ತೆರಿಗೆ ವಂಚನೆ ಆರೋಪ: ತಮಿಳು ನಟ ವಿಜಯ್ ಗೆ ಸಮನ್ಸ್ ನೀಡಿದ ಐಟಿ ಇಲಾಖೆ 

ತೆರಿಗೆ ವಂಚನೆ ಹಾಗೂ  ಫೈನಾನ್ಶಿಯರ್ ಅನ್ಬು ಚೆಹಿಯಾನ್ ಅವರೊಂದಿಗೆ ನಂಟು ಹೊಂದಿರುವ ಆರೋಪದ ಮೇರೆಗೆ ತಮಿಳು ಖ್ಯಾತ ನಟ ವಿಜಯ್ ಅವರಿಗೆ ಆದಾಯ ತೆರಿಗೆ ಇಲಾಖೆ ಇಂದು ಸಮನ್ಸ್ ನೀಡಿದೆ.
ನಟ ವಿಜಯ್
ನಟ ವಿಜಯ್

ಚೆನ್ನೈ: ತೆರಿಗೆ ವಂಚನೆ ಹಾಗೂ  ಫೈನಾನ್ಶಿಯರ್ ಅನ್ಬು ಚೆಹಿಯಾನ್ ಅವರೊಂದಿಗೆ ನಂಟು ಹೊಂದಿರುವ ಆರೋಪದ ಮೇರೆಗೆ ತಮಿಳು ಖ್ಯಾತ ನಟ ವಿಜಯ್ ಅವರಿಗೆ ಆದಾಯ ತೆರಿಗೆ ಇಲಾಖೆ ಇಂದು ಸಮನ್ಸ್ ನೀಡಿದೆ.

ಪನಾಯೂರ್ ನಲ್ಲಿರುವ ವಿಜಯ್ ನಿವಾಸದ ಮೇಲೆ ಶುಕ್ರವಾರ ದಾಳಿ ನಡೆದಿತ್ತು.ಇದರ  ಬೆನ್ನಲ್ಲೇ ಇಂದು ಆದಾಯ ತೆರಿಗೆ ಇಲಾಖೆ ಸಮನ್ಸ್ ಜಾರಿಗೊಳಿಸಿದೆ. 

ಇತ್ತೀಚಿಗೆ ಬಾಕ್ಸ್ ಆಫೀಸ್ ಹಿಟ್ ಆಗುವ ಮೂಲಕ 300 ಕೋಟಿ ಬಾಚಿದ್ದ ಬಿಗಿಲ್ ಚಿತ್ರದ ಯಶಸ್ಸಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.

ಎಜಿಎಸ್ ಸಿನೆಮಾಸ್‌ಗೆ ಸಂಬಂಧಿಸಿದ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ದಾಳಿ ವೇಳೆ ಐ-ಟಿ ಇಲಾಖೆ ಚೆನ್ನೈನಲ್ಲಿರುವ ವಿಜಯ್ ಅವರ ನಿವಾಸದಿಂದ 65 ಕೋಟಿ ರೂ. ವಶಕ್ಕೆ ಪಡೆದಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಚೆನ್ನೈ ಹಾಗೂ ಮಧುರೈಯಲ್ಲಿನ  ಫೈನಾನ್ಶಿಯರ್  ಕಮ್  ನಿರ್ಮಾಪಕ ಅನ್ಬು ಚೆಹಿಯಾನ್  ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ವಾರ ದಾಳಿ ನಡೆಸಿ ಶೋಧ ನಡೆಸಿದ್ದರು.ಈವರೆಗೂ ಸುಮಾರು 165 ಕೋಟಿ ರೂ. ತೆರಿಗೆ ವಂಚನೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಬಹಿರಂಗಪಡಿಸದ ಆದಾಯದ ಪ್ರಮಾಣೀಕರಣ ನಡೆಯುತ್ತಿದೆ ಎಂದು ಮೂಲಗಳು ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.ಚೆನ್ನೈ ಮತ್ತು ಮಧುರೈನಲ್ಲಿನ  ಅಡಗುತಾಣಗಳು ಮತ್ತು ರಹಸ್ಯ ಸ್ಥಳಗಳಿಂದ 77 ಕೋಟಿ ರೂ. ಮತ್ತು ಫೈನಾನ್ಷಿಯರ್‌ಗೆ ಸೇರಿದ 1.25 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳುವುದು ಈ ಹುಡುಕಾಟದ ಪ್ರಮುಖ ಪ್ರಮುಖ ಅಂಶವಾಗಿತ್ತು ಎನ್ನಲಾಗಿದೆ. 

ಬುಧವಾರ ವಿಜಯ್ ಹಾಗೂ ಅನ್ಬು ಚೆಹಿಯಾನ್ ನಿವಾಸದ ಮೇಲೆ ದಾಳಿ ವೇಳೆಯಲ್ಲಿ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳು, ಚೆಕ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಶೋಧ ಕಾರ್ಯಾಚರಣೆ ವೇಳೆ ದೊರತೆ ಸಾಕ್ಷ್ಯಗಳ ಪ್ರಕಾರ ಅಂದಾಜು 300 ಕೋಟಿ ಗೂ ಹೆಚ್ಚು ಮೊತ್ತವನ್ನು ಮರೆಮಾಚಿರುವ ಸಾಧ್ಯತೆ ಇದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com