ಖ್ಯಾತ ತೆಲುಗು ನಟ ನರ್ಸಿಂಗ್ ಯಾದವ್ ನಿಧನ

ತೆಲುಗು ಚಿತ್ರರಂಗದ ಖ್ಯಾತ ಕಲಾವಿದ ನರ್ಸಿಂಗ್ ಯಾದವ್ ಅವರು ಇಂದು ನಿಧನರಾಗಿದ್ದು ಅವರಿಗೆ 52 ವರ್ಷ ವಯಸ್ಸಾಗಿತ್ತು.
ನಟ ನರ್ಸಿಂಗ್ ಯಾದವ್
ನಟ ನರ್ಸಿಂಗ್ ಯಾದವ್

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ಕಲಾವಿದ ನರ್ಸಿಂಗ್ ಯಾದವ್ ಅವರು ಇಂದು ನಿಧನರಾಗಿದ್ದು ಅವರಿಗೆ 52 ವರ್ಷ ವಯಸ್ಸಾಗಿತ್ತು.

ಮೂತ್ರಪಿಂಡ ಸಂಬಂಧಿತ ಕಾಯಿಲೆಯೊಂದಿಗೆ ಬಳಲುತ್ತಿದ್ದ ನರ್ಸಿಂಗ್ ಯಾದವ್ ಅವರನ್ನು ಹೈದರಾಬಾದ್ ನ ಸೋಮಾಜಿಗೂಡದಲ್ಲಿರುವ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ನರ್ಸಿಂಗ್ ಯಾದವ್ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನರ್ಸಿಂಗ್ ಯಾದವ್ ಅವರು ಅವರು  ಅನೇಕ ಚಲನಚಿತ್ರಗಳಲ್ಲಿ ಹಾಸ್ಯ ಮತ್ತು ಖಳನಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ತೆಲುಗು ಮತ್ತು ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಜನವರಿ 26, 1968 ರಂದು ಹೈದರಾಬಾದ್ನಲ್ಲಿ ನರ್ಸಿಂಗ್ ಯಾದವ್ ಜನಿಸಿದ್ದರು. ಹೇಮಹೆಮಿಲು ಎಂಬ ಚಿತ್ರದ ಮೂಲಕ ನರ್ಸಿಂಗ್ ಯಾದವ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ವೇಳೆ ಪ್ರಮುಖ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಮೊಮೆಂಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನರ್ಸಿಂಗ್ ಯಾದವ್  ಗೆ ಈ ಚಿತ್ರ ದೊಡ್ಡ ಹೆಸರು ತಂದುಕೊಟ್ಟಿತ್ತು. ಬಳಿಕ ಯಾದವ್ ಮಾಯಲೋಡು, ಅಲ್ಲರಿಪ್ರೇಮಿಕುಡು, ಮುಠಾಮೇಸ್ತ್ರಿ, ಮಾಸ್ಟರ್, ನುವೋಸ್ತಾನಂತೆ ನೆನೋದ್ದಂಟಾನಾ, ಈಡಿಯಟ್, ಗಾಯಂ, ಪೋಕಿರಿ, ಯಮದೊಂಗಾ, ಅನ್ನವರಂ, ಜಾನಿ, ಟ್ಯಾಗೋರ್, ಶಂಕರ್ ದಾದಾ ಎಂಬಿಬಿಎಸ್ ಮುಂತಾದ ಚಿತ್ರಗಳಲ್ಲಿ  ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ಕೊನೆಯ ಬಾರಿಗೆ ನರ್ಸಿಂಗ್ ಯಾದವ್ ನಟ ಚಿರಂಜೀವಿ ಅಭಿನಯದ 150ನೇ ಚಿತ್ರ ಖೈದಿ ನಂಬರ್ 150 ಕಾಣಿಸಿಕೊಂಡಿದ್ದರು.

ಮೃತರು ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ. ನಾಳೆ ಹೈದರಾಬಾದ್ ನಲ್ಲಿ ನರ್ಸಿಂಗ್ ಯಾದವ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com