ಶ್ರೀಮುರುಳಿಯ 'ಮದಗಜ' ಫಸ್ಟ್ ಲುಕ್ ಟೀಸರ್ ಅನಾವರಣಗೊಳಿಸಲಿದ್ದಾರೆ ಪ್ರಶಾಂತ್ ನೀಲ್

ರೋರಿಂಗ್ ಸ್ಟಾರ್ ಶ್ರೀಮರಳಿ ಅವರ ಜನ್ಮದಿನದ ಪ್ರಯುಕ್ತ ಡಿಸೆಂಬರ್ 17ರಂದು 'ಮದಗಜ' ಚಿತ್ರದ ಫಸ್ಟ್‌ಲುಕ್ ಟೀಸರ್ ರಿಲೀಸ್ ಆಗಲಿದೆ. ವಿಶೇಷವೆಂದರೆ, ಇದನ್ನು ರಿಲೀಸ್ ಮಾಡುವುದು ಪ್ರಶಾಂತ್ ನೀಲ್‌! 

Published: 15th December 2020 09:06 AM  |   Last Updated: 15th December 2020 12:27 PM   |  A+A-


Srimuruli and prashanth neel

ಶ್ರೀಮುರುಳಿ ಮತ್ತು ಪ್ರಶಾಂತ್ ನೀಲ್

Posted By : Shilpa D
Source : The New Indian Express

ರೋರಿಂಗ್ ಸ್ಟಾರ್ ಶ್ರೀಮರಳಿ ಅವರ ಜನ್ಮದಿನದ ಪ್ರಯುಕ್ತ ಡಿಸೆಂಬರ್ 17ರಂದು 'ಮದಗಜ' ಚಿತ್ರದ ಫಸ್ಟ್‌ಲುಕ್ ಟೀಸರ್ ರಿಲೀಸ್ ಆಗಲಿದೆ. ವಿಶೇಷವೆಂದರೆ, ಇದನ್ನು ರಿಲೀಸ್ ಮಾಡುವುದು ಪ್ರಶಾಂತ್ ನೀಲ್‌! 

ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಮುರಳಿ, 'ನನ್ನ ಗಾಡಫಾದರ್ ನಿರ್ದೇಶಕ ಪ್ರಶಾಂತ್ ನೀಲ್ 'ಮದಗಜ' ಚಿತ್ರದ ಫಸ್ಟ್‌ಲುಕ್ ಟೀಸರ್  ರಿಲೀಸ್ ಮಾಡಲಿದ್ದಾರೆ ಎಂದು ಹೇಳಲು ಖುಷಿಯಾಗುತ್ತಿದೆ. ಧನ್ಯವಾದಗಳು ನಿರ್ದೇಶಕರೇ..‌' ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನಟ ಶ್ರೀಮುರಳಿಗೆ ಭರ್ಜರಿ ಬ್ರೇಕ್‌ ಸಿಕ್ಕಿದ್ದು ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಚಿತ್ರದಿಂದ. ಅದು ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿತ್ತು. 'ಉಗ್ರಂ' ಸಿನಿಮಾ ಶ್ರೀಮುರಳಿ ವೃತ್ತಿಬದುಕಿನ ಸೆಕೆಂಡ್‌ ಇನಿಂಗ್ಸ್ ಎಂದು ಹೇಳಿದರೆ ತಪ್ಪಾಗಲಾರದು.  'ಕೆಜಿಎಫ್‌' 1 ಮತ್ತು 2 ನಂತರ ಪ್ರಶಾಂತ್ ಈಗ ಪ್ರಭಾಸ್‌ಗಾಗಿ 'ಸಲಾರ್' ಸಿನಿಮಾ
ಕೈಗೆತ್ತಿಕೊಂಡಿದ್ದಾರೆ. ಒಟ್ಟಿನಲ್ಲಿ ಕನ್ನಡ ಸಿನಿಪ್ರಿಯರು ಮತ್ತೊಮ್ಮೆ 'ಉಗ್ರಂ' ಕಾಂಬಿನೇಷನ್‌ ಅನ್ನು ಎದುರುನೋಡುತ್ತಿರುವುದಂತೂ ಸುಳ್ಳಲ್ಲ.

'ಹೆಬ್ಬುಲಿ', 'ರಾಬರ್ಟ್' ಥರದ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಉಮಾಪತಿ ಶ್ರೀನಿವಾಸ್‌ 'ಮದಗಜ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀಮುರಳಿಗೆ ನಾಯಕಿಯಾಗಿ ಮೊದಲ ಬಾರಿಗೆ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಚಿಕ್ಕಣ್ಣ, ಜಗಪತಿ ಬಾಬು, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. 'ಮದಗಜ' ಚಿತ್ರದ ಹಾಡುಗಳಿಗೆ 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರ್‌ ಸಂಗೀತ ನೀಡುತ್ತಿದ್ದಾರೆ. 

ಈಗಾಗಲೇ ಸಿನಿಮಾ ಮೂರನೇ ಹಂತದ ಶೂಟಿಂಗ್ ತಲುಪಿದ್ದು, ನಿರ್ದೇಶಕ ಮಹೇಶ್ ಕುಮಾರ್ ಪ್ರಮುಖ ಫೈಟಿಂಗ್ ದೃಶ್ಯಗಳನ್ನು ಸೆರೆ ಹಿಡಿಯಲು ತಯಾರಿ ನಡೆಸುತ್ತಿದ್ದಾರೆ, ಇದಕ್ಕಾಗಿ ಮೋಹನ್ ಬಿ ಕೆರೆ ವೈವಿಧ್ಯಮಯವಾದ ಆರ್ಟ್ ಕೆಲಸ ಮಾಡುತ್ತಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp