ಪ್ರಜ್ವಲ್ ದೇವರಾಜ್ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ಅಥವಾ ಅದಿತಿ?
"ಅಂಬಿ ನಿಂಗ್ ವಯಸಾಯ್ತೋ" ನಿರ್ದೇಶಕ ಗುರುದತ್ತ ಗಾಣಿಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಜತೆಗೆ ಆಕ್ಷನ್ ಥ್ರಿಲ್ಲರ್ ನಿರ್ದೇಶಿಸಲು ಸಜ್ಜಾಗಿದ್ದಾರೆ ಚಿತ್ರವೀಗ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಜನವರಿ ಮಧ್ಯದಲ್ಲಿ ಅಧಿಕೃತ ಘೋಷಣೆ ಮಾಡಲು ಚಿತ್ರತಂಡ ಸಿದ್ದವಾಗಿದೆ.
Published: 31st December 2020 12:19 PM | Last Updated: 31st December 2020 12:27 PM | A+A A-

ಆಶಿಕಾ ರಂಗನಾಥ್ ಅದಿತಿ ಪ್ರಭುದೇವ
"ಅಂಬಿ ನಿಂಗ್ ವಯಸಾಯ್ತೋ" ನಿರ್ದೇಶಕ ಗುರುದತ್ತ ಗಾಣಿಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಜತೆಗೆ ಆಕ್ಷನ್ ಥ್ರಿಲ್ಲರ್ ನಿರ್ದೇಶಿಸಲು ಸಜ್ಜಾಗಿದ್ದಾರೆ ಚಿತ್ರವೀಗ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಜನವರಿ ಮಧ್ಯದಲ್ಲಿ ಅಧಿಕೃತ ಘೋಷಣೆ ಮಾಡಲು ಚಿತ್ರತಂಡ ಸಿದ್ದವಾಗಿದೆ. ಸದ್ಯ ಶೀರ್ಷಿಕೆ, ಪಾತ್ರವರ್ಗ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಅಂತಿಮಗೊಳಿಸುವ ಪ್ರಕ್ರಿಯ ನಡೆಯುತ್ತಿದೆ.
ಊ ಸಂಬಂಧ ನಡೆದ ಬೆಳವಣಿಗೆಯಿಂಡರಲ್ಲಿ ಚಿತ್ರದ ನಾಯಕಿ ಪಾತ್ರಕ್ಕಾಗಿ ಆಶಿಕಾ ರಂಗನಾಥ್ ಮತ್ತು ಅದಿತಿ ಪ್ರಭುದೇವ ಅವರುಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಅಲ್ಲದೆ ನಿರ್ದೇಶಕರು ಇಬ್ಬರೂ ನಟಿಯರನ್ನು ಸಂಪರ್ಕಿಸಿದ್ದಾರೆ. ಶೀಘ್ರದಲ್ಲೇ ಅವರಲ್ಲಿ ಒಬ್ಬರನ್ನು ಅಂತಿಮಗೊಳಿಸಲಿದ್ದಾರೆ.
ಆಶಿಕಾ ರಂಗನಾಥ್ ಪ್ರಸ್ತುತ "ರೆಮೋ" ಮತ್ತು "ಮದಗಜ" ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಅದಿತಿ ಪ್ರಭುದೇವ "ತ್ರಿಬಲ್ ರೈಡಿಂಗ್" ಮತ್ತು "ಭಗವಾನ್ ಶ್ರೀ ಕೃಷ್ಣ ಪರಮಾತ್ಮ" ಚಿತ್ರದ ಶೂಟಿಂಗ್ ನಡೆಸಿದ್ದಾರೆ.
ಮಾನವ ಕಳ್ಳಸಾಗಣೆ ಹಿನ್ನೆಲೆಯ ಇನ್ನೂ ಹೆಸರಿಡದ ಥ್ರಿಲ್ಲರ್ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರ ತಂದೆ ದೇವರಾಜ್ ಪ್ರಮುಖ ಪಾತ್ರ ವಹಿಸಲಿದ್ದು, ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣವಿದೆ. ಬೆಂಗಳೂರು ಕುಮಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವು "ವೀರಮ್" ಚಿತ್ರದ ನಂತರ ಸೆಟ್ಟೇರುತ್ತದೆ ಎನ್ನಲಾಗಿದೆ.