ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾದಲ್ಲಿ ಅಜೇಯ್ ಕೃಷ್ಣರಾವ್

ಅಜೇಯ್ ರಾವ್ ಮತ್ತು ಶಶಾಂಕ್ ಅವರದ್ದು ಹಿಟ್ ಕಾಂಬಿನೇಷನ್. ಕೃಷ್ಣ ಸಿರೀಸ್‍ನಲ್ಲಿ ಅಜೇಯ್ ಮತ್ತು ಶಶಾಂಕ್ ಜೋಡಿ ಸೋತಿದ್ದೇ ಇಲ್ಲ. ಈಗ ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. 
ಅಜಯ್ ಕೃಷ್ಣರಾವ್
ಅಜಯ್ ಕೃಷ್ಣರಾವ್

ಅಜೇಯ್ ರಾವ್ ಮತ್ತು ಶಶಾಂಕ್ ಅವರದ್ದು ಹಿಟ್ ಕಾಂಬಿನೇಷನ್. ಕೃಷ್ಣ ಸಿರೀಸ್‍ನಲ್ಲಿ ಅಜೇಯ್ ಮತ್ತು ಶಶಾಂಕ್ ಜೋಡಿ ಸೋತಿದ್ದೇ ಇಲ್ಲ. ಈಗ ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. 

ನಿರ್ದೇಶಕ ಶಶಾಂಕ್ ಬರೆದಿರುವ ಕಥೆಯನ್ನು ಶಂಕರ್ ಎಂಬುವರು ನಿರ್ದೇಶನ ಮಾಡುತ್ತಿದ್ದು, ಅಜೇಯ್ ರಾವ್ ನಟಿಸುತ್ತಿದ್ದು, ಗುರುದೇಶಪಾಂಡೆ ನಿರ್ಮಾಣ ಮಾಡುತ್ತಿದ್ದಾರೆ. 

ಜನವರಿ 24ರಂದು ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸ್ಟಾರ್ ಹೀರೋಯಿನ್ ಒಬ್ಬರು ಆಯ್ಕೆಯಾಗುವ ಸಾಧ್ಯತೆ ಇದ್ದು, ಮಾತುಕತೆ ನಡೆಯುತ್ತಿದೆಯಂತೆ. ಜಿ ಸಿನಿಮಾಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ರೈನ್ ಬೋ ಎಂದು ಹೆಸರಿಡಲಾಗಿದೆ.

ಸಿನಿಮಾಗೆ ಇನ್ನೂ ನಾಯಕಿ ಫೈನಲ್ ಆಗಿಲ್ಲ, ರಾಜಹುಲಿ, ರುದ್ರತಾಂಡವ ಹಾಗೂ ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್ ಮ್ಯಾನ್ ,ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಶಂಕರ್ ಮೊದಲ ಬಾರಿಗೆ ಸ್ವತಂತ್ರ್ಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಕೃಷ್ಣ ಅಜಯ್ ರಾವ್,  ಕೃಷ್ಣನ್ ಲವ್ ಸ್ಟೋರಿ, ಮತ್ತು ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರಗಳಲ್ಲಿ ನಟಿಸಿದ್ದಾರೆ.. ಕೃಷ್ಣ ಅಜಯ್ ರಾವ್ ಅವರು ಕೃಷ್ಣ ಟಾಕೀಸ್ ಮತ್ತು ಶೋಕಿವಾಲಾ ಮುಂತಾದ ಚಿತ್ರಗಳು ಇನ್ನೂ ರಿಲೀಸ್ ಆಗಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com