ರಮೇಶ್ ರೆಡ್ಡಿ ನಿರ್ಮಾಣದ ಮುಂದಿನ ಸಿನಿಮಾಗೆ ಶ್ರೀಮುರುಳಿ ನಾಯಕ

ನಿರ್ಮಾಪಕ  ರಮೇಶ್  ರೆಡ್ಡಿ ಮತ್ತು ರೋರಿಂಗ್ ಸ್ಟಾರ್ ಶ್ರೀಮುರುಳಿ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ ಆರಂಭವಾಗಲಿದೆ. ಶ್ರೀಮುರುಳಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಧಿೃಕೃತವಾಗಿ ಘೋಷಣೆ ಹೊರಬಿದ್ದಿದೆ.
ಶ್ರೀಮುರುಳಿ
ಶ್ರೀಮುರುಳಿ

ನಿರ್ಮಾಪಕ  ರಮೇಶ್  ರೆಡ್ಡಿ ಮತ್ತು ರೋರಿಂಗ್ ಸ್ಟಾರ್ ಶ್ರೀಮುರುಳಿ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ ಆರಂಭವಾಗಲಿದೆ. ಶ್ರೀಮುರುಳಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಧಿೃಕೃತವಾಗಿ ಘೋಷಣೆ ಹೊರಬಿದ್ದಿದೆ.

ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ಇದು ಏಳನೇ ಸಿನಿಮಾವಾಗಿದೆ,  ಈ ಹಿಂದೆ ಪಡ್ಡೆಹುಲಿ, ನಾತಿಚರಾಮಿ ಸಿನಿಮಾಗಳು ನಿರ್ಮಾಣವಾಗಿದ್ದವು, ಇನ್ನೂ ರಮೇಶ್ ಅರವಿಂದ್ ನಿರ್ದೇಶನದ 100, ಯೋಗರಾಜ್ ಭಟ್ ನಿರ್ದೇಶನದ  ಗಾಳಿಪಟ-2 ಸಿನಿಮಾಗಳು ಇನ್ನೂ ರಿಲೀಸ್ ಆಗಬೇಕಾಗಿದೆ.

ಇದೇ ಮೊದಲ ಬಾರಿಗೆ ನಟ ಮುರುಳಿ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ  ಮೊದಲ ಬಾರಿಗೆ ಒಂದಾಗುತ್ತಿದ್ದಾರೆ. ಇದೊಂದು ಬೃಹತ್ ಬಜೆಟ್ ಸಿನಿಮಾವಾಗಿದೆ, ಕಥೆಗೆ ನ್ಯಾಯ ಒದಗಿಸುವ ನಿರ್ದೇಶಕನಿಗಾಗಿ ಹುಡುಕಾಟ ನಡೆದಿದೆ, ಶ್ರೀಮುರುಳಿ ಪಾತ್ರವೇ ಚಿತ್ರಕ್ಕೆ ಜೀವಾಳವಾಗಿದೆ. ಸದ್ಯ ಮುರುಳಿ ಮದಗಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಅದಾದ ನಂತರ ಡಾ. ಸೂರಿ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com