ಪ್ರಭಾಸ್
ಪ್ರಭಾಸ್

ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ 'ಸಲಾರ್' ತಂಡಕ್ಕೆ ಭುವನ್ ಗೌಡ ಸೇರ್ಪಡೆ!

ಹೊಂಬಾಳೆ ಪಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಲಾರ್ ಸಿನಿಮಾಗೆ ಭುವನ್ ಗೌಡ ಛಾಯಾಗ್ರಾಹಕರಾಗಿದ್ದಾರೆ.

ಹೊಂಬಾಳೆ ಪಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಲಾರ್ ಸಿನಿಮಾಗೆ ಭುವನ್ ಗೌಡ ಛಾಯಾಗ್ರಾಹಕರಾಗಿದ್ದಾರೆ.

ಬಾಹುಬಲಿ ನಾಯಕ ಪ್ರಭಾಸ್ ನಟಿಸುತ್ತಿರುವ ಸಾಲಾರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಭುವನ್ ಗೌಡ ಈ ಹಿಂದೆ ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ, ಕೆಜಿಎಫ್ 1 ಮತ್ತು ಭಾಗ ಎರಡರಲ್ಲಿ ಕೆಲಸ ಮಾಡಿದ್ದಾರೆ.

ಮಂಗಳವಾರ ಭುವನ್ ಗೌಡ ಹುಟ್ಟುಹಬ್ಬವಿದ್ದು, ಈ ಬರ್ತ್ ಡೇ ವಿಶೇಷವಾಗಿದೆ. ಪುಷ್ಪಕ ವಿಮಾನ, ರಥಾವರ, ಹಾಗೂ ಕೆಜಿಎಫ್ ಸಿನಿಮಾ ಕೆಲಸಗಳಿಗಾಗಿ ಭುವನ್ ಗೌಡ ಪ್ರಶಂಸೆಗೊಳಗಾಗಿದ್ದಾರೆ.

ಕೆಜಿಎಫ್-2 ಸಿನಿಮಾದಲ್ಲು ಭುವನ್ ಗೌಡ ಕೈಚಳಕವಿದೆ, ಪ್ರಶಾಂತ್ ನೀಲ್ ಮತ್ತು ಪ್ರಬಾಸ್ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ, ಸಾಲಾರ್ ಸಿನಿಮಾ ಫರ್ಸ್ಟ್ ಲುಕ್ ನಲ್ಲಿ ನಟ ಪ್ರಭಾಸ್ ರೈಫಲ್ ಹಿಡಿದು ಪೋಸ್ ಕೊಟ್ಟಿದ್ದಾರೆ.

ಫರ್ಸ್ಟ್ ಲುಕ್ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆ ಬಂದಿದ್ದು, ಪ್ರಭಾಸ್ ಫೋಟೋ ಶೂಟ್ ಕೂಡ ಭುವನ್ ಗೌಡ ಮಾಡಿದ್ದಾರೆ. ಪ್ರಶಾಂತ್ ನೀಲ್ ಜೊತೆ ಉಗ್ರಂ ಜರ್ನಿ ಅತ್ಯದ್ಭುತವಾಗಿತ್ತು. ಕೆಜಿಎಫ್ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ ಅನುಭವ ಅಭೂತ ಪೂರ್ವವಾಗಿದೆ, ನನ್ನ ಮುಂದಿನ ಪ್ರಾಜೆಕ್ಟ್ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ನಾನು ಪ್ರಭಾಸ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಮತ್ತು ನಿರ್ದೇಶಕರ ದೃಷ್ಟಿಯನ್ನು ಸಲಾರ್‌ನಲ್ಲಿ ಸೆರೆಹಿಡಿಯುವ ಭರವಸೆ ಇದೆ, ಪ್ಯಾನ್ ಇಂಡಿಯಾ ಸಿನಿಮಾವನ್ನು  ಡಿಸೆಂಬರ್ 2 ರಂದು ವಿಜಯ್ ಕಿರಂಗದೂರು ಘೋಷಿಸಿದ್ದು ಜನವರಿ ತಿಂಗಳ ಅಂತ್ಯದಲ್ಲಿ ಶೂಟಿಂಗ್ ಆರಂಭವಾಗಲಿದೆ.

Related Stories

No stories found.

Advertisement

X
Kannada Prabha
www.kannadaprabha.com