ಸೆಂಚುರಿ ಸ್ಟಾರ್ ಶಿವಣ್ಣನಿಗಾಗಿ ಡೈರೆಕ್ಟರ್ ಕ್ಯಾಪ್ ಧರಿಸಲಿರುವ ವಿಜಯ್ ಮಿಲ್ಟನ್?

ಸಧ್ಯಕ್ಕೆ  ಧ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ಡಿಒಪಿ ಆಗಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕ ರ್ದೇಶಕ ವಿಜಯ್ ಮಿಲ್ಟನ್, ಶಿವರಾಜ್‌ಕುಮಾರ್ ಜತೆಗಿನ ಚಿತ್ರಕ್ಕಾಗಿ ಸಿದ್ದವಾಗುತ್ತಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಇದೀಗ ನಿರ್ದೇಶಕರು ಹ್ಯಾಟ್ರಿಕ್ ಹೋರೋ ಶಿವಣ್ಣಗೆ ಸ್ಕ್ರಿಪ್ಟ್ ವಿವರಿಸಿದ್ದು ನಟ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ

Published: 10th February 2020 12:16 PM  |   Last Updated: 10th February 2020 12:16 PM   |  A+A-


ಶಿವರಾಜ್‌ಕುಮಾರ್

Posted By : Raghavendra Adiga
Source : The New Indian Express

ಸಧ್ಯಕ್ಕೆ  ಧ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ಡಿಒಪಿ ಆಗಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕ ರ್ದೇಶಕ ವಿಜಯ್ ಮಿಲ್ಟನ್, ಶಿವರಾಜ್‌ಕುಮಾರ್ ಜತೆಗಿನ ಚಿತ್ರಕ್ಕಾಗಿ ಸಿದ್ದವಾಗುತ್ತಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಇದೀಗ ನಿರ್ದೇಶಕರು ಹ್ಯಾಟ್ರಿಕ್ ಹೋರೋ ಶಿವಣ್ಣಗೆ ಸ್ಕ್ರಿಪ್ಟ್ ವಿವರಿಸಿದ್ದು ನಟ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿದೆ. 

ಪ್ರಸ್ತುತ  ಪೊಗರು  ಚಿತ್ರದ ಹಾಡಿನ ಸನ್ನಿವೇಶಗಳನ್ನು ಚಿತ್ರೀಕರಣ ಮಾಡುತ್ತಿರುವ ಡಿಒಪಿ ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್‌ನ ಕೆಲಸ ಪ್ರಾರಂಭಿಸಲಿದ್ದಾರೆ.ಇದು ಸೆಂಚುರಿ ಸ್ಟಾರ್ ಶಿವಣ್ಣನ  124 ನೇ ಚಿತ್ರವಾಗಲಿದೆ. ಈ ನಟ ಪ್ರಸ್ತುತ ತನ್ನ 122 ನೇ ಚಿತ್ರ ಭಜರಂಗಿ 2 ಚಿತ್ರದ ಚಿತ್ರೀಕರಣದಲ್ಲಿದ್ದು, ರವಿ ಅರಸು ನಿರ್ದೇಶನದ ಮತ್ತು ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಿಸಿರುವ ಆರ್‌ಡಿಎಕ್ಸ್‌ ಅವರ ಮುಂದಿನ ಯೋಜನೆಯಾಗಿರಲಿದೆ. ಇನ್ನು ತಮ್ಮ 125 ನೇ ಚಿತ್ರ ಭೈರತಿ ರಣಗಲ್ ಎಂಬುದನ್ನು ಶಿವಣ್ಣ ಇದಾಗಲೇ ತೀರ್ಮಾನಿಸಿದ್ದಾರೆ.ಹಾಗೂ ಇದನ್ನು ಅವರ ಹೋಂ ಬ್ಯಾನರ್ ಶ್ರೀ ಆಂಡ್  ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಿಸಲಾಗಿದೆ 

ಇದೀಗ ಶಿವಣ್ಣ .ತಮ್ಮ 124 ನೇ ಯೋಜನೆಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದು  ವಿಜಯ್ ಮಿಲ್ಟನ್ ಜತೆ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಬಗ್ಗೆ ಮತ್ತೊಂದು ಕುತೂಹಲಕಾರಿ ಸುದ್ದಿ ಎಂದರೆ ಟಗರು ಬಳಿಕ ವಣ್ಣ ಮತ್ತು ಧನಂಜಯ್ ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದಾಗಿದೆ. ನಿರ್ದೇಶಕರು ಇಬ್ಬರೂ ನಟರನ್ನು ಒಟ್ಟಿಗೆ ತೆರೆ ಮೇಲೆ ತೋರಿಸಲು ಕಾತುರರಿದ್ದಾರೆ. ಇದಾಗಲೇ ಸೂರಿ ನಿರ್ದೇಶನದ ಚಿತ್ರದಲ್ಲಿ ಈ ಜೋಡಿ ಮೋಡಿ ಮಾಡಿದ್ದರು. ವಿಜಯ್ ಮಿಲ್ಟನ್ ಮತ್ತೆ ಆ ಮ್ಯಾಜಿಕ್ ಅನ್ನು ತೆರೆಗೆ ಮರಳಿಸಲು ನೋಡುತ್ತಿದ್ದಾರೆ.ಇನ್ನು ಈ ಇಬ್ಬರಲ್ಲದೆ ಇನ್ನೂ ಒಬ್ಬ ನಾಯಕ ಚಿತ್ರದಲ್ಲಿದ್ದಾರೆ ಎನ್ನಲಾಗಿದ್ದು ಆ ಕುರಿತು ವಿವರಗಳು ಇನ್ನೂ ಬಹಿರಂಗವಾಗಿಲ್ಲ. 

ವಿಜಯ್ ಮಿಲ್ಟನ್ ತಮಿಳಿನ ಗೋಲಿ ಸೋಡ ಮೂಲಕ ವಿಮರ್ಶಕರ ಮೆಚ್ಚುಗೆ ಗಳಿಸಿದ್ದರು.ಸ್ಯಾಂಡಲ್ ವುಡ್ ನಲ್ಲಿ ಅಟ್ಟಹಾಸ ಚಿತ್ರದ ಡಿಒಪಿ ಆಗಿ ಹೆಚ್ಚು ಹೆಸರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ  ನಡೆಇದ್ದಾದರೆ ಶಿವಣ್ಣ ಅವರೊಂದಿಗಿನ ಅವರ ಯೋಜನೆಯು ಕನ್ನಡದಲ್ಲಿ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಲಿದೆ. 

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp