ಶಿವರಾಜ್ ಕುಮಾರ್
ಶಿವರಾಜ್ ಕುಮಾರ್

ರೈತರಿದ್ದರೆ ದೇಶ: ಅನ್ನದಾತರ ಪ್ರತಿಭಟನೆಗೆ ಶಿವರಾಜ್ ಕುಮಾರ್, ಚೇತನ್ ಬೆಂಬಲ

ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಬೆಂಬಲ ನೀಡಿದೆ.

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಬೆಂಬಲ ನೀಡಿದೆ.

ಕೃಷಿ ಕಾಯ್ದೆಯನ್ನು ರದ್ದುಗೊಳಿಸುವಂತೆ ರೈತರು ಪಟ್ಟು ಹಿಡಿದಿದ್ದು, ಡಿಸೆಂಬರ್ 8ರ ಭಾರತ್ ಬಂದ್ ಗೆ ಬಹುತೇಕ ಸಂಘಟನೆಗಳ ಜತೆಯಲ್ಲಿ ಸ್ಯಾಂಡಲ್ ವುಡ್ ನಟರು, ಕ್ರೀಡಾಪಟುಗಳೂ ಸಹ ಸಾಥ್ ನೀಡಿದ್ದಾರೆ.

ಬಾಲಿವುಡ್ ಕಲಾವಿದರಾದ ದಿಲ್ಜಿತ್ ದೊಸಾಂಜ್, ಪ್ರಿಯಾಂಕಾ ಚೋಪ್ರಾ, ಸೋನಂ ಕಪೂರ್, ರಿತೇಶ್ ದೇಶಮುಖ್ ಸೇರಿದಂತೆ ಅನೇಕ ತಾರೆಯರು ರೈತರ ಪರ ನಿಂತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟ ಚೇತನ್, ಗೀತರಚನೆಕಾರ ಮತ್ತು ನಿರ್ದೇಶಕ ಕವಿರಾಜ್ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. 

ನಟ ಶಿವರಾಜ್ ಕುಮಾರ್, “ರೈತರ ಪರ ಇದ್ದೀವಿ. ರೈತರ ಕಷ್ಟಕ್ಕೆ ಯಾವಾಗಲೂ ಜೊತೆ ಇರುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.

'ರೈತ ದೇಶದ ಬೆನ್ನೆಲುಬು, ರೈತ ಇದ್ರೇನೆ ದೇಶ. ಅವರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ' ಎಂದು ಹ್ಯಾಟ್ರಿಕ್ ಹೀರೋ ಟ್ವೀಚ್ ಮಾಡಿದ್ದಾರೆ. 

ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಮೌನವಾಗಿರುವ ಸ್ಯಾಂಡಲ್ ವುಡ್ ಬಗ್ಗೆ ನಟ ಚೇತನ್ ಕಿಡಿಕಾರಿದ್ದರು. 'ದೇಶಾದ್ಯಂತ ರೈತರು ತಿಂಗಳುಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣೆ ಪ್ರಚಾರದ ತೆರೆದ ವಾಹನದ ಮೇಲೆ ವೇಗವಾಗಿ ನೆಗೆಯುವ ಕನ್ನಡದ ಚಲನಚಿತ್ರ ನಟರು ರೈತರ ಬೆಂಬಲವಾಗಿ ಒಂದು ಮಾತನ್ನೂ ಹೇಳಿಲ್ಲ.' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com