ನಟ ಯೋಗೇಶ್
ನಟ ಯೋಗೇಶ್

ನಟ ಯೋಗೇಶ್ ಹೋಮ್ ಬ್ಯಾನರ್ ಅಡಿಯಲ್ಲಿ 'ಕಂಸ' ಮೊದಲ ಚಿತ್ರ ನಿರ್ಮಾಣ

ದುನಿಯಾ ಸಿನಿಮಾ ಮೂಲಕ ವೃತ್ತಿ ಜೀವನ ಆರಂಭಿಸಿ ಯೋಗಿ ಎಂದೇ ಹೆಸರಾಗಿರುವ, ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಇಮೇಜ್ ಹೊಂದಿರುವ ನಟ ಯೋಗೇಶ್, ತನ್ನ ಪುತ್ರಿ ಶ್ರಿನಿಕಾ ಹೆಸರಿನಡಿಯಲ್ಲಿ ತನ್ನದೇ ಆದ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಲು ನಿರ್ಧರಿಸಿದ್ದಾರೆ.

ಬೆಂಗಳೂರು: ದುನಿಯಾ ಸಿನಿಮಾ ಮೂಲಕ ವೃತ್ತಿ ಜೀವನ ಆರಂಭಿಸಿ ಯೋಗಿ ಎಂದೇ ಹೆಸರಾಗಿರುವ, ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಇಮೇಜ್ ಹೊಂದಿರುವ ನಟ ಯೋಗೇಶ್, ತನ್ನ ಪುತ್ರಿ ಶ್ರಿನಿಕಾ ಹೆಸರಿನಡಿಯಲ್ಲಿ ತನ್ನದೇ ಆದ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಲು ನಿರ್ಧರಿಸಿದ್ದಾರೆ.

'ಕಂಸ' ಯೋಗಿ ಹೋಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾವಾಗಿದೆ. ಇದು ಕನ್ನಡ ಹಾಗೂ ತಮಿಳಿನಲ್ಲಿ ಬರುತ್ತಿದ್ದು, ರಂಜಿತ್ ಕುಮಾರ್ ಗೌಡ ನಿರ್ದೇಶಿಸುತ್ತಿದ್ದಾರೆ.

ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ನಟನೆಯ ಹೊರತಾಗಿ ಏನಾನ್ನಾದರೂ ಮಾಡಬೇಕು ಅಂದುಕೊಳ್ಳುವಾಗ ನಿರ್ಮಾಣ ಸಂಸ್ಥೆ ಸ್ಥಾಪನೆ ಮನಸಿಗೆ ಹೊಳೆಯಿತು. ಅದ್ಬುತ ಕಥೆಯೊಂದು ತನ್ನ ಕೈಯಲ್ಲಿರುವ ವಿಶ್ವಾಸ ಇರುವುದಾಗಿ ಯೋಗಿ ಹೇಳಿದ್ದಾರೆ. 

ಕಥೆ ಬರೆದಿರುವ ನಿರ್ದೇಶಕರು ಭೂಗತ ವಿಷಯವೊಂದನ್ನು ತಂದಿದ್ದಾರೆ, ಇದು ನಾನು ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ನಂದಾ ಲವ್ಸ್ ನಂದಿತಾ ಪಾತ್ರದ ರೀತಿಯಲ್ಲಿದ್ದು, ಸ್ಕ್ರಿಪ್ಟ್ ಬಲವಾಗಿದೆ. ತಮಿಳಿನ ಖ್ಯಾತ ನಟ ಸಮುತಿರಕಣಿ ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಕಂಸ ಇದೀಗ ಪ್ರೊಢಕ್ಷನ್ ಪೂರ್ವ ಹಂತದಲ್ಲಿದ್ದು, ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಚಿತ್ರ ಆರಂಭವಾಗುವ ಭರವಸೆಯಿದೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ಯೋಗಿ ಲಾಕ್ ಡೌನ್ ಮುಂಚೆ ಕೈಗೊಂಡಿದ್ದ ಚಿತ್ರವೊಂದರ ಶೂಟಿಂಗ್ ಮುಕ್ತಾಯಗೊಂಡಿದ್ದು, ಲಂಕಾಸುರ ಜನವರಿಂದ ಮಧ್ಯಭಾಗದಿಂದ ಶೂಟಿಂಗ್ ಆರಂಭವಾಗಲಿದೆ. ಕಮರ್ಷಿಯಲ್ ಎಂಟರ್ ಟೈನರ್ ಚಿತ್ರದಲ್ಲಿ ನಿರ್ದೇಶಕ ಪ್ರಮೋದ್ ಕುಮಾರ್ ಹಾಗೂ ಯೋಗಿ ಜೊತೆಯಾಗಿದ್ದು, ವಿನೋದ್ ಪ್ರಭಾಕರ್ ಕೂಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com