ಭಾವಿ ಪತಿ ನಿಖಿಲ್ ಕುಮಾರಸ್ವಾಮಿ ಬಗ್ಗೆ ನಾಚಿದ ರೇವತಿ ಹೇಳಿದ್ದೇನು?

ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ನಿಶ್ಛಿತಾರ್ಥ ಅದ್ಧೂರಿಯಾಗಿ ನೆರವೇರಿತು.
ರೇವತಿ-ನಿಖಿಲ್
ರೇವತಿ-ನಿಖಿಲ್

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ನಿಶ್ಛಿತಾರ್ಥ ಅದ್ಧೂರಿಯಾಗಿ ನೆರವೇರಿತು.

ನಿಶ್ಚಿತಾರ್ಥದ ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದ್ದರು. ಇದಾದ ಬಳಿಕ ಪತ್ರಕರ್ತರೊಬ್ಬರು ರೇವತಿ ಬಳಿ ನಿಖಿಲ್ ಬಗ್ಗೆ ಕೇಳಿದರು. ಆಗ ರೇವತಿ ನಾಚಿಕೆಯಿಂದ ಜಸ್ಟ್ ಐ ಆ್ಯಮ್ ಹ್ಯಾಪಿ ಎಂದು ಹೇಳಿದರು. ಈ ವೇಳೆ ನಾಚಿಕೆಯಿಂದ ನಾರಾದ ಭಾವಿ ಪತ್ನಿಯ ಮಾತನ್ನೇ ನಿಖಿಲ್ ಉಚ್ಛರಿಸಿದರು.

ಒಬ್ಬ ಒಳ್ಳೆಯ ವ್ಯಕ್ತಿಯಾಗಿ ನಿಖಿಲ್ ಅನ್ನು ಇಷ್ಟಪಡುತ್ತಾರಾ ಅಥವಾ ರಾಜಕಾರಣಿ, ಸಿನಿಮಾ ನಟನಾಗಾ ಎಂದು ಪತ್ರಕರ್ತೆಯೊಬ್ಬರು ಕೇಳಿದ್ದರು. ರೇವತಿ ನನಗೆ ತುಂಬಾ ಖುಷಿಯಾಗಿದೆ ಅಷ್ಟೆ ಎಂದು ನಾಚಿಕೊಂಡರು. ಆಗ ನಿಖಿಲ್ ಅವರು ಇದೆಲ್ಲಾ ಮುಖ್ಯವಲ್ಲ. ನೀವು ಕೇಳುವ ಪ್ರಶ್ನೆಯಿಂದ ತುಂಬಾ ಮುಜುಗರ ಪಡುತ್ತಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com