ಯೋಗರಾಜ್ ಭಟ್ರು ತಡರಾತ್ರಿ ಭೇಟಿಯಾಗಿದ್ದು ಯಾರನ್ನ?

ಅದೊಂದು ದಿನ ಯೋಗರಾಜ್ ಭಟ್ರು ಮನೆಗೆ ಬರೋದು ತಡವಾಗಿತ್ತಂತೆ ಪತ್ನಿ ಹುಸಿಮುನಿಸಿನಿಂದ ಬಾಗಿಲು ತೆರೆಯೋಕೆ ಒಲ್ಲೆ ಅಂದ್ರಂತೆ. . .  ಆಗ ಪ್ರವೇಶ ದ್ವಾರದ ಬಳಿ ಪರದಾಡುತ್ತಿದ್ದ ಅವರನ್ನ ವ್ಯಕ್ತಿಯೊಬ್ಬರು ಭೇಟಿಯಾದ್ರಂತೆ...
ಯೋಗರಾಜ್ ಭಟ್
ಯೋಗರಾಜ್ ಭಟ್

ಬೆಂಗಳೂರು: ಅದೊಂದು ದಿನ ಯೋಗರಾಜ್ ಭಟ್ರು ಮನೆಗೆ ಬರೋದು ತಡವಾಗಿತ್ತಂತೆ ಪತ್ನಿ ಹುಸಿಮುನಿಸಿನಿಂದ ಬಾಗಿಲು ತೆರೆಯೋಕೆ ಒಲ್ಲೆ ಅಂದ್ರಂತೆ. . .  ಆಗ ಪ್ರವೇಶ ದ್ವಾರದ ಬಳಿ ಪರದಾಡುತ್ತಿದ್ದ ಅವರನ್ನ ವ್ಯಕ್ತಿಯೊಬ್ಬರು ಭೇಟಿಯಾದ್ರಂತೆ...
  
ಅಷ್ಟು ಹೊತ್ತಿನಲ್ಲಿ ಭಟ್ಟರನ್ನ ಭೇಟಿಯಾಗಿದ್ದು ಯಾರು ಗೊತ್ತಾ? ಅವರ ಎದುರು ಮನೆಯ ಮನೋಹರ್ ಐಯ್ಯರ್!  ಹೌದು, ಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದ ಐಯ್ಯರ್, ಆ ಬಗ್ಗೆ ತಿಳಿಸೋಕೆ ಭಟ್ರ ಬಳಿ ಅಷ್ಟು ಹೊತ್ನಲ್ಲಿ ಬಂದಿದ್ರಂತೆ  
  
“ರಾಜಕೀಯದ ಬಗ್ಗೆ ಗೊತ್ತಿಲ್ಲದ, ಯಾವ ಪಕ್ಷಕ್ಕೂ ಸೇರದ ನನ್ನ ಬಳಿ ಚುನಾವಣೆಗೆ ಸ್ಪರ್ಧಿಸಿದ್ದ ಮನೋಹರ್ ಐಯ್ಯರ ಬಂದಿದ್ರು.  ಕೆಲ ದಿನಗಳ ಬಳಿಕ ಮತ್ತೆ ಭೇಟಿಯಾದಾಗ ಸಿನಿಮಾ ಮಾಡ್ತೀನಿ ಅಂದ್ರು ಬೇಡ ಅಂದಿದ್ದೆ . . . ಆ ಮಾತಿಗೆ ಕೆರಳಿ ನಿಂತ ಐಯ್ಯರ್ ಒಂದೊಳ್ಳೆ ಕಾನ್ಸೆಪ್ಟ್ ಇರೋ ‘ಗುಳೆ’ ಕಿರುಚಿತ್ರವನ್ನ ನಿರ್ಮಿಸಿದ್ದಾರೆ. ಜತೆಗೆ ಐಯ್ಯರ್ ಟಾಕೀಸ್ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ ತುಂಬಾ ಸಂತೋಷವಾಗ್ತಿದೆ” ಎಂದು ಯೋಗರಾಜ್ ಭಟ್ರು ‘ಐಯ್ಯರ್ ಟಾಕೀಸ್’ ಉದ್ಘಾಟನೆ ಬಳಿಕ ತಿಳಿಸಿದರು.
 
ಮನೋಹರ್ ಐಯ್ಯರ್ ಮಾತನಾಡಿ,  ಗುಳೆ.. ಪೂರ್ವ ಸಿದ್ದತೆ ಇಲ್ಲದೆ ನಿರ್ಮಿಸಿದ ಕಿರುಚಿತ್ರ. ನಿರ್ದೇಶಕರು ಕಥೆ ತಂದಾಗ ಐಯ್ಯರ್ ಟಾಕೀಸ್ ಇನ್ನೂ ಹುಟ್ಟಿರಲಿಲ್ಲ. ಸಾಮಾಜಿಕ ಕಳಕಳಿಯ ಹಾಗೂ ದೇಶಭಕ್ತಿ ಸಾರುವ ‘ವಿದುರಾಶ್ವತ್ಥ’ ಮತ್ತು ‘ದೇವರ ಹೂವು’ ಐಯ್ಯರ್ ಟಾಕೀಸ್‍ ನ ಮುಂದಿನ 2 ಕಿರುಚಿತ್ರಗಳಾಗಲಿವೆ"”ಎಂದರು.
  
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖ್ಯಾತ ನಿರ್ದೇಶಕ ಪಿ ಶೇಷಾದ್ರಿ, “ಗುಳೆ’ ಒಳ್ಳೆಯ ಪ್ರಯತ್ನ. ನಿಮಗೋಸ್ಕರ ನೀವು ಚಿತ್ರ ಮಾಡಿದಾಗ ಪ್ರೇಕ್ಷಕರಿಗೂ ತಲುಪುತ್ತದೆ...ಎಂದು ಹೇಳಿದರು.
 
ಸಂಚಾರಿ ವಿಜಯ್ ಮಾತನಾಡಿ, “ಇಂದು ಸರ್ಕಾರಿ ಶಾಲೆಗಳೇ ಗುಳೆ ಹೋಗುವ ಕಾಲ ಬಂದಿದೆ... ಅದನ್ನು ತಡೆಯಬೇಕಿದೆ” ಎಂದು ಹೇಳಿದರು.

ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕಿರುಚಿತ್ರ ‘ಗುಳೆ’ ಐಯ್ಯರ್ ಟಾಕೀಸ್‍ ಸಂಸ್ಥೆಯ ಚೊಚ್ಚಲ ಚಿತ್ರವಾಗಿ ಹೊರಹೊಮ್ಮಿದ್ದು, ಸಾಲದ ಸಮಸ್ಯೆಯಿಂದಾಗಿ ಊರು ಬಿಟ್ಟು ಊರಿಗೆ ಬಂದವರ ಕಥಾಹಂದರ ಹೊಂದಿದೆ.
  
ಗುಳೆ ಬಂದವರು ಒಂದು ಕಡೆ ನೆಲೆಯೂರದ ಕಾರಣ, ಅವರ ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರ, ಸಾರ್ವಜನಿಕರು ಕೈ ಜೋಡಿಸಿ, ಶಿಕ್ಷಣ ವಂಚಿತ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ ಎಂಬ ಕಳಕಳಿಯ ಸಂದೇಶವನ್ನು ಕಿರುಚಿತ್ರ ನೀಡುತ್ತದೆ.

ಬಾಲನಟ ಮುತ್ತು ವಿದ್ಯಾಭ್ಯಾಸಕ್ಕೆ ಐಯ್ಯರ್ ನೆರವು 
‘ಗುಳೆ’ ಚಿತ್ರದಲ್ಲಿ ನಿಜವಾಗಿಯೂ ಗುಳೆ ಬಂದ ಕುಟುಂಬಕ್ಕೆ ಸೇರಿದ್ದ ಮುತ್ತು ಎಂಬ ಬಾಲಕ ನಟಿಸಿದ್ದು, ಈತನ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲ ಬಗೆಯ ನೆರವಿನ ಜವಾಬ್ದಾರಿಯನ್ನು ನಿರ್ಮಾಪಕ ಮನೋಹರ್ ಐಯ್ಯರ್ ವಹಿಸಿಕೊಂಡಿದ್ದಾರೆ
  
ಚಿತ್ರದ ಸಾರಾಂಶ
ಮೈತುಂಬಾ ಸಾಲದ ಜತೆಗೆ ಕುಡುಕ ಗಂಡನನ್ನು ಕಟ್ಟಿಕೊಂಡು, ದಿನಗೂಲಿ ಮಾಡುವ ಆಕೆಗೆ ಮಗನನನ್ನು ಓದಿಸಿ ಸಾಹೇಬನನ್ನಾಗಿ ಮಾಡುವಾಸೆ   ಆದರೆ ಅದನ್ನು ವಿರೋಧಿಸುವ ಪತಿ, ಅವನನ್ನೂ ಕೂಲಿ ಕೆಲಸಕ್ಕೆ ಹಚ್ಚುವಂತೆ ಹೇಳುತ್ತಾನೆ
  
ಮುಂದೆ, ಬಾಲಕನ ಶಾಲೆಗೆ ಹೋಗಲು ಯಾರು ಪ್ರೇರೇಪಿಸುತ್ತಾರೆ, ಇದರಲ್ಲಿ ಸರ್ಕಾರಿ ಶಿಕ್ಷಕರ ಪಾತ್ರವೇನು ಎಂಬುದು ಚಿತ್ರದ ಜೀವಾಳ
  
ಕನ್ನಡದ ಹಲವು ಕಿರು ಚಿತ್ರ ಹಾಗೂ ಚಲನಚಿತ್ರಗಳಿಗೆ ಚಿತ್ರಕಥೆ ಬರೆದಿರುವ ಶ್ರೀನಾಥ್ ಹಡಗಲಿ, ‘ಗುಳೆ’ ಚಿತ್ರವನ್ನು ನಿರ್ದೇಶಿಸಿದ್ದಾರೆ
  
“ಚಿಕ್ಕವನಿದ್ದಾಗ ನೆರೆ ಸಂದರ್ಭದಲ್ಲಿ ನಮ್ಮ ಕುಟುಂಬವೂ ಗುಳೆ ಬಂದಿತ್ತು  ತಂದೆಗೆ ಜವಾಬ್ದಾರಿ ಇದ್ದುದರಿಂದ ನನ್ನ ಶಿಕ್ಷಣಕ್ಕೆ ಕೊರತೆಯಾಗಲಿಲ್ಲ  ಒಂದೆಡೆಯಿಂದ ಮತ್ತೊಂದೆಡೆಗೆ ಗುಳೆ ಹೋಗುವ ಬಹುತೇಕ ಕುಟುಂಬದ ಮಕ್ಕಳೂ ಈಗಲೂ ಶಾಲೆಗೆ ಹೋಗುತ್ತಿಲ್ಲ” ಎಂದುಶ್ರೀನಾಥ್ ಹಡಗಲಿ ಕಳವಳ ವ್ಯಕ್ತಪಡಿಸಿದ್ದಾರೆ
  
ಚಿತ್ರದಲ್ಲಿ ಶೃತಿ ಕುಶಾಲ್, ಪುಟ್ಟಣ್ಣ ವಿಜಯಪುರ, ಶ್ರೀನಾಥ್ ಹಡಗಲಿ, ಮಾಸ್ಟರ್ ಮುತ್ತು, ರಾಧಿಕಾ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com