ಅರ್ಥಪೂರ್ಣ ಹುಟ್ಟುಹಬ್ಬದ ನಡುವೆ ಬೌನ್ಸರ್ ತಲೆಗೆ ಬಾರಿಸಿದ ಡಿ'ಬಾಸ್ '

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಡಿ'ಬಾಸ್' ದರ್ಶನ್  ಸರಳ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಅಭಿಮಾನಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಇಂದು ತಮ್ಮ 44ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 

Published: 16th February 2020 05:05 PM  |   Last Updated: 17th February 2020 12:44 PM   |  A+A-


Challenging Star Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By : nagaraja
Source : Online Desk

ಬೆಂಗಳೂರು: ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಡಿ'ಬಾಸ್' ದರ್ಶನ್  ಸರಳ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಅಭಿಮಾನಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಇಂದು ತಮ್ಮ 44ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 

ರಾಜರಾಜೇಶ್ವರಿ ನಗರದಲ್ಲಿನ ಅವರ ನಿವಾಸಕ್ಕೆ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟನಿಗೆ ಹುಟ್ಟುಹಬ್ಬದ ಶುಭಾಶಯ  ಕೋರಿದರು. ಈ ವೇಳೆ ಒಬ್ಬೊಬ್ಬರೇ ಸಾಲಿನಲ್ಲಿ ಬರುತ್ತಿದ್ದಾಗ ದರ್ಶನ್ ಪಕ್ಕ ನಿಂತಿದ್ದ ಬೌನ್ಸರ್ ಅಭಿಮಾನಿಯೊಬ್ಬನನ್ನು ತಳಿದ್ದಾರೆ. ಇದರಿಂದ ಕುಪಿತಗೊಂಡ ದರ್ಶನ್ ಬೌನ್ಸರ್ ತಲೆಗೆ ಬಾರಿಸಿದ್ದಾರೆ

ತಮ್ಮ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಹಣ ಖರ್ಚು ಮಾಡದಂತೆ ಹಾರ, ತುರಾಯಿ, ಕೇಕ್ ತರದಂತೆ ಅದರ ಬದಲು ದವಸ, ಧಾನ್ಯಗಳನ್ನು ತಂದುಕೊಟ್ಟರೆ ಅದನ್ನು ಅನಾಥಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಕಳುಹಿಸುವುದಾಗಿ ದರ್ಶನ್ ಈ ಹಿಂದೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಅದರಂತೆ ರಾಶಿ ರಾಶಿ ದವಸ- ಧಾನ್ಯಗಳು ದರ್ಶನ್ ಅವರ ಮನೆಗೆ ಬಂದು ಬಿದ್ದಿತ್ತು.

ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಕಿಲೋಮೀಟರ್ ಗಟ್ಟಲೇ ಅಭಿಮಾನಿಗಳು ಕ್ಯೂನಲ್ಲಿ ನಿಂತಿದ್ದರು. ಯಾರೊಬ್ಬರಿಗೂ ನಿರಾಸೆ ಮಾಡದ ದರ್ಶನ್ ಎಲ್ಲರಿಗೂ ಶೆಕ್ ಹ್ಯಾಂಡ್ ಕೊಟ್ಟು ಖುಷಿಪಡಿಸಿದರು. ಆದರೆ, ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್, ಈ ಬಾರಿ ಅಭಿಮಾನಿಗಳಿಂದ ಮೊಲ, ಬಾತುಕೋಳಿಗಳು ಬಂದಿವೆ. ಅವುಗಳನ್ನು ಫಾರ್ಮ್ ಹೌಸ್ ಗೆ ಕಳುಹಿಸುವುದಾಗಿ ತಿಳಿಸಿದರು. ಅಭಿಮಾನಿಗಳು ನೀಡಿರುವ ದವಸ-ಧಾನ್ಯಗಳು ವೃದ್ಧಾಶ್ರಮ, ಅನಾಥಶ್ರಮಗಳನ್ನು ತುಂಬಲಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಬಹುನಿರೀಕ್ಷಿತ ರಾಬರ್ಟ್ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ತಾಳ್ಮೆ, ಪ್ರೀತಿಯಿಂದ ಬಂದರೆ ರಾಮ, ಅದೇ ತಿರುಗಿ ಬಿದ್ದರೆ ಲಂಕಾಧಿಪತಿ ದಶಕಂಠ ರಾವಣ ಎಂದು ರಾಬರ್ಟ್ ಅವತಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಘರ್ಜಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp