ಮಾಂಸಾಹಾರ ತ್ಯಜಿಸಿದ ನಟಿ ರಮ್ಯಾ: ಈ ಬಗ್ಗೆ ನಟಿ ಹೇಳೋದೇನು?

ಇತ್ತೀಚೆಗೆ ಸೆಲೆಬ್ರಿಟಿಗಳು ಮಾಂಸಾಹಾರ ತ್ಯಜಿಸಿ ಸಸ್ಯಹಾರಿಗಳಾಗುತ್ತಿದ್ದಾರೆ. ಅದೇ ರೀತಿ ಕನ್ನಡದ ಮೋಹಕ ತಾರೆ ರಮ್ಯಾ ಸಹ ತಾವು ಮಾಂಸಾಹಾರ ತ್ಯಜಿಸುತ್ತಿರುವುದಾಗಿ ಹೇಳಿದ್ದಾರೆ.
ರಮ್ಯಾ
ರಮ್ಯಾ

ಇತ್ತೀಚೆಗೆ ಸೆಲೆಬ್ರಿಟಿಗಳು ಮಾಂಸಾಹಾರ ತ್ಯಜಿಸಿ ಸಸ್ಯಹಾರಿಗಳಾಗುತ್ತಿದ್ದಾರೆ. ಅದೇ ರೀತಿ ಕನ್ನಡದ ಮೋಹಕ ತಾರೆ ರಮ್ಯಾ ಸಹ ತಾವು ಮಾಂಸಾಹಾರ ತ್ಯಜಿಸುತ್ತಿರುವುದಾಗಿ ಹೇಳಿದ್ದಾರೆ. 

ಹೊಸ ವರ್ಷ ಆರಂಭಕ್ಕೂ ಮುನ್ನ ತಾವು ಮಾಂಸಾಹಾರ ತ್ಯಜಿಸುತ್ತಿರುವುದಾಗಿ ನಟಿ ರಮ್ಯಾ ಇನ್ ಸ್ಟಾಗ್ರಾಂನಲ್ಲಿ ಹಳೆಯ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. 

2021ರ ಹೊಸ ವರ್ಷ ಆರಂಭಕ್ಕೂ ಮುನ್ನ ನಾನು ಸಸ್ಯಹಾರಿಯಾಗಿ ಬದಲಾಗಿದ್ದೇನೆ. ದೇಹಕ್ಕೆ ಪ್ರೊಟೀನ್ ಬೇಕು. ಅದಕ್ಕೆ ಮಾಂಸಾಹಾರ ಬಹಳ ಮುಖ್ಯ ಎಂದು ನಾನು ಭಾವಿಸುವುದಿಲ್ಲ. ಈಗ ನಾನು ಪ್ರಾಣಿಜನ್ಯ ಉತ್ಪನ್ನಗಳ ಸೇವನೆಯನ್ನೂ ಬಿಡುವ ಯೋಜನೆ ಮಾಡುತ್ತಿದ್ದೇನೆ. ಐಸ್ ಕ್ರೀಮ್ ಅಂದ್ರೆ ತುಂಬಾ ಇಷ್ಟ. ಆದರೆ ಇದು ಪ್ರಾಣಿ ಜನ್ಯ ಉತ್ಪನ್ನ, ಇದನ್ನು ಬಿಡುವುದು ತುಂಬಾ ಕಷ್ಟ. ಆದರೂ ನಿರ್ಧಾರ ಗಟ್ಟಿಯಾಗಿರಬೇಕಷ್ಟೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com