ವಂಡರ್ ವುಮೆನ್ 1984 ಚಿತ್ರ ಅಮೆರಿಕಕ್ಕೂ ಮುನ್ನ ಭಾರತದಲ್ಲೇ ಬಿಡುಗಡೆ!
ಹಾಲಿವುಡ್ ನಟಿ ಗಾಲ್ ಗಡೊಟ್ ಅಭಿನಯದ ಸೂಪರ್ ಹೀರೋ ಚಿತ್ರ ವಂಡರ್ ವುಮನ್ 1984 ಡಿಸೆಂಬರ್ 24 ರಂದು ಕ್ರಿಸ್‌ಮಸ್‌ಗೆ ಸ್ವಲ್ಪ ಮುಂಚಿತವಾಗಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಅಮೆರಿಕಾಗೂ ಮೊದಲೇ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.
Published: 03rd December 2020 08:35 PM | Last Updated: 03rd December 2020 08:35 PM | A+A A-

ಚಿತ್ರದ ಸ್ಟಿಲ್
ನವದೆಹಲಿ: ಹಾಲಿವುಡ್ ನಟಿ ಗಾಲ್ ಗಡೊಟ್ ಅಭಿನಯದ ಸೂಪರ್ ಹೀರೋ ಚಿತ್ರ ವಂಡರ್ ವುಮನ್ 1984 ಡಿಸೆಂಬರ್ 24 ರಂದು ಕ್ರಿಸ್‌ಮಸ್‌ಗೆ ಸ್ವಲ್ಪ ಮುಂಚಿತವಾಗಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಅಮೆರಿಕಾಗೂ ಮೊದಲೇ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.
ಅಮೆರಿಕಾದಲ್ಲಿ ಈ ಚಿತ್ರ ಡಿಸೆಂಬರ್ 25ಕ್ಕೆ ಬಿಡುಗಡೆಯಾಗುತ್ತಿದೆ. 200 ಮಿಲಿಯನ್ ಭಾರೀ ಬಜೆಟ್ ಚಿತ್ರವು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್ ಬಿಕ್ಕಟ್ಟಿನಿಂದಾಗಿ ವಿಳಂಬವಾಗಿತ್ತು. ಈ ಚಿತ್ರವು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಬಹುನಿರೀಕ್ಷಿತ ವಂಡರ್ ವುಮನ್ 1984 ಒಂದು ಹೊಸ ಯುದ್ಧ, ಹೊಸ ರಕ್ಷಾಕವಚ, ಹೊಸ ಖಳನಾಯಕರು, ಎಡ್ಜಿಯರ್ ಆಕ್ಷನ್ ಮತ್ತು ಅವಳ ದೀರ್ಘಕಾಲ ಕಳೆದುಹೋದ ಪ್ರೀತಿಯೊಂದಿಗೆ ಪುನರ್ಮಿಲನದೊಂದಿಗೆ "ಅದ್ಭುತ ಯುಗದ" ಆರಂಭ ಪಡೆಯಲಿದೆ.
"ಇದು ನಿಜವಾದ 'ಸೂಪರ್ಹೀರೋ' ಪಾತ್ರವರ್ಗದೊಂದಿಗೆ ದೊಡ್ಡ ಸೂಪರ್ಹೀರೋ ಮೂಲಕ ಹೇಳಲಾದ ಒಂದು ಶ್ರೇಷ್ಠ ಕಥೆ, ಮತ್ತು ಇದು ನಂಬಲಾಗದಷ್ಟು ಮಹಾಕಾವ್ಯದ ಪ್ರಯಾಣ, ಆದರೆ... ಕಥೆ ಏನು ಮತ್ತು ಅದು ಹೇಗೆ ತೆರೆದುಕೊಳ್ಳುತ್ತದೆ? ಎಂಬುದು ತಿಳಿಯಲು ಪ್ರೇಕ್ಷಕರು ಹೆಚ್ಚು ಆಶ್ಚರ್ಯ ಪಡುತ್ತಾರೆ ಎಂದು ನಿರ್ದೇಶಕ ಪ್ಯಾಟಿ ಜೆಂಕಿನ್ಸ್ ಹೇಳಿದರು.