'ಮದಗಜ'ದಲ್ಲಿ ವ್ಯವಸಾಯ ಮಾಡುವ ಹಳ್ಳಿ ಹುಡುಗಿಯ ಪಾತ್ರ ಮಾಡಲು ಉತ್ಸುಕಳಾಗಿದ್ದೇನೆ: ಆಶಿಕಾ

ನಟಿ ಆಶಿಕಾ ರಂಗನಾಥ್ ಗೆ 2020 ಉತ್ತಮ ಆರಂಭ ನೀಡಿದ್ದು, ಕೈಯಲ್ಲಿ ರಾಶಿ ರಾಶಿ ಸಿನಿಮಾಗಳಿವೆ. ಶರಣ್ ಅಭಿನಯದ ‘ಅವತಾರ ಪುರುಷ’, ಪವನ್ ಒಡೆಯರ್ ಅವರ ‘ರೆಮೊ’ ಮತ್ತು ‘ರಂಗಮಂದಿರ’....

Published: 15th February 2020 03:47 PM  |   Last Updated: 15th February 2020 03:47 PM   |  A+A-


ashika1

ಆಶಿಕಾ

Posted By : Lingaraj Badiger
Source : The New Indian Express

ನಟಿ ಆಶಿಕಾ ರಂಗನಾಥ್ ಗೆ 2020 ಉತ್ತಮ ಆರಂಭ ನೀಡಿದ್ದು, ಕೈಯಲ್ಲಿ ರಾಶಿ ರಾಶಿ ಸಿನಿಮಾಗಳಿವೆ. ಶರಣ್ ಅಭಿನಯದ ‘ಅವತಾರ ಪುರುಷ’, ಪವನ್ ಒಡೆಯರ್ ಅವರ ‘ರೆಮೊ’ ಮತ್ತು ‘ರಂಗಮಂದಿರ’ ಚಿತ್ರದ ನಂತರ ಇದೀಗ ನಟ ಶ್ರೀಮುರಳಿ ಅಭಿನಯದ ಮದಗಜ ಚಿತ್ರಕ್ಕೆ ಆಶಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

'ಮದಗಜ' ಚಿತ್ರದ ನಾಯಕಿ ಬಗ್ಗೆ ತೀವ್ರ ಕುತೂಹಲ ಹುಟ್ಟು ಹಾಕಿದ್ದ ನಿರ್ದೇಶಕ ಮಹೇಶ್‌ ಅವರು ಈಗ ನಾಯಕಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್‌ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಮದಗಜ’ಕ್ಕೆ ನಾಯಕಿಯಾಗಿ ಆಯ್ಕೆಯಾದ ಖುಷಿ ಹಂಚಿಕೊಂಡಿರುವ ಆಶಿಕಾ, ಕಥೆ ಹೇಳಿದ ಕೂಡಲೇ ಕೆಲವು ಪಾತ್ರಗಳು ನಮಗೆ ಥ್ರಿಲ್ ಕೊಡುತ್ತವೆ. ಇದು ಸಹ ಅಂತಹ ಥ್ರಿಲ್ ಕೊಡುವಂತಹ ಪಾತ್ರ ಎಂದಿದ್ದಾರೆ.

ಇದು ಒಂದು ದೊಡ್ಡ ಪ್ರೊಡಕ್ಷನ್ ಹೌಸ್, ಈ ಚಿತ್ರ ತಂಡದಲ್ಲಿ ಅನುಭವಿ ತಂತ್ರಜ್ಞರು ಇದ್ದಾರೆ. ಇಂತಹ ತಂಡದಲ್ಲಿ ನಾನೂ ಒಬ್ಬಳಾಗುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಹಲವು ನಟಿಯರ ಪೈಕಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಈ ಚಿತ್ರದಲ್ಲಿ ವ್ಯವಸಾಯ ಮಾಡುವ ಹಳ್ಳಿ ಹುಡುಗಿಯ ಪಾತ್ರ ಮಾಡಲು ನಾನು ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

ಇದು ತುಂಬಾ ರಾ ಲುಕ್ ಇರುವಂತಹ ಪಾತ್ರ. ಕಲ್ಟ್ ಅಂತಾರಲ್ಲ ಹಾಗೆ. ಹಳ್ಳಿ ಹುಡುಗಿ. ವಿದ್ಯಾವಂತೆಯಾಗಿದ್ದರೂ ವ್ಯವಸಾಯದ ಮೇಲೆ ಆಕೆಗೆ ಹೆಚ್ಚು ಆಸಕ್ತಿ. ಹಾಗೆಯೇ ತುಂಬಾ ಬೋಲ್ಡ್ ಆ್ಯಂಡ್ ಟಫ್ ಹುಡುಗಿ. ಇದೇ ಮೊದಲು ನನಗೆ ಇಂತಹ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಗುತ್ತಿದೆ. ಇಷ್ಟು ದಿನ ಇಂತಹ ಪಾತ್ರ ಸಿಕ್ಕಿರಲಿಲ್ಲ ಎಂದು ಆಶಿಕ್ ರಂಗನಾಥ್ ಹೇಳಿದ್ದಾರೆ.

ಮಹೇಶ್‌ ಕುಮಾರ್‌ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಮದಗಜ'ದಲ್ಲಿ ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ಈ ಪಾತ್ರದಲ್ಲಿನಟಿಸಲಿದ್ದು, ಅವರ ಫಸ್ಟ್‌ ಲುಕ್‌ ಸಹ ಬಹಿರಂಗವಾಗಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp