ನಾನು ಒಂದು ವರ್ಷ ದೊಡ್ಡವನಾಗಬಹುದು, ಆದರೆ ನಟನಾಗಿ, ನನ್ನಲ್ಲಿ ಯಾವಾಗಲೂ ಒಂದು ಮಗು ಇರುತ್ತದೆ: ದರ್ಶನ್ 

ಸೆಲೆಬ್ರಿಟಿಗಳು ಅದರಲ್ಲೂ ಚಲನಚಿತ್ರ ನಟ, ನಟಿಯರಿಗೆ ಹುಟ್ಟುಹಬ್ಬವೆಂದರೆ ಒಂದು ಹಬ್ಬ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ನೆಚ್ಚಿನ ನಟನಿಗೆ ಇಷ್ಟವಾದದ್ದನ್ನು ಮಾಡುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗಂತೂ ಈ ತಿಂಗಳು ಸಂಭ್ರಮ-ಸಡಗರ.
ದರ್ಶನ್
ದರ್ಶನ್

ಸೆಲೆಬ್ರಿಟಿಗಳು ಅದರಲ್ಲೂ ಚಲನಚಿತ್ರ ನಟ, ನಟಿಯರಿಗೆ ಹುಟ್ಟುಹಬ್ಬವೆಂದರೆ ಒಂದು ಹಬ್ಬ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ನೆಚ್ಚಿನ ನಟನಿಗೆ ಇಷ್ಟವಾದದ್ದನ್ನು ಮಾಡುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗಂತೂ ಈ ತಿಂಗಳು ಸಂಭ್ರಮ-ಸಡಗರ. ಫೆಬ್ರವರಿ 16 ಅವರ ಹುಟ್ಟುಹಬ್ಬ. ಆದರೆ ಕಳೆದ ವರ್ಷ ಅವರು ಹುಟ್ಟುಹಬ್ಬ ಆಚರಿಸಲಿರಲಿಲ್ಲ, ಹಾಗೆಂದು ಅಭಿಮಾನಿಗಳ ಮನ ನೋಯಿಸಲೂ ಇರಲಿಲ್ಲ. 


ನಾಳೆಗೆ ಅವರಿಗೆ 43 ವರ್ಷವಾಗುತ್ತಿದೆ. ದರ್ಶನ್ ಅವರು ತಮ್ಮ ಹುಟ್ಟುಹಬ್ಬ ದಿನ ಅಭಿಮಾನಿಗಳು ಕೇಕು,ಹಾರ ತರುವುದು ಬೇಡ, ಬದಲಿಗೆ ಅಕ್ಕಿ, ಬೇಳೆ-ಕಾಳು ತನ್ನಿ, ಅದನ್ನು ಹಲವು ಅನಾಥಾಶ್ರಮಗಳು, ವೃದ್ಧಾಶ್ರಮಗಳಿಗೆ ನೀಡೋಣ ಎಂದು ಕಳೆದ ವರ್ಷವೇ ಹೇಳಿದ್ದರು. ಅದನ್ನು ಈ ವರ್ಷವೂ ಮುಂದುವರಿಸಿದ್ದಾರೆ.


ದರ್ಶನ್ ಅವರು ಪ್ರಸ್ತುತ ಕೇರಳದಲ್ಲಿ ವೀರ ಮದಕರಿ ನಾಯಕ ಶೂಟಿಂಗ್ ನಲ್ಲಿದ್ದಾರೆ. ಅಲ್ಲಿಂದ ಇಂದು ಸಂಜೆ ಬೆಂಗಳೂರಿಗೆ ವಾಪಸ್ಸಾಗಿ ನಾಳೆ ದಿನವಿಡೀ ಅಭಿಮಾನಿಗಳಿಗೆ ಮೀಸಲಿಡುತ್ತಾರೆ. 


ಈ ಸಂದರ್ಭದಲ್ಲಿ ದರ್ಶನ್ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ: ಕಳೆದ ಬಾರಿ ಅಪ್ಪಾಜಿ(ಅಂಬರೀಷ್)ಅವರು ತೀರಿಕೊಂಡಿದ್ದರಿಂದ ಹುಟ್ಟುಹಬ್ಬ ಆಚರಿಸುವ ಮನಸ್ಸು ಇರಲಿಲ್ಲ. ಆಗ ನನ್ನ ಸ್ನೇಹಿತ ರಾಕೇಶ್ ಪಾಪಣ್ಣ, ನಿಮ್ಮ ಅಭಿಮಾನಿಗಳಿಗೆ ಬೇಸರ ಆಗುತ್ತದೆ, ವರ್ಷದಲ್ಲಿ ಒಂದು ಬಾರಿ ಕರ್ನಾಟಕದ ಮೂಲೆ ಮೂಲೆಗಳಿಂದ ನಿಮ್ಮನ್ನು ನೋಡಲು ಅಭಿಮಾನಿಗಳು ಬಯಸುತ್ತಾರೆ. ಹೀಗಾಗಿ ಬೇಡ ಎನ್ನಬೇಡಿ ಎಂದರು. ಆಗ ನಾನು ಕೇಕ್, ಹಾರ ತರುವುದು ಬೇಡ, ಅದರ ಬದಲು ಅಕ್ಕಿ, ಬೇಳೆ ಕಾಳುಗಳನ್ನು ತನ್ನಿ ಅಗತ್ಯವಿರುವವರಿಗೆ ನೀಡೋಣ ಎಂದು ಕೇಳಿದೆ. ಅಭಿಮಾನಿಗಳು ನನ್ನ ಮಾತಿಗೆ ಬೆಲೆ ಕೊಟ್ಟು ಅಕ್ಕಿ, ಧಾನ್ಯಗಳನ್ನು ತಂದು ಆಶ್ರಮಗಳಿಗೆ ಕೊಟ್ಟರು. ಬಡಬಗ್ಗರು, ನಿರ್ಗತಿಕರ ಕಣ್ಣಲ್ಲಿ ಕಾಣುವ ಸಂತೋಷ ನಮಗೆ ಖುಷಿ ಕೊಡುತ್ತದೆ ಎಂದರು.


ನಾಳೆ ದರ್ಶನ್ ಹುಟ್ಟುಹಬ್ಬ ಪ್ರಯುಕ್ತ ರಾಬರ್ಟ್ ಚಿತ್ರತಂಡದಿಂದ ಟೀಸರ್ ಬಿಡುಗಡೆಯಾಗಲಿದೆ. ಕೆಲವು ಸಿನಿಮಾಗಳು ಕೂಡ ಘೋಷಣೆಯಾಗಲಿವೆ. ರಾಜಾ ವೀರ ಮದಕರಿ ನಾಯಕ ದರ್ಶನ್ ಅವರ 54ನೇ ಸಿನಿಮಾ. ಚಿತ್ರರಂಗದಲ್ಲಿನ ಅನುಭವ ಮತ್ತು ವಯಸ್ಸು ಸಿನಿಮಾ ಮತ್ತು ಪಾತ್ರಗಳನ್ನು ನೋಡುವ ರೀತಿ ಬದಲು ಮಾಡಿದೆಯೇ ಎಂದು ಕೇಳಿದಾಗ, ನಾನು ಒಂದು ವರ್ಷ ದೊಡ್ಡವನಾಗಬಹುದು. ಆದರೆ ನಟನಾಗಿ ನನ್ನೊಳಗೆ ಯಾವಾಗಲೂ ಒಂದು ಮಗು ಇರುತ್ತದೆ. ಅದು ನೀವು ಎಷ್ಟು ಮುದ್ದು ಮಾಡುತ್ತೀರಿ ಎಂದು ನೋಡುತ್ತದೆ. ನಿರ್ಮಾಪಕರಾಗಿ ಬಂದವರಿಗೆ ನಾನು ಸ್ಟಾರ್ ಆಗಿ ಹೊರಬರುತ್ತೇನೆ. ಚಿತ್ರೀಕರಣ ಸೆಟ್ ನಲ್ಲಿದ್ದಾಗ ನಾನು ಕೇವಲ ಪಾತ್ರದಲ್ಲಿರುತ್ತೇನೆ, ಅಲ್ಲಿ ನಗಬೇಕು ಎಂದಾಗ ನಗಬೇಕು, ಅಳಬೇಕಾದಾಗ ಅಳಬೇಕು, ಕೋಪಿಸಿಬೇಕು ಎಂದಾಗ ಅದೇ ರೀತಿ ನಟಿಸಬೇಕು. ಅಲ್ಲಿ ನೀವು ನಿಮ್ಮ ಮನಸ್ಸಿಗೆ, ತಲೆಗೆ ಮೋಸ ಮಾಡುತ್ತೀರಿ, ನಟರಾದವರು ಶಾರೀರಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಕೂಡ ಮೋಸ ಮಾಡುತ್ತಿರುತ್ತಾರೆ ಎಂದರ್ಥ. ಸೆಟ್ ನಲ್ಲಿ ನೀವು ಪಾತ್ರವನ್ನು ಹೆಚ್ಚೆಚ್ಚು ಮುದ್ದಿಸುತ್ತಾ, ಅಪ್ಪಿಕೊಳ್ಳುತ್ತಾ, ಪ್ರೀತಿಸುತ್ತಾ ಹೋದರೆ ಪಾತ್ರ ಉತ್ತಮವಾಗಿ ಬರುತ್ತದೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com