ವಿವಾಹದ ನಂತರ ಮೊಟ್ಟ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ
ಮದುವೆಯಾದ ನಂತರ ಬಣ್ಣದ ಲೋಕದಿಂದ ಕೊಂಚ ದೂರಾಗಿದ್ದ ನಿಧಿ ಈಗ ವಿಭಿನ್ನ ಪ್ರಯತ್ನಗಳ ಮೂಲಕ ಮತ್ತೆ ಅಭಿನಯದಲ್ಲಿ ಸಕ್ರಿಯವಾಗುತ್ತಿದ್ದಾರೆ. ಮದುವೆಯಾದ ನಂತರ ಇದೇ ಮೊದಲ ಬಾರಿಗೆ ಕನ್ನಡದ ಹಾರರ್ ಸಿನಿಮಾದಲ್ಲಿ ನಿಧಿ ಅಭಿನಯಿಸುತ್ತಿದ್ದಾರೆ.
Published: 07th December 2020 12:30 PM | Last Updated: 07th December 2020 12:32 PM | A+A A-

ನಿಧಿ ಸುಬ್ಬಯ್ಯ
ಮದುವೆಯಾದ ನಂತರ ಬಣ್ಣದ ಲೋಕದಿಂದ ಕೊಂಚ ದೂರಾಗಿದ್ದ ನಿಧಿ ಈಗ ವಿಭಿನ್ನ ಪ್ರಯತ್ನಗಳ ಮೂಲಕ ಮತ್ತೆ ಅಭಿನಯದಲ್ಲಿ ಸಕ್ರಿಯವಾಗುತ್ತಿದ್ದಾರೆ. ಮದುವೆಯಾದ ನಂತರಇದೇ ಮೊದಲ ಬಾರಿಗೆ ಕನ್ನಡದ ಹಾರರ್ ಸಿನಿಮಾದಲ್ಲಿ ನಿಧಿ ಅಭಿನಯಿಸುತ್ತಿದ್ದಾರೆ.
ಇಬ್ಬರು ನಿರ್ದೇಶಕರು ನಿರ್ದೇಶನ ಮಾಡುತ್ತಿರುವ ಹಾರರ್ ಸಿನಿಮಾದಲ್ಲಿ ನಿಧಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಾದ್ ಹಾಗೂ ಪವನ್ ಎಂಬುವರು ಈ ಹಾರರ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ತಮ್ಮ ಮೊದಲ ಹಾರರ್ ಸಿನಿಮಾ ಬಗ್ಗೆ ಮಾತನಾಡಿರುವ ನಿಧಿ, ಇದೇ ಮೊದಲ ಸಲ ಈ ರೀತಿಯ ಚಿತ್ರಕ್ಕೆ ಕೈ ಹಾಕಿದ್ದೇನೆ ಎಂದಿದ್ದಾರೆ. ನಿಧಿ ಸುಬ್ಬಯ್ಯ ಅವರಿಗೆ ನಿತ್ಯ ಹಾರರ್ ಸಿನಿಮಾ ನೋಡುವ ಅಭ್ಯಾಸ ಇದೆಯಂತೆ. ಆದರೆ, ಈಗ ಅವರೇ ಇಂತಹ ಸಿನಿಮಾದ ಭಾಗವಾಗಲಿದ್ದಾರೆ. ಈ ಬಗ್ಗೆ ನಟಿಗೆ ಕಾತರ ಹಾಗೂ ಖುಷಿ ಇದೆ.
ಈಗಾಗಲೇ ಬಾಲಿವುಡ್ನಲ್ಲೂ ನಟಿಸಿರುವ ನಿಧಿ ಕಡೆಯದಾಗಿ ಶಿವಣ್ಣ ಹಾಗೂ ರಚಿತಾ ರಾಮ್ ಅಭಿನಯದ ಆಯುಷ್ಮಾನ್ ಭವ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ನಿಧಿ ಸುಬ್ಬಯ್ಯ ಹಾರರ್ ಸಿನಿಮಾದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ.
ಕೊರೋನಾ ಲಾಕ್ ಡೌನ್ ನಿಂದಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ತಡವಾಯಿತು, ಅಣ್ಣಾ ಬಾಂಡ್, ಕೃಷ್ಣನ ಮ್ಯಾರೇಜ್ ಸ್ಟೋರಿ, ಮತ್ತು ಅಜಬ್ ಗಜಾಬ್ ಲವ್ ನಿಧಿ ನಟಿಸಿರುವ ಸಿನಿಮಾಗಳಾಗಿವೆ.
ಪಂಚರಂಗಿ ನಂತರ ನನಗೆ ಹಲವು ಅದೇ ರೀತಿಯ ಪಾತ್ರಗಳು ಸಿಕ್ಕವು, ಆದರೆ ಪಾತ್ರಗಳಲ್ಲಿ ಏಕತಾನತೆ ಕಂಡು ಬರುತ್ತದೆ ಎಂಬ ಕಾರಣಕ್ಕಾಗಿ ನಾನು ಆ ಸಿನಿಮಾಗಳಲ್ಲಿ ನಟಿಸಲಿಲ್ಲ, ನಾನು ಉತ್ತಮ ಸಿನಿಮಾಗಳಿಗಾಗಿ ಕಾಯುತ್ತಿದ್ದೆ, ಅಂತಿಮವಾಗಿ ಹಾರರ್ ಸಿನಿಮಾ ನನಗೆ ಇಷ್ಟವಾಯಿತು, ಜನವರಿ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದು ನಿಧಿ ತಿಳಿಸಿದ್ದಾರೆ.