ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಕನ್ನಡಿಗ ಸಿನಿಮಾಗೆ ಯು/ಎ ಪ್ರಮಾಣಪತ್ರ

ಗಿರಿರಾಜ ನಿರ್ದೇಶನದಲ್ಲಿ ರವಿಚಂದ್ರನ್ ನಟಿಸುತ್ತಿರುವ ಕನ್ನಡಿಗ ಸಿನಿಮಾಗೆ ಸೆನ್ಸಾರ್ ಬೋರ್ಡ್ ಯು/ಎ ಪ್ರಮಾಣ ಪತ್ರ ನೀಡಿದೆ. 
ರವಿಚಂದ್ರನ್
ರವಿಚಂದ್ರನ್

ಗಿರಿರಾಜ ನಿರ್ದೇಶನದಲ್ಲಿ ರವಿಚಂದ್ರನ್ ನಟಿಸುತ್ತಿರುವ ಕನ್ನಡಿಗ ಸಿನಿಮಾಗೆ ಸೆನ್ಸಾರ್ ಬೋರ್ಡ್ ಯು/ಎ ಪ್ರಮಾಣ ಪತ್ರ ನೀಡಿದೆ. 

ಲಾಕ್ ಡೌನ್ ನಂತರ ಸೆನ್ಸಾರ್ ಬೋರ್ಡ್ ತಲುಪಿದ್ದ ಮೊದಲ ಸಿನಿಮಾ ಇದಾಗಿದೆ. ನವೆಂಬರ್ ನಲ್ಲಿ ಕೆಲಸ ಆರಂಭವಾಗಿದ್ದು, ಸದ್ಯ ಪ್ರಾಜೆಕ್ಟ್ ಸಂಪೂರ್ಣವಾಗಿದೆ, "ನಾನು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದೇನೆ, ಅದನ್ನು ನಾನು ಮೊದಲೇ ಸಿದ್ಧಪಡಿಸಿದ್ದೇನೆ ಮತ್ತು ಯೋಜನೆಯ ಪ್ರಕಾರ ಹೋದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರಿರಾಜ್ ತಿಳಿಸಿದ್ದಾರೆ.

ಇನ್ನೂ ತಮ್ಮ ಕನ್ನಡಿಗಗ ಸಿನಿಮಾ ವಿವಿಧ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದ್ದಾರೆ. ಈ ಸಿನಿಮಾದಲ್ಲಿ ಕನ್ನಡಿಗರ ಸಂಸ್ಕೃತಿ ಬಗ್ಗೆ ವಿವರಣೆ ನೀಡಲಾಗಿದ್ದು,  ಸಾರ್ವತ್ರಿಕ ವಿಷಯವು ಜಾಗತಿಕವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತದೆ, ಈ ಸಿನಿಮಾ ಫಿಲ್ಮ್ ಫೆಸ್ಟಿವಲ್ ಗಳ ಮೂಲಕ ಪ್ರೇಕ್ಷಕರನ್ನು ತಲುಪಲಿದೆ.

ಫೆಬ್ರವರಿ ಅಥವಾ ಮಾರ್ಚ್  ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ರೊಡಕ್ಷನ್ ಹೌಸ್ ನಿರ್ಧರಿಸಿದೆ ಎಂದು ಗಿರಿರಾಜ್ ವಿವರಿಸಿದ್ದಾರೆ.  ಸದ್ಯ ಸಿನಿಮಾದ ಅಂತಿಮ ಹಂತದ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿವೆ,  ಚಿತ್ರದಲ್ಲಿ ರವಿಚಂದ್ರನ್ ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಕನ್ನಡಿಗ' ಸಿನಿಮಾದಲ್ಲಿ 1858ರ ಕಾಲಘಟ್ಟವನ್ನು ಮರು ಸೃಷ್ಟಿಸಲಾಗುತ್ತಿದೆ. ಇಲ್ಲಿ ನಾಯಕಿಯಾಗಿ ಪಾವನಾ ನಟಿಸುತ್ತಿದ್ದಾರೆ. ಸಂಕಮ್ಮಬ್ಬೆಯಾಗಿ ಸ್ವಾನಿ ಚಂದ್ರಶೇಖರ್ ಕಾಣಿಸಿಕೊಂಡರೇ, ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಪಾತ್ರದಲ್ಲಿ ಪಾತ್ರದಲ್ಲಿ ಜೇಮಿ ಆಲ್ಟರ್ ಬಣ್ಣಹಚ್ಚುತ್ತಿದ್ದಾರೆ. ದತ್ತಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ಇನ್ನೂ ವಿಶೇಷ ಪಾತ್ರದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾಣಿಸಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com