ಮತ್ತೆ ಜೋಶ್ ನಲ್ಲಿ ಅಖಾಡಕ್ಕಿಳಿದ ಪೊಗರು ಚಿತ್ರತಂಡ!

ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರ ಕಾರಣಾಂತರಗಳಿಂದ ತಡವಾಗುತ್ತಲೆ ಬಂದಿದ್ದು ಇದೀಗ ಮತ್ತೆ ಹೊಸ ಜೋಶ್ ನೊಂದಿಗೆ ಪೊಗರು ಚಿತ್ರತಂಡ ಅಖಾಡಕ್ಕಿಳಿದಿದೆ.

Published: 17th February 2020 02:20 PM  |   Last Updated: 17th February 2020 02:20 PM   |  A+A-


Dhruva Sarja-Rashmika Mandanna

ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ

Posted By : Vishwanath S
Source : The New Indian Express

ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರ ಕಾರಣಾಂತರಗಳಿಂದ ತಡವಾಗುತ್ತಲೆ ಬಂದಿದ್ದು ಇದೀಗ ಮತ್ತೆ ಹೊಸ ಜೋಶ್ ನೊಂದಿಗೆ ಪೊಗರು ಚಿತ್ರತಂಡ ಅಖಾಡಕ್ಕಿಳಿದಿದೆ. 

ಹೌದು ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪೊಗರು ಚಿತ್ರದ ಹಾಡೊಂದರ ಚಿತ್ರೀಕರಣವನ್ನು ಮುಗಿದಿದೆ. ಎಣ್ಣೆ ಕುರಿತಾದ ಹಾಡು ಇದಾಗಿದೆ. ಬಂದೆ ಬರ್ತಾಳೆ ಹಾಡಿನ ಸಾಹಿತ್ಯವನ್ನು ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಬರೆದಿದ್ದು ಸಂಗೀತ ಸಂಯೋಜನೆ ಮಾಡಿದ್ದಾರೆ. 

ಹರ್ಷ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಧ್ರುವ ಸರ್ಜಾ, ರಶ್ಮಿಕಾ, ಮಯೂರಿ, ರವಿಶಂಕರ್, ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಕುಣಿದಿದ್ದಾರೆ. ಇನ್ನು ಚಿತ್ರದ ಎರಡು ಹಾಡುಗಳು ಬಾಕಿಯಿದ್ದು ಇದೇ ಫೆಬ್ರವರಿ ಅಂತ್ಯದೊಳಗೆ ಹಾಡುಗಳ ಚಿತ್ರೀಕರಣ ಮುಗಿಸಲಾಗುವುದು ಎಂದು ನಿರ್ಮಾಪಕ ಬಿಕೆ ಗಂಗಾಧರ್ ತಿಳಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp