕಲಾವಿದರ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp