ಆ್ಯಕ್ಷನ್ ಕಿಂಗ್ ಧ್ರುವ ಸರ್ಜಾ 'ಪೊಗರು' ತಮಿಳು ರಿಮೇಕ್ ಹೆಸರು ಹೀಗಿದೆ ನೋಡಿ...

ಸ್ಯಾಂಡಲ್'ವುಡ್'ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗಲು ಸಿನಿಮಾ ತಮಿಳಿನಲ್ಲೂ ಬಿಡುಗಡೆಗೆ ಸಜ್ಜುಗೊಂಡಿದ್ದು, ಸಿನಿಮಾದ ಟೈಟಲ್'ನ್ನು ಚಿತ್ರತಂಡ ಬಹಿರಂಪಡಿಸಿದೆ. 
ಧ್ರುವ ಸರ್ಜಾ
ಧ್ರುವ ಸರ್ಜಾ

ಬೆಂಗಳೂರು: ಸ್ಯಾಂಡಲ್'ವುಡ್'ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗಲು ಸಿನಿಮಾ ತಮಿಳಿನಲ್ಲೂ ಬಿಡುಗಡೆಗೆ ಸಜ್ಜುಗೊಂಡಿದ್ದು, ಸಿನಿಮಾದ ಟೈಟಲ್'ನ್ನು ಚಿತ್ರತಂಡ ಬಹಿರಂಪಡಿಸಿದೆ. 

ಪೊಗರು ಸಿನಿಮಾ ತಮಿಳಿನಲ್ಲಿ ಸೆಮ್ಮ ತಿಮಿರು ಎಂಬ ಟೈಟಲ್ ನಲ್ಲಿ ಬಿಡುಗಡೆಯಾಗಲಿದೆ. ಈ ವಿಚಾರವನ್ನು ಖುದ್ದು ಧ್ರುವ ಸರ್ಜಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. 

ಜೊತೆಗೆ ಜನವರಿ 1ರಂದು ತಮಿಳು ಡೈಲಾಗ್ ಟೀಸರ್ ಕೂಡ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಪೊಗಲು ಸಿನಿಮಾ ಕೆಲಸದ ನಿಮಿತ್ತ ಧ್ರುವ ಅವರು ಅರ್ಜುನ್ ಸರ್ಜಾ ಜೊತೆಗೆ ಚೆನ್ನೈಗೆ ತೆರಳುತ್ತಿದ್ದ ಫೋಟೋವನ್ನು ಹಂಚಿಕೊಂಡಿದ್ದರು, ಶೀಘ್ರದಲ್ಲೇ ನಿಮಗೊಂದು ಸರ್ಪೈಸ್ ನೀಡುವುದಾಗಿಯೂ ಹೇಳಿದ್ದರು. 

ಈ ಸಿನಿಮಾ ತೆಲುಗಿಗೂ ಡಬ್‌ ಆಗಿ ತೆರೆ ಕಾಣಲಿದೆ. ಹಿಂದಿ ಡಬ್ಬಿಂಗ್‌ ಹಕ್ಕುಗಳು 7.2 ಕೋಟಿ ರೂ.ಗೆ ಮಾರಾಟ ಆಗಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟುಹೊತ್ತಿಗಾಗಲೇ 'ಪೊಗರು' ರಿಲೀಸ್‌ ಆಗಿರಬೇಕಿತ್ತು. ಆದರೆ ಲಾಕ್‌ಡೌನ್‌ ಮತ್ತು ಕೊರೊನಾ ವೈರಸ್‌ ಕಾರಣದಿಂದಾಗಿ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುತ್ತಲೇ ಬಂದಿದೆ.

ನಂದಕಿಶೋರ್‌ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. 

ರಶ್ಮಿಕಾ ಈಗಾಗಲೇ ಬಹುಭಾಷಾ ತಾರೆಯಾಗಿ ಮಿಂಚುತ್ತಿದ್ದಾರೆ. ಟಾಲಿವುಡ್‌ ಮತ್ತು ಕಾಲಿವುಡ್‌ನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಹಾಗಾಗಿ 'ಪೊಗರು' ಸಿನಿಮಾ ಕೂಡ ತಮಿಳು ಮತ್ತು ತೆಲುಗಿಗೆ ಡಬ್‌ ಆಗುತ್ತಿದೆ. ಈ ನಡುವೆ ರಶ್ಮಿಕಾ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಅವರ ಮೊದಲ ಹಿಂದಿ ಚಿತ್ರಕ್ಕೆ 'ಮಿಷನ್‌ ಮಜ್ನು' ಎಂದು ಶೀರ್ಷಿಕೆ ಇಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com