ಈ ವರ್ಷ ನಾನು ಹೆಚ್ಚಿನದನ್ನು ಕೇಳಲಾರೆ: ನಟ ದಿಗಂತ್

ಸಾಂಕ್ರಾಮಿಕದ ಕಾರಣ ಯಾವ ಸ್ಪಷ್ಟತೆ ಇಲ್ಲವಾಗಿದ್ದರೂ ವೃತ್ತಿಪರ ಮತ್ತು ವೈಯಕ್ತಿಕ ರಂಗದಲ್ಲಿ 2020 ದಿಗಂತ್ ಪಾಲಿಗೆ ಉತ್ತಮ ವರ್ಷವಾಗಿದೆ. ಹಲವಾರು ಯೋಜನೆಗಳನ್ನು ಮುಗಿಸಿದ ನಂತರ ಇದೀಗ ನಟ ಪೋಸ್ಟ್ ಲಾಕ್ ಡೌನ್ ನಲ್ಲಿ ಕಾರ್ಯತತ್ಪರರಾಗಿದ್ದಾರೆ.
ನಟ ದಿಗಂತ್
ನಟ ದಿಗಂತ್

ಸಾಂಕ್ರಾಮಿಕದ ಕಾರಣ ಯಾವ ಸ್ಪಷ್ಟತೆ ಇಲ್ಲವಾಗಿದ್ದರೂ ವೃತ್ತಿಪರ ಮತ್ತು ವೈಯಕ್ತಿಕ ರಂಗದಲ್ಲಿ 2020 ದಿಗಂತ್ ಪಾಲಿಗೆ ಉತ್ತಮ ವರ್ಷವಾಗಿದೆ. ಹಲವಾರು ಯೋಜನೆಗಳನ್ನು ಮುಗಿಸಿದ ನಂತರ ಇದೀಗ ನಟ ಪೋಸ್ಟ್ ಲಾಕ್ ಡೌನ್ ನಲ್ಲಿ ಕಾರ್ಯತತ್ಪರರಾಗಿದ್ದಾರೆ. ಒಂದೆರಡು ಚಿತ್ರಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. "ಮಾರಿಗೋಲ್ಡ್" ನಿರ್ಮಾಪಕರು ದಿಗಂತ್ ಜನ್ಮದಿನದಂದು ಫಸ್ಟ್-ಲುಕ್ ಪೋಸ್ಟರ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಅಲ್ಲದೆ ಬೇರೆ ಬೇರೆ ಚಿತ್ರ ನಿರ್ಮಾಣ ತಂಡದವರೂ ಸಹ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ಬಿಡುಗಡೆಗಳನ್ನು ಮಾಡುವಯೋಜನೆಯನ್ನು ಹೊಂದಿದ್ದಾರೆ.

“ಯೋಗರಾಜ್ ಭಟ್ ಅವರ "ಗಾಳಿಪಟ 2" ನ ಭಾಗವಾಗಲು ನನಗೆ ಸಂತೋಷವಾಯಿತು. ಇದು ಯಶಸ್ವಿ ಚಿತ್ರವಾಗಿದ್ದು, 10 ವರ್ಷಗಳ ನಂತರ, ಅದರ ಮುಂದುವರಿದ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ನನ್ನ ನಿರೀಕ್ಷಣೆಯ ಚಿತ್ರವಾಗಿದೆ. ಇನ್ನು "ಮಾರಿಗೋಲ್ಡ್" ಚಿತ್ರೀಕರಣವನ್ನು ನಾನು ಪೋಸ್ಟ್ ಲಾಕ್‌ಡೌನ್ ನಲ್ಲಿ ಮುಗಿಸಿದ್ದೇನೆ. ಇದು ಗ್ಯಾಂಗ್ ಸ್ಟರ್  ಬಗೆಗೆ ಇರುವ ಫಾಸ್ಟ್ ಪೇಸ್ ಕಾಮಿಡಿ ಥ್ರಿಲ್ಲರ್. ನಾನು ವೈಯಕ್ತಿಕವಾಗಿ ಇಷ್ಟಪಟ್ಟ ಮತ್ತು ಚಿತ್ರೀಕರಣದ ಸಮಯವನ್ನುಸಂಭ್ರಮಿಸಿದ  ಸ್ಕ್ರಿಪ್ಟ್ ಆಗಿದೆ. 

ನನ್ನ ಇನ್ನೊಂದು ಚಿತ್ರ, "ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ" ವಿಶೇಷವಾದದ್ದು, ಏಕೆಂದರೆ ಏಳು ವರ್ಷಗಳ ನಂತರ ನಾನು ಐಂದ್ರಿತಾ ರೇ ತೆರೆ ಮೇಲೆ ಮತ್ತೆ ಸೇರಿದ್ದೇವೆ. ಇದಲ್ಲದೆ, "ಎವರು" ರೀಮೇಕ್ ಸಹ ಇದ್ದು  ಅದೊಂದು ಥ್ರಿಲ್ಲರ್ ಚಿತ್ರವಾಗಿದೆ, ಈ ಎಲ್ಲದರ ಹಿನ್ನೆಲೆಯಲ್ಲಿ ಈ ವರ್ಷ ಹೆಚ್ಚಿನದನ್ನು ಕೇಳುವಂತಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ದಿಗಂತ್ ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಹೊರತಾಗಿಯೂ, ಆರು ತಿಂಗಳು ಕೆಲಸವಿಲ್ಲದಿದ್ದರೂ ವರ್ಷದ ದ್ವಿತೀಯಾರ್ಧದಲ್ಲಿ ನಾನು ಯೋಜನೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದೆ ಎನ್ನುವ ನಟ” ಅನೇಕ ಜನರು ಒಟ್ಟಿಗೆ ವಾರಗಳವರೆಗೆ ಮನೆಯಲ್ಲಿಯೇ ಇದ್ದರೆ, ಪ್ರಕೃತಿಗೆ ಹತ್ತಿರವಾಗುವುದಕ್ಕೆ ಸಂತೋಷವಾಗುತ್ತದೆ. ಸಾಮಾನ್ಯ ಸಮಯದಲ್ಲಿ ನಾನು ಮಾಡಲಾಗದ ಕೆಲಸಗಳು, ಕೋವಿಡ್ -19 ವೇಳೆಯಲ್ಲಿ ನಿರ್ವಹಿಸುತ್ತಿದ್ದೆ ಮತ್ತು ಅದರಲ್ಲಿ ಬಹಳಷ್ಟು ಕ್ರೀಡಾ ಚಟುವಟಿಕೆಗಳು ಸೇರಿದ್ದವು. ನಾನು ರಾಕ್ ಕ್ಲೈಂಬಿಂಗ್ ಕಲಿತಿದ್ದೇನೆ, ಇದು ನಾನ್ನ ದೀರ್ಘಕಾಲದ ಕನಸಾಗಿತ್ತು.ಸಹಜವಾಗಿ, ಸೈಕ್ಲಿಂಗ್, ನನ್ನ ಜೀವನ ಪ್ರಯಾಣದ ಭಾಗವಾಗಿದೆ. ನಾನು ಕುಂಗ್-ಫೂ ಮತ್ತು ಸರ್ಫಿಂಗ್ ಅನ್ನು ಸಹ ಕಲಿತಿದ್ದೇನೆ” ಎಂದು ದಿಗಂತ್ ಹೇಳುತ್ತಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.ಆದರೆ ಇದರರ್ಥ ನಾವು ಯಾವಾಗಲೂ ಮನೆಯಲ್ಲೇ ಇರಬೇಕು ಎಂದಲ್ಲ. "ಉದ್ಯಮದ ನನ್ನ ಸ್ನೇಹಿತರು ತೊಂದರೆ ಅನುಭವಿಸುತ್ತಿರುವುದನ್ನು ನಾನು ಕಂಡಿದ್ದೇನೆ. ಲಸಿಕೆ ಬರುವವರೆಗೂ ಜನರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಹೇಳುತ್ತೇನೆ.ಸಾಂಕ್ರಾಮಿಕ ರೋಗದ ಹೆಸರಿನಲ್ಲಿ ನಾವು ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಬಹಳಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ, ಮತ್ತು ಚಲನಚಿತ್ರೋದ್ಯಮದ ಮಟ್ಟಿಗೆ ಹೇಳುವುದಾದರೆ, ದೈನಂದಿನ ಕೂಲಿ ಕಾರ್ಮಿಕರು ಆರ್ಥಿಕವಾಗಿ ತೀರಾ ಕಷ್ಟದಲ್ಲಿದ್ದಾರೆ. . ಈ ಎಲ್ಲಾ ಕಾರಣಗಳು ಕೆಲಸಕ್ಕೆ ಹೋಗಲು ನನಗೆ ಪ್ರೇರಣೆಯಾಗಿದೆ. ಆದರೆ ಎಲ್ಲಾ ಬಗೆಯ ಸುರಕ್ಷತಾ ಕ್ರಮಗಳ ಅನುಸರಣೆ ಮುಖ್ಯ" ಅವರು ವಿವರಿಸುತ್ತಾರೆ.

ದಿಗಂತ್ ತಮ್ಮ ಚಿತ್ರಗಳ ಬಿಡುಗಡೆಗಾಗಿ ಎದುರು ನೋಡುತ್ತಿರುವ ನಡುವೆಯೇ ಮುಂದಿನ ಯೋಜನೆಗಳಿಗಾಗಿ ಚಲನಚಿತ್ರ ನಿರ್ಮಾಪಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. "ನಿರ್ದೇಶಕ ಶ್ರೀನಿವಾಸ್ ಇತ್ತೀಚಿನ ಸ್ಪೋರ್ಟ್ಸ್ ಇವೆಂಟ್ ಬಗ್ಗೆ ಒಂದು ಕಥೆಯನ್ನು ಮಂಡಿಸಿದ್ದಾರೆ. ಅವರು ನನ್ನ ರಾಕ್ ಕ್ಲೈಂಬಿಂಗ್ ಮತ್ತು ಕುಂಗ್-ಫೂ ಕೌಶಲ್ಯಗಳಿಂಡ ಸ್ಪೂರ್ತಿ ಪಡೆಇದ್ದಾಗಿದೆ ಅದಕ್ಕೆ ತಕ್ಕಂತೆ ನನ್ನ ಪಾತ್ರವನ್ನು ಚಿತ್ರಿಸಿದ್ದಾರೆ. ಅವರ ಕಥೆ ಸಾಮಾನ್ಯ ಮನುಷ್ಯನ ಅಸಾಮಾನ್ಯ ಪ್ರಯಾಣದ ಬಗ್ಗೆ ಸಾಮಾಜಿಕ ಸಂದೇಶವನ್ನು ಹೊತ್ತು ಬರಲಿದೆ.  ಚರ್ಚೆಗಳು ಪ್ರಾಥಮಿಕ ಹಂತದಲ್ಲಿದ್ದು ಎಲ್ಲವೂ ಸರಿಯಾಗಿ ನಡೆದರೆ, ನಾವು ಜನವರಿಯಲ್ಲಿ ಶೀರ್ಷಿಕೆ ಮತ್ತು ಇತರ ವಿವರಗಳನ್ನು ಖಚಿತಪಡಿಸುತ್ತೇವೆ. ಅಲ್ಲದೆ ಇನ್ನೊಂದು ಚಿತ್ರದ ಬಗ್ಗೆ ನಿರ್ದೇಶಕ ಗೌಸ್ ಅವರೊಂದಿಗೆ ಮಾತುಕತೆ ನಡೆಯುತ್ತಿದೆ" ನಟ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com