ಡಾ.ಸೂರಿ ನಿರ್ದೇಶನ, ಪ್ರಶಾಂತ್ ನೀಲ್ ಸ್ಕ್ರಿಪ್ಟ್ ಇರುವ ಸಿನಿಮಾದಲ್ಲಿ ಶ್ರೀಮುರುಳಿ!
ಮದಗಜ ಸಿನಿಮಾದ ಶೂಟಿಂಗ್ ನಲ್ಲಿ ವ್ಯಸ್ತರಾಗಿರುವ ನಟ ಶ್ರೀ ಮುರುಳಿ, ಡಾ.ಸೂರಿ ನಿರ್ದೇಶನ, ಪ್ರಶಾಂತ್ ನೀಲ್ ಸ್ಕ್ರಿಪ್ಟ್ ಹೊಂದಿರುವ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
Published: 17th December 2020 11:17 AM | Last Updated: 17th December 2020 12:26 PM | A+A A-

ಡಾ.ಸೂರಿ ನಿರ್ದೇಶನ, ಪ್ರಶಾಂತ್ ನೀಲ್ ಸ್ಕ್ರಿಪ್ಟ್ ಇರುವ ಸಿನಿಮಾದಲ್ಲಿ ಶ್ರೀಮುರುಳಿ!
ಮದಗಜ ಸಿನಿಮಾದ ಶೂಟಿಂಗ್ ನಲ್ಲಿ ವ್ಯಸ್ತರಾಗಿರುವ ನಟ ಶ್ರೀ ಮುರುಳಿ, ಡಾ.ಸೂರಿ ನಿರ್ದೇಶನ, ಪ್ರಶಾಂತ್ ನೀಲ್ ಸ್ಕ್ರಿಪ್ಟ್ ಹೊಂದಿರುವ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಇದೇ ಮೊದಲ ಬಾರಿಗೆ ನಟ ಮುರುಳಿ ವಿಜಯ್ ಕಿರಂಗಂದೂರ್ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೊಸ ಸಿನಿಮಾದ ಕುರಿತು ಇಂದು ಅಧಿಕೃತ ಘೋಷಣೆಯಾಗಲಿದೆ.
"ಈ ರೀತಿಯ ಅತ್ಯುತ್ತಮ ಸಿನಿಮಾ ತಂಡದೊಂದಿಗೆ ಕೈ ಜೋಡಿಸಲು ಅತ್ಯಂತ ಸಂತಸವಾಗುತ್ತಿದೆ. ಅತ್ಯಂತ ಸಕಾರಾತ್ಮಕ ಭಾವನೆ ಮೂಡುತ್ತಿದೆ. ಹೊಸ ಸಿನಿಮಾದಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ, ಮುಂದಿನ ವರ್ಷ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವುದನ್ನು ಕಾಯುತ್ತಿದ್ದೇನೆ" ಎನ್ನುತ್ತಾರೆ ಶ್ರೀಮುರುಳಿ.
We are super excited to announce our next vision, #HombaleFilms8.
— Hombale Films (@hombalefilms) December 15, 2020
Watch out our handles on 17th December at 11:59am. @VKiragandur pic.twitter.com/fM0CYS5k2g
ಸಿನಿಮಾದ ಬಗ್ಗೆ ಈಗಲೇ ಹೆಚ್ಚು ಮಾತನಾಡುವುದು ಸೂಕ್ತವಲ್ಲ ಎನ್ನುವ ಅವರು, ತಾವು ಹಿಂದೆಂದೂ ನಿರ್ವಹಿಸದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ" ಎಂದಷ್ಟೇ ತಿಳಿಸಿ ಕುತೂಹಲ ಹೆಚ್ಚು ಮಾಡಿದ್ದಾರೆ. "ಮದಗಜ ಸಿನಿಮಾ ( ಮಹೇಶ್ ಕುಮಾರ್ ನಿರ್ದೇಶನ, ಉಮಾಪತಿ ಎಸ್ ಗೌಡ ನಿರ್ಮಾಣ) ಚಿತ್ರೀಕರಣ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಮದಗಜ ಸಿನಿಮಾದ ಚಿತ್ರೀಕರಣ 55 ದಿನಗಳು ಪೂರ್ಣಗೊಂಡಿದ್ದು 20 ದಿನಗಳ ಚಿತ್ರೀಕರಣವಷ್ಟೇ ಬಾಕಿ ಇದೆ, ಜನವರಿ ವೇಳೆಗೆ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ.