ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ 'ಪಡ್ಡೆ ಹುಲಿ' ಶ್ರೇಯಸ್ ಮಂಜು!

ಪಡ್ಡೆಹುಲಿ ಬಳಿಕ ವಿಷ್ಣು ಪ್ರಿಯಾ ಚಿತ್ರದ ಬಿಡುಗಡೆ ಸಿದ್ಧತೆಯಲ್ಲಿರುವ ನಟ ಶ್ರೇಯಸ್ ಮಂಜು ತಮ್ಮ ಮುಂದಿನ ಚಿತ್ರಕ್ಕಾಗಿ ರೊಮ್ಯಾಂಟಿಕ್ ಕಾಮಿಡಿ ಕಥೆ ಆಯ್ಕೆ ಮಾಡಿದ್ದಾರೆ.
ನಟ ಶ್ರೇಯಸ್ ಮಂಜು
ನಟ ಶ್ರೇಯಸ್ ಮಂಜು

ಬೆಂಗಳೂರು: ಪಡ್ಡೆಹುಲಿ ಬಳಿಕ ವಿಷ್ಣು ಪ್ರಿಯಾ ಚಿತ್ರದ ಬಿಡುಗಡೆ ಸಿದ್ಧತೆಯಲ್ಲಿರುವ ನಟ ಶ್ರೇಯಸ್ ಮಂಜು ತಮ್ಮ ಮುಂದಿನ ಚಿತ್ರಕ್ಕಾಗಿ ರೊಮ್ಯಾಂಟಿಕ್ ಕಾಮಿಡಿ ಕಥೆ ಆಯ್ಕೆ ಮಾಡಿದ್ದಾರೆ.

ಹೌದು.. ತಮ್ಮ ಮುಂಬರುವ ವಿಷ್ಣು ಪ್ರಿಯಾ  ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿರುವ ನಟ ಶ್ರೇಯಾಸ್ ಮಂಜು ಇದೀಗ ರೋಮ್-ಕಾಮ್ (ರೊಮ್ಯಾಂಟಿಕ್ ಕಾಮಿಡಿ) ನ ಭಾಗವಾಗಲು ತಯಾರಿ ನಡೆಸಿದ್ದಾರೆ. ಈ ಚಿತ್ರಕ್ಕಾಗಿ ನಟ ಶ್ರೇಯಸ್ ಮಂಜು ಇತ್ತೀಚೆಗಷ್ಟೇ ಸ್ಕ್ರೀನ್ ಟೆಸ್ಟ್ ಕೂಡ ನಡೆಸಿದ್ದರು. ಈ ಚಿತ್ರಕ್ಕೆ  ಚೆನ್ನೈ ಮೂಲದ ನಾಗಾ ಕಥೆ ಬರೆದಿದ್ದು, ಬೇಸಿಗೆಯ ಆರಂಭದಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ನಟ ಶ್ರೇಯಸ್ ಮಂಜು, 'ವಿಷ್ಣು ಪ್ರಿಯಾ ತಯಾರಿಸುವಾಗ ನಾನು ಈ ಕಥೆ ಕೇಳಿದ್ದೆ. ರೊಮ್ಯಾಂಟಿಕ್ ಹಾಸ್ಯದ ಪರಿಕಲ್ಪನೆಯು ನನಗೆ ಈ ಚಿತ್ರದ ಕುರಿತು ಆಸಕ್ತಿ ಕೆರಳಿಸಿತ್ತು. ಈ ಪಾತ್ರದ ವಿನ್ಯಾಸವನ್ನು ನೃತ್ಯ ಸಂಯೋಜಕ-ನಿರ್ದೇಶಕ ಇಮ್ರಾನ್ ಸರ್ಧಾರಿಯಾ ಅವರು ಮಾಡಿದ್ದಾರೆ,  ಮತ್ತು ಫೋಟೋಗಳನ್ನು ಕಿಸ್ ಚಿತ್ರದ ಖ್ಯಾತಿಯ ಛಾಯಾಗ್ರಾಹಕ ಅರ್ಜುನ್ ಶೆಟ್ಟಿ ಅವರು ಮಾಡಿದ್ದಾರೆ.

ಇನ್ನು ಕಥೆ ಸಿದ್ದವಾಗಿದ್ದರೂ ನಟ ಶ್ರೇಯಸ್ ಮಂಜು ಈ ಚಿತ್ರವನ್ನು ನಿರ್ದೇಶಿಸುವ ನಿರ್ದೇಶಕನ ಹುಡುಕಾಟದಲ್ಲಿ ತೊಡಗಿದ್ದಾರೆ. ಕಥೆಯಲ್ಲಿ ಗಟ್ಟಿತನವನ್ನು ತೆರೆಯ ಮೇಲೆ ತರಬಲ್ಲ ಮತ್ತು ಚಿತ್ರಕಥೆ ಮತ್ತು ಅವನ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಸಮರ್ಥ ನಿರ್ದೇಶಕರ ಹುಡುಕಾಟದಲ್ಲಿ ಶ್ರೇಯಸ್ ಮಂಜು  ತೊಡಗಿದ್ದಾರೆ. 'ನಾವು ಚಿತ್ರಕಥೆಯ ಕೆಲಸ ಮಾಡುತ್ತಿದ್ದೇವೆ. ನಂತರ ನಿರ್ದೇಶಕರು, ಪಾತ್ರವರ್ಗ ಮತ್ತು ಸಿಬ್ಬಂದಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಇಮ್ರಾನ್ ಸರ್ಧರಿಯಾ ನೃತ್ಯ ಸಂಯೋಜನೆ ಮಾಡಲಿದ್ದಾರೆ ಎಂದು ಶ್ರೇಯಸ್ ಹೇಳಿದರು.

ಅಂತೆಯೇ ಈ ಚಿತ್ರವನ್ನು ಕನ್ನಡ ಮಾತ್ರವಲ್ಲದೇ ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿಯೂ ಬಿಡುಗಡೆ ಮಾಡಲು ಯೋಜಿಸಲಾಗುತ್ತಿದೆ. 'ವಿಷ್ಣು ಪ್ರಿಯಾ ಮಲಯಾಳಂನಲ್ಲಿಯೂ ಬಿಡುಗಡೆಯಾಗುತ್ತಿದೆ, ಮತ್ತು ತಮಿಳು ಚಿತ್ರರಂಗದಲ್ಲೂ ನನ್ನನ್ನು ನಾನು ಗುರುತಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು  ನಾನು ಭಾವಿಸಿದೆ ಮತ್ತು ಅದಕ್ಕೆ ತಕ್ಕಂತೆ ಸ್ಕ್ರಿಪ್ಟ್ ರಚಿಸಲಾಗಿದೆ ಎಂದು ಶ್ರೇಯಸ್ ಅವರು ಹೇಳಿದ್ದಾರೆ.

ವಿ.ಕೆ.ಪ್ರಕಾಶ್ ನಿರ್ದೇಶನದ ಅವರ ವಿಷ್ಣು ಪ್ರಿಯಾ ಸಿದ್ಧವಾಗಿದ್ದು, ಆದರೆ ಚಿತ್ರಮಂದಿರಗಳಲ್ಲಿ ಸರ್ಕಾರವು ಸಂಪೂರ್ಣ ಪ್ರೇಕ್ಷಕರನ್ನು ಅನುಮತಿಸಿದಾಗ ಮಾತ್ರ ಅದನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ನಿರ್ಮಾಪಕ ಕೆ ಮಂಜು ನಿರ್ಮಿಸಿದ ಈ ಚಿತ್ರದಲ್ಲಿ ಗೋಪಿ ಸುಂದರ್ ಸಂಗೀತವಿದೆ. ಇದೇ ಚಿತ್ರದ  ಮೂಲಕ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com