'ರಾಜ ವೀರ ಮದಕರಿ ನಾಯಕ'ನಾಗಲು ಸಜ್ಜಾದ ಸ್ಯಾಂಡಲ್ ವುಡ್ ಡಿ ಬಾಸ್ ದರ್ಶನ್

ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ  ತರುಣ್ ಕಿಶೋರ್ ಸುಧೀರ್ ಅವರ ರಾಬರ್ಟ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡ  ನಂತರ  ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್, ದರ್ಶನ್ ರಾಜ ವೀರ ಮದಕರಿ ನಾಯಕ ಚಿತ್ರದ ಶುತಿಂಗ್ ಪ್ರಾರಂಭಿಸಲಿದ್ದಾರೆ. ಚಿತ್ರದುರ್ಗದ ಕೊನೆಯ ಪಾಳೇಗಾರನ ಜೀವನಾಧಾರಿತ ಚಿತ್ರ ಇದಾಗಿದೆ.  ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಚಿತ್ರ ತಯಾರಾಗಲಿದ
ದರ್ಶನ್
ದರ್ಶನ್

ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ  ತರುಣ್ ಕಿಶೋರ್ ಸುಧೀರ್ ಅವರ ರಾಬರ್ಟ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡ  ನಂತರ  ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್, ದರ್ಶನ್ ರಾಜ ವೀರ ಮದಕರಿ ನಾಯಕ ಚಿತ್ರದ ಶುತಿಂಗ್ ಪ್ರಾರಂಭಿಸಲಿದ್ದಾರೆ. ಚಿತ್ರದುರ್ಗದ ಕೊನೆಯ ಪಾಳೇಗಾರನ ಜೀವನಾಧಾರಿತ ಚಿತ್ರ ಇದಾಗಿದೆ.  ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಚಿತ್ರ ತಯಾರಾಗಲಿದೆ.

ಇತ್ತೀಚಿನ ವರದಿಯ ಪ್ರಕಾರ, ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರವು ಚಿತ್ರಕಥೆ ಮತ್ತು ಸಂಭಾಷಣೆಗಳು ಇದಾಗಲೇ ಸಿದ್ದವಾಗಿದೆ. ಫೆಬ್ರವರಿ 10 ರಿಂದ ಚಿತ್ರೀಕರಣ ಪ್ರಾರಂಬವಾಗಲಿದ್ದು  ಬಿ.ಎಲ್.ವೇಣು ಅವರ ಕಾದಂಬರಿ ಆಧರಿಸಿ ಈ ಐತಿಹಾಸಿಕ ಚಲನಚಿತ್ರವೊಂದು ತಯಾರಾಗುತ್ತಿದೆ. ನಿರ್ಮಾಪಕರು ಚಿತ್ರದ ಕುರಿತು ಘೋಷಣೆ ಮಾಡಿದಂದಿನಿಂದಲೂ ಸಾಕಷ್ಟು ಸೆನ್ಶೇಷನ್ ಉಂಟು ಮಾಡಿದೆ. ಇದಾಗಲೇ ಡಿಸೆಂಬರ್ 2 ರಂದು ಚಿತ್ರದುರ್ಗದಲ್ಲಿ ಸಾಂಪ್ರದಾಯಿಕ ಮಹೂರ್ತ ಸಮಾರಂಬ ನಡೆದಿದ್ದು ಸೆಂಬರ್ 6 ರಂದು ಚಿತ್ರದ ಪ್ರಾರಂಭವನ್ನು ಅಧಿಕೃತವಾಗಿ ನೆರವೇರಿಸಲಾಗಿತ್ತು.ಹಾಗೆಯೇ  ಜನವರಿ 28 ರಂದು ಚಿತ್ರಕಥೆಯ ಬಗೆಗೆ ಪ್ರಕಟಣೆಯೂ ಹೊರಬಿದ್ದಿದೆ. ಇದೀಗ ಇಡೀ ತಂಡವು ಕೊನೆಯ ನಿಮಿಷದ ಪ್ರಿ ಪೊಡಕ್ಷನ್ ನಲ್ಲಿ ನಿರತರಾಗಿದ್ದು ಮೊದಲ ಹಂತದ ಶೂಟಿಂಗ್ ಕೇರಳದಲ್ಲಿ ನಡೆಯಲಿದೆ. , ಅಲ್ಲಿ ದೊಡ್ಡ ಸೆಟ್‌ಗಳು ತಯಾರಾಗುತ್ತಿವೆ. ಚಿತ್ರೀಕರಣದ ಮೊದಲ ಕೆಲವು ದಿನಗಳಲ್ಲಿ ದರ್ಶನ್ ಸೆಟ್ಟಿನಲ್ಲಿರಲಿದ್ದಾರೆ ಎನ್ನಲಾಗಿದೆ.

ಫೆಬ್ರವರಿ 16 ರಂದು ತನ್ನ ಹುಟ್ಟುಹಬ್ಬವನ್ನು ತನ್ನ ಅಭಿಮಾನಿಗಳೊಂದಿಗೆ ಆಚರಿಸಲು ನಟನು ಮೂರು ದಿನಗಳ ವಿರಾಮವನ್ನು ತೆಗೆದುಕೊಳ್ಳುತ್ತಿದ್ದಾರೆ. ಬಳಿಕ ಮತ್ತೆ ಶೂಟಿಂಗ್ ಗಾಗಿ ಕೇರಳಕ್ಕೆ ತೆರಳುವವರಿದ್ದಾರೆ. ಪ್ರೊಡಕ್ಷನ್ ಹೌಸ್ ಇದಾಗಲೇ ಚಿತ್ರದ ತಾಂತ್ರಿಕ ಸಿಬ್ಬಂದಿಗಳನ್ನು ಅಂತಿಮಗೊಳಿಸಿದೆ.

ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಈ ಚಿತ್ರಕ್ಕೆ ಸಂಗೀತ ನೀಡಲು ಸಮ್ಮತಿಸಿದ್ದಾರೆ.ಅಶೋಕ್ ಕಶ್ಯಪ್ಚಿತ್ರದ ಕ್ಯಾಮರಾ ದೃಶ್ಯಗಳ ಸೆರೆಹಿಡಿಯಲಿದ್ದಾರೆ. ಏತನ್ಮಧ್ಯೆ, ತಂಡವು ಚಿತ್ರದ ಗ್ರಾಫಿಕ್ ಕೆಲಸದ ಮೇಲೆ  ಗಮನ ನೀಡಿದೆ. 

ಹಿರಿಯ ನಟಿ ಸುಮಲತಾ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದು ಇನ್ನೂ ಇತರ ಕಲಾವಿದರ ವಿವರಗಳನ್ನು ಇನ್ನೂ ಬಹಿರಂಗಗೊಳಿಸಲಾಗಿಲ್ಲ ಇನ್ನು ಈ ಚಿತ್ರವನ್ನು ಚಿತ್ರರಂಗದ ಮೈಲಿಗಲ್ಲಾಗಿ ಮಾಡಲು ಮುಂದಾಗಿರುವ ನಿರ್ಮಾಪಕ ರಾಕ್‌ಲೈನ್, ಇದನ್ನು ಬಹುಭಾಷಾ ಚಿತ್ರವನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ತಂಡವು ವಿವಿಧ ಇತಿಹಾಸಕಾರರಿಂದ ಮಾಹಿತಿಯನ್ನು ಸಂಗ್ರಹಿಸಿದೆ ಮತ್ತು ಪ್ರೊಫೆಸರ್ ಲಕ್ಷ್ಮಣ್ ತೆಲಗವಿ ಅವರನ್ನೂ ಸಂಪರ್ಕಿಸಿದೆ. ಕೇರಳದ ಹೊರತಾಗಿ ಬೆಂಗಳೂರು, ಚಿತ್ರದುರ್ಗ, ಮುಂಬೈ, ಹೈದರಾಬಾದ್ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಚಿತ್ರೀಕರಣಗೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com