ಹೊಸ ವರ್ಷಕ್ಕೆ ದುನಿಯಾ ವಿಜಯ್ ನಿರ್ದೇಶನದ ಸಲಗ ಟೈಟಲ್ ಟ್ರ್ಯಾಕ್ ಬಿಡುಗಡೆ
ಕೆಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಸಲಗ ಸಿನಿಮಾ ಟೈಟಲ್ ಸಾಂಗ್ ಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಮಲೇಶಿಯಾದ ಹಿಪ್ ಹಾಪ್ ರ್ಯಾಪರ್ ಯೋಗಿ.ಬಿ ಹಿನ್ನೆಲೆ ಗಾಯನ ನೀಡಿದ್ದಾರೆ.
Published: 08th December 2020 12:47 PM | Last Updated: 08th December 2020 12:47 PM | A+A A-

ದುನಿಯಾ ವಿಜಯ್
ನಟ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾ ಟೈಟಲ್ ಟ್ರ್ಯಾಕ್ ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.
ಕೆಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಸಲಗ ಸಿನಿಮಾ ಟೈಟಲ್ ಸಾಂಗ್ ಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಮಲೇಶಿಯಾದ ಹಿಪ್ ಹಾಪ್ ರ್ಯಾಪರ್ ಯೋಗಿ.ಬಿ ಹಿನ್ನೆಲೆ ಗಾಯನ ನೀಡಿದ್ದಾರೆ.
ತಮಿಳು ಪ್ರೇಕ್ಷಕರಿಗೆ ಬಿ.ಯೋಗಿ ಚಿರಪರಿಚಿತವಾಗಿದ್ದು, ಕನ್ನಡದಲ್ಲಿ ಪರ್ಫೆಕ್ಟ್ ಆಗಿ ಹಾಡಲು ರೆಕಾರ್ಡಿಂಗ್ ಮೊದಲು ಪ್ರಾಕ್ಟೀಸ್ ಮಾಡಲಾಗಿದೆ, ಯೋಗಿ ಜೊತೆ ನಾರಾಯಣ್ ಶರ್ಮಾ ಮತ್ತು ಸಂಜಿತ್ ಹೆಗ್ಡೆ ದನಿ ನೀಡಿದ್ದಾರೆ.
ಈ ಮೊದಲು ಸೂರಿ ಅಣ್ಣ ಎಂಬ ಮೊದಲ ಹಾಡು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಅದಾದ ನಂತರ ಮಳೆಯೇ ಮಳೆಯೇ ಹಾಗೂ ಸಂಜನಾ ಐ ಲವ್ ಯೂ ಹಾಡುಗಳು ಈ ಮೊದಲು ರಿಲೀಸ್ ಆಗಿ ಜನಪ್ರಿಯವಾಗಿವೆ.
ಫೆಬ್ರವರಿ 23 ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ, 14 ವರ್ಷದ ಹಿಂದೆ ವಿಜಯ್ ನಟನೆಯ ದುನಿಯಾ ಸಿನಿಮಾ ಕೂಡ ಇದೇ ದಿನಾಂಕದಲ್ಲಿ ರಿಲೀಸ್ ಆಗಿತ್ತು.
ದುನಿಯಾ ವಿಜಯ್ ಗೆ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ, ಧನಂಜಯ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ, ಅಚ್ಯುತ ಕುಮಾರ್ , ತ್ರಿವೇಣಿ ರಾವ್ ಹಾಗೂ ಯಶ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.