ಸೂರಿಯ 'ಬ್ಯಾಡ್ ಮಾನರ್ಸ್' ಗೆ ಮಾಸ್ತಿ ಸಂಭಾಷಣೆ

ನಿರ್ದೇಶಕ ಸೂರಿ ಪ್ರಸ್ತುತ "ಬ್ಯಾಡ್ ಮ್ಯಾನರ್ಸ್" ಚಿತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಅಂಬರೀಶ್ ಅಭಿನಯದ ಚಿತ್ರವು ಪ್ರಸ್ತುತ ಪ್ರಿ-ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದೆ, ಮತ್ತು "ದುನಿಯಾ" ನಿರ್ದೇಶಕರೊಂದಿಗೆ ಸಂಭಾಷಣೆ ಮತ್ತು ಚಿತ್ರಕಥೆ ಬರಹಗಾರ ಮಾಸ್ತಿ ಸಹ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Published: 02nd December 2020 11:12 AM  |   Last Updated: 02nd December 2020 12:18 PM   |  A+A-


ಬ್ಯಾಡ್ ಮ್ಯಾನರ್ಸ್

Posted By : Raghavendra Adiga
Source : The New Indian Express

ನಿರ್ದೇಶಕ ಸೂರಿ ಪ್ರಸ್ತುತ "ಬ್ಯಾಡ್ ಮ್ಯಾನರ್ಸ್" ಚಿತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಅಂಬರೀಶ್ ಅಭಿನಯದ ಚಿತ್ರವು ಪ್ರಸ್ತುತ ಪ್ರಿ-ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದೆ, ಮತ್ತು "ದುನಿಯಾ" ನಿರ್ದೇಶಕರೊಂದಿಗೆ ಸಂಭಾಷಣೆ ಮತ್ತು ಚಿತ್ರಕಥೆ ಬರಹಗಾರ ಮಾಸ್ತಿ ಸಹ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸೂರಿ ಅವರೊಂದಿಗೆ "ಕಡ್ಡಿಪುಡಿ" ಚಿತ್ರದಲ್ಲಿ ಕೆಲಸ ಮಾಡಿದ್ದ ಮಾಸ್ತಿ ಆ ನಂತರ "ಟಗರು" ಮತ್ತೀಗ "ಬ್ಯಾಡ್ ಮ್ಯಾನರ್ಸ್" ಟೀಂನಲ್ಲಿದ್ದಾರೆ.

ಸತೀಶ್ ನಿನಾಸಮ್ ಅಭಿನಯದ "ಅಯೋಗ್ಯ", ಸಂತೋಷ್ ನಿರ್ದೇಶನದ "ಕಾಲೇಜ್ ಕುಮಾರ್", ಪ್ರಜ್ವಲ್ ದೇವರಾಜ್ ಅವರ "ಜಂಟಲ್ ಮ್ಯಾನ್"ದುನಿಯಾ ವಿಜಯ್ ಅಭಿನಯದ ಮತ್ತು ನಿರ್ದೇಶನದ "ಸಲಗ:ದಲ್ಲಿ ಸಹ ಮಾಸ್ತಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ". ಬಾಲ್ ಪೆನ್" ಮತ್ತು "ಪಂಚತಂತ್ರ" ಕಥೆಗಾರರಾಗಿ ಕೆಲಸ ಮಾಡಿದ ಮಾಸ್ತಿ, ನಿರ್ದೇಶಕ ಯೋಗರಾಜ್ ಭಟ್ ಮತ್ತು ತರುಣ್ ಕಿಶೋರ್ ಸುಧೀರ್ ಅವರೊಂದಿಗೆ ಸಹ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

"ಅಮರ್" ನಂತರ "ಬ್ಯಾಡ್ ಮ್ಯಾನರ್ಸ್"ಅಬಿಷೇಕ್ ಅವರ ಎರಡನೇ ಚಿತ್ರವಾಗಲಿದೆ, ಮತ್ತು ಅವರು ಸೂರಿಯೊಂದಿಗೆ ಕೆಲಸ ಮಾಡುತ್ತಿರುವುದು ಇದು ಮೊದಲು, ಮೇ 29ಕ್ಕೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಆರಂಭಿಕ ಯೋಜನೆಯು ಈ ವರ್ಷಾಂತ್ಯದಲ್ಲಿ ಸೆಟ್ಟೇರಲಿದೆ ಎಂದು ಭಾವಿಸಲಾಗಿದ್ದರೂ ತಯಾರಿ ಕಾರ್ಯವು ಯೋಜಿಸಿದ್ದಕ್ಕಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ, ಮತ್ತು ಜನವರಿ 15 ರ ನಂತರ ಚಿತ್ರೀಕರಣವನ್ನು ಪ್ರಾರಂಭಿಸಲು ತಂಡವು ಯೋಜಿಸಿದೆ.

ಚಿತ್ರದಲ್ಲಿ ಸುರೇಂದ್ರ ನಾಥ್ ಮತ್ತು ಅಮ್ರಿ ಸೂರಿಯೊಂದಿಗೆ ಸಹಕರಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಚಿತ್ರಕ್ಕಿದ್ದರೆ ಶೇಖರ್ ಎಸ್ (ಡಿಎಫ್‌ಡಿ) ಛಾಯಾಗ್ರಹಣವಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp