ಹಾಸ್ಯ ಕಲಾವಿದರು ಕಲಾಸೇವೆಗೆ ಅವಕಾಶ ಸಿಗದೆ ನರಳುತ್ತಿದ್ದಾರೆ: ಟೆನಿಸ್‍ ಕೃಷ್ಣ 

ವಿಶಿಷ್ಟ ಮ್ಯಾನರಿಸಂ, ಸಂಭಾಷಣಾ ವೈಖರಿಯಿಂದಲೇ ಅಭಿಮಾನಿಗಳನ್ನು ರಂಜಿಸುವ 'ನಂಜಪ್ಪನ್ ಮಗ ಗುಂಜಪ್'ಪ ಟೆನಿಸ್‍ ಕೃಷ್ಣ ಇತ್ತೀಚೆಗೆ ಕೊಂಚ ಬಿಝಿಯಾಗಿದ್ದಾರೆ ಎರಡು ವರ್ಷಗಳ ಹಿಂದೆ ಸಿನಿಮಾಗಳಲ್ಲಿ ಅವಕಾಶವೇ ಇಲ್ಲದೆ ತಮ್ಮ ಪಾಡಿಗೆ ತಾವಿದ್ದ ಟೆನ್ನಿಸ್ ಕೃಷ್ಣ ಕೈಯಲ್ಲಿ ಈ ವರ್ಷ 8 ರಿಂದ 10 ಚಿತ್ರಗಳಿವೆಯಂತೆ
ಟೆನಿಸ್ ಕೃಷ್ಣ
ಟೆನಿಸ್ ಕೃಷ್ಣ

ಮೈಸೂರು/ಬೆಂಗಳೂರು:  ವಿಶಿಷ್ಟ ಮ್ಯಾನರಿಸಂ, ಸಂಭಾಷಣಾ ವೈಖರಿಯಿಂದಲೇ ಅಭಿಮಾನಿಗಳನ್ನು ರಂಜಿಸುವ 'ನಂಜಪ್ಪನ್ ಮಗ ಗುಂಜಪ್'ಪ ಟೆನಿಸ್‍ ಕೃಷ್ಣ ಇತ್ತೀಚೆಗೆ ಕೊಂಚ ಬಿಝಿಯಾಗಿದ್ದಾರೆ ಎರಡು ವರ್ಷಗಳ ಹಿಂದೆ ಸಿನಿಮಾಗಳಲ್ಲಿ ಅವಕಾಶವೇ ಇಲ್ಲದೆ ತಮ್ಮ ಪಾಡಿಗೆ ತಾವಿದ್ದ ಟೆನ್ನಿಸ್ ಕೃಷ್ಣ ಕೈಯಲ್ಲಿ ಈ ವರ್ಷ 8 ರಿಂದ 10 ಚಿತ್ರಗಳಿವೆಯಂತೆ

ಮೈಸೂರಿನಲ್ಲಿ ಚಿತ್ರೀಕರಣವೊಂದರಲ್ಲಿ ಭಾಗಿಯಾಗಿರುವ ಅವರು, ಯುಎನ್‍ಐ ಸುದ್ದಿಸಂಸ್ಥೆಯ ಕನ್ನಡ ವಿಭಾಗದೊಡನೆ ಮಾತನಾಡಿ, ಒಂದಷ್ಟು ವಿಷಯಗಳನ್ನು ಹಂಚಿಕೊಂಡರು “ಎರಡು ವರ್ಷಗಳ ಹಿಂದೆ ಯಾವ ಕಾರಣಕ್ಕೋ ಗೊತ್ತಿಲ್ಲ, ಚಿತ್ರರಂಗದಲ್ಲಿ ಅವಕಾಶಗಳೇ ಇಲ್ಲವಾಗಿತ್ತು ಆದರೆ ಅಭಿಮಾನಿಗಳು ಯಾಕೆ ನೀವು ನಟಿಸುತ್ತಿಲ್ಲ ಅಂತ ಪ್ರಶ್ನಿಸುತ್ತಿದ್ದರು, ಇಂತಹ ಸಂದರ್ಭದಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದಾಗ “ಯಾವುದೋ ಗುಂಪೊಂದು ಹಿರಿಯ ಕಲಾವಿದರಿಗೆ ಅವಕಾಶ ಸಿಗದಂತೆ ಮಾಡುತ್ತಿದೆ” ಎಂಬ ವಿಷಯವನ್ನು ನೇರವಾಗಿ ಹೇಳಿದ್ದೆ ಆನಂತರ ಮೂಲೆಗುಂಪಾಗಿದ್ದ ನಟ, ನಟಿಯರಿಗೆ ಅವಕಾಶಗಳು ಸಿಗಲಾರಂಭಿಸಿದವು” ಎಂದರು ಆಸಕ್ತಿ, ಶಕ್ತಿ ಇದ್ದವರನ್ನು ಕಡೆಗಿಸದಿರಿ ಚಿತ್ರರಂಗ ಸೇರಿದಂತೆ ಯಾವುದೇ ಕ್ಷೇತ್ರ ನಿಂತ ನೀರಾಗಬಾರದು, ಹೊಸಬರು ಬರಬೇಕು ನಿಜ ಹಾಗಂತ ಹಳಬರನ್ನು, ಇನ್ನೂ ನಟಿಸುವ ಆಸಕ್ತಿ, ಶಕ್ತಿ ಇದ್ದವರನ್ನು ಕಡೆಗಣಿಸುವುದು ಎಷ್ಟು ಸರಿ ಎಂದು ದನಿಯೆತ್ತಿದೆ ಹೀಗಾಗಿ ಈ ವರ್ಷ 8 ರಿಂದ 10 ಚಿತ್ರಗಳಲ್ಲಿ ನಟಿಸುತ್ತಿದ್ದೇನೆ ಕಳೆದ ವರ್ಷ 7 ಚಿತ್ರಗಳು ಬಿಡುಗಡೆಯಾಗಿವೆ ಆದರೆ ಪ್ರಚಾರದ ಕೊರತೆಯಿಂದ ಕೆಲವಷ್ಟು ಯಶಸ್ವಿಯಾಗಲಿಲ್ಲ ಎಂದು ಹೇಳಿದರು 

ಹಾಸ್ಯ ಕಲಾವಿದರು ಹಸಿದುಕೊಂಡಿಲ್ಲ ಸಿನಿಮಾಗಳಲ್ಲಿ ಅವಕಾಶ ಸಿಗದ ಅನೇಕ ಹಾಸ್ಯ ಕಲಾವಿದರಿದ್ದಾರೆ ಅವರೇನೂ ಹೊಟ್ಟೆಯ ಹಸಿವಿನಿಂದ ನರಳುತ್ತಿಲ್ಲ, ಆದರೆ ಕಲಾಸೇವೆಗೆ ಅವಕಾಶವಾಗುತ್ತಿಲ್ಲವಲ್ಲ ಎಂಬ ನೋವಿನಿಂದ ನರಳುತ್ತಿದ್ದಾರೆ ಹಾಗೆ ನೋಡಿದರೆ ನೆರೆಯ ತಮಿಳು, ತೆಲುಗು ಚಿತ್ರರಂಗದಲ್ಲಿ ಹಿರಿಯ ಕಲಾವಿದರನ್ನು ನಿರ್ಲಕ್ಷ್ಯ ಮಾಡಿಲ್ಲ ನಟಿಸುವ ಶಕ್ತಿಯಿರುವ ಎಲ್ಲರೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಕನ್ನಡ ಚಿತ್ರರಂಗ ಕೂಡ ಯಾರನ್ನೂ ಕೈಬಿಡಬಾರದು ಎಂದು ಟೆನ್ನಿಸ್ ಕೃಷ್ಣ ವಿನಂತಿಸಿಕೊಂಡರು ಉತ್ತರ ಕರ್ನಾಟಕದವರ ಕಲಾಪ್ರೇಮ ಮೆಚ್ಚುವಂತಹುದು ನಾಟಕ ಪ್ರದರ್ಶನಗಳ ಕುರಿತು ಪ್ರಸ್ತಾಪಿಸಿದ ಟೆನ್ನಿಸ್ ಕೃಷ್ಣ, ನಾಟಕಗಳ ಬಗ್ಗೆ ಜನರಿಗೆ ಒಲವು ಇದ್ದೇ ಇದೆ ಅದರಲಲ್ಳೂ ಉತ್ತರ ಕರ್ನಾಟಕದಲ್ಲಿ ಹತ್ತು ಹದಿನೈದು ದಿನಗಳ ಕಾಲ ದಿನಕ್ಕೆರಡು ಪ್ರದರ್ಶನ ವೀಕ್ಷಿಸ್ತಾರೆ ‘ಕುಂಟಕೋಣ, ಮೂಕಜಾಣ’ಎಂಬ ನನ್ನ ನಾಟಕ ಪ್ರದರ್ಶನದ ವೇಳೆ ಅದೆಷ್ಟು ಜನರು ಸೇರಿದ್ದರೆ ಎಂದರೆ, ಲಾಠಿಜಾರ್ಜ್ ಮಾಡಿ ಜನರನ್ನು ನಿಯಂತ್ರಿಸಬೇಕಾಯಿತು ಎಂದು ನೆನಪಿಸಿಕೊಂಡರು 

ಮಾಜಿ ಸಿಎಂ ಸಿದ್ದರಾಮಯ್ಯ ಕಲಾಪ್ರೇಮಿ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕುರಿತು ಮಾತನಾಡಿದ ಟೆನ್ನಿಸ್ ಕೃಷ್ಣ, “ಹಾಸ್ಯ ಕಲಾವಿದರೆಂದರೆ ಸಿದ್ದರಾಮಯ್ಯನವರಿಗೆ ತುಂಬಾ ಇಷ್ಟ ಎಷ್ಟೋ ಸಲ ಅವರ ಜತೆ ಊಟ ಮಾಡಿದ್ದೇನೆ ಇಂದು ಅವರ ನಿವಾಸಕ್ಕೆ ಸ್ವಲ್ಪ ದೂರದಲ್ಲೇ ಶೂಟಿಂಗ್ ಇದ್ದ ಕಾರಣ, ಭೇಟಿ ಮಾಡಿ ಬಂದೆ” ಎಂದರು ಕಲಾಸೇವೆಯ ಮೂಲಕ ಅಭಿಮಾನಿಗಳ ಮನರಂಜಿಸುವುದೇ ತಮ್ಮ ಕರ್ತವ್ಯ ಎಂದು ಭಾವಿಸಿರುವ ಟೆನ್ನಿಸ್ ಕೃಷ್ಣ ಅವರಿಗೆ ಮತ್ತಷ್ಟು, ಮಗದಷ್ಟು ಅವಕಾಶಗಳು ಸಿಗಲಿ ಕನ್ನಡ ಚಿತ್ರರಂಗ ತನ್ನನ್ನು ಕಡೆಗಣಿಸುತ್ತಿದೆ ಎಂಬ ನೋವು ಕಾಡದಿರಲಿ ಎಂಬುದೇ ಯುಎನ್‍ಐ ಸುದ್ದಿಸಂಸ್ಥೆಯ ಕಳಕ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com