ಶಿವಾಜಿ ಸುರತ್ಕಲ್ ನಲ್ಲಿ ರಮೇಶ್ ಅರವಿಂದ್ ವರ್ಸನ್ 2. 0 - ನಿರ್ದೇಶಕ ಆಕಾಶ್ ಶ್ರಿವತ್ಸ

ರಣಗಿರಿಯ ರಹಸ್ಯ ಕೊಲೆಗಳ ಸುತ್ತ ಸಾಗುವ ಕಥೆಯುಳ್ಳ ರಮೇಶ್  ಅರವಿಂದ್ ಅವರ ಶಿವಾಜಿ ಸುರತ್ಕಲ್ ಚಿತ್ರ ಫೆಬ್ರವರಿ 21 ರಂದು ತೆರೆಗೆ ಅಪ್ಪಳಿಸಿದೆ.
ರಮೇಶ್ ಅರವಿಂದ್
ರಮೇಶ್ ಅರವಿಂದ್

ಬೆಂಗಳೂರು: ರಣಗಿರಿಯ ರಹಸ್ಯ ಕೊಲೆಗಳ ಸುತ್ತ ಸಾಗುವ ಕಥೆಯುಳ್ಳ ರಮೇಶ್  ಅರವಿಂದ್ ಅವರ ಶಿವಾಜಿ ಸುರತ್ಕಲ್ ಚಿತ್ರ ಫೆಬ್ರವರಿ 21 ರಂದು ತೆರೆಗೆ ಅಪ್ಪಳಿಸಿದೆ.ಇದು ರಮೇಶ್ ಅರವಿಂದ್ ಅವರ 101ನೇ ಚಿತ್ರವಾಗಿದ್ದು, ಸಾಕಷ್ಟು ವಿಶೇಷತೆಗಳನ್ನೊಳಗೊಂಡಿದೆ ಎಂದು ನಿರ್ದೇಶಕ ಆಕಾಶ್ ಶ್ರಿವತ್ಸ ಹೇಳುತ್ತಾರೆ. 

ಕೆಎನ್ ರೇಖಾ ಮತ್ತು ಅನೂಫ್ ಗೌಡ ನಿರ್ಮಿಸಿರುವ ಈ ಚಿತ್ರಕ್ಕೆ  ಅಭಿಜಿತ್ ಹಾಗೂ ಆಕಾಶ್ ಶ್ರೀವತ್ಸ ಕಥೆ ಬರೆದಿದ್ದಾರೆ. ಪತ್ತೆದಾರಿ ಸಿನಿಮಾ ಬಗ್ಗೆ ಆಕಾಶ್ ಶ್ರೀವತ್ಸ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. 

 ರಮೇಶ್ ಅರವಿಂದ್ ವರ್ಸನ್ 2. 0 

ಶಿವಾಜಿ ಸುರತ್ಕಲ್  ರಮೇಶ್ ಅರವಿಂದ್ ಅವರ 101ನೇ ಸಿನಿಮಾವಾಗಿದ್ದು, ಕಾಲ ಚಕ್ರವನ್ನು ಮರುಶೋಧಿಸುವಂತಿದೆ. ರಮೇಶ್ ಅವರ ಸಂಭಾಷಣೆ, ದೇಹ ಭಾಷೆ ಎಲ್ಲವೂ ವಿಭಿನ್ನವಾಗಿದ್ದು, ಅವರ ಕೆಲಸವನ್ನು ಇಷ್ಟಪಡುವ ಅಭಿಮಾನಿಗಳಿಗೆ ಈ ಚಿತ್ರ ಖಂಡಿತವಾಗಿ ಇಷ್ಟವಾಗಲಿದೆ ಎನ್ನುವ ಆಕಾಶ್, ಶಿವಾಜಿ ಸುರತ್ಕಲ್ ಪಾತ್ರಕ್ಕಾಗಿ ರಮೇಶ್ ಅರವಿಂದ್ ಉತ್ತಮ ಪ್ರಯತ್ನ ಹಾಕಿರುವುದಾಗಿ ತಿಳಿಸಿದರು.

ಶಿವಾಜಿ ಸುರತ್ಕಲ್ ನಲ್ಲಿ ಶ್ವಾನ ಪಾತ್ರ

ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ರಮೇಶ್ ಅರವಿಂದ್ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಒಂದು ನಾಯಿ ಕೂಡಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಪ್ರಾಣಿಗಳನ್ನು ಪ್ರೀತಿಸುವ ಕುಟುಂಬಗಳನ್ನು ಚಿತ್ರ ತಲುಪಲಿದೆ. ಪ್ರಾಣಿಗಳ ಜೊತೆಗಿನ ಗಟ್ಟಿ ಬಾಂಧವ್ಯವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಇದು ಸಿನಿಮಾ ನೋಡಲು ಒಂದು ರೀತಿಯ ಕುತೂಹಲ ಮೂಡಿಸುತ್ತದೆ ಎಂದರು.

 ಪ್ರೇಕ್ಷಕರನ್ನು ಸೆಳೆಯುವ ಭಾವಾನಾತ್ಮಕ ಅಂಶ

ರಮೇಶ್ ಅರವಿಂದ್ ಅವರ ಚಿತ್ರಗಳು ಯಾವಾಗಲೂ ಭಾವಾನಾತ್ಮಕ ಅಂಶಗಳಿಂದ ಕೂಡಿರುತ್ತವೆ. ಶಿವಾಜಿ ಸುರತ್ಕಲ್ ಸಿನಿಮಾದಲ್ಲೂ ಭಾವನಾತ್ಮಕ ಅಂಶ ಪ್ರಮುಖ ಸಾರಾಂಶವಾಗಿದೆ. ಪಾತ್ರದೊಂದಿಗೆ ಪ್ರೇಕ್ಷಕರು ಸಂತೋಷಪಡಲಿದ್ದಾರೆ ಎನ್ನುವ ವಿಶ್ವಾಸ ಹೊಂದಿರುವುದಾಗಿ ಆಕಾಶ್  ತಿಳಿಸಿದರು. 

ಅಪರಿಚಿತ ಸ್ಥಳದಲ್ಲಿ  ಶೂಟಿಂಗ್ 

ಮಡಿಕೇರಿ- ಕೇರಳ ನಡುವಣದ ದಟ್ಟಅರಣ್ಯ ಪ್ರದೇಶದ ಪರಿಚಿತವಲ್ಲದ ಸ್ಥಳದಲ್ಲಿ ಈ ಚಿತ್ರವನ್ನು ಶೂಟ್ ಮಾಡಲಾಗಿದೆ. ಕ್ಯಾಮರಾ ಮ್ಯಾನ್ ಗುರುಪ್ರಸಾದ್ ಎಂಜಿ ಡ್ರೋಣ್ ಶೂಟ್ ಮಾಡಿದ್ದಾರೆ. ಕಥೆ ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರನ್ನು ಸೆಳೆಯಲಿದೆ. ಮೊಬೈಲ್ ನಲ್ಲಿ ಚಿತ್ರ ನೋಡಿದರೆ ಅದ್ಬುತವಾದ ದೃಶ್ಯಗಳನ್ನು ನೋಡುವುದಕ್ಕೆ ಆಗಲ್ಲ. ಹಾಗಾಗೀ  ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುವಂತೆ ಮನವಿ ಮಾಡಿಕೊಂಡರು. 

ಉತ್ತಮ ತಾಂತ್ರಿಕತೆ

ಶಿವಾಜಿ ಸುರತ್ಕಲ್ ನಲ್ಲಿ ಮಧ್ಯಮ ವರ್ಗದ ಮೌಲ್ಯಗಳನ್ನು ಹೊರಗೆ ತರಲು ಆಕಾಶ್ ಪ್ರಯತ್ನಿಸಿದ್ದಾರೆ. ರಾಧಿಕಾ ನಾರಾಯಣ್ ಅವರಿಂದ ಹಿಡಿದು ಅರೋಹಿ ನಾರಾಯಣ್ ವರೆಗೂ ಎಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಡಬ್ಬಿಂಗ್ ಕಲಾವಿದರು, ಸೌಂಡ್ ಮಿಕ್ಸಿಂಗ್, ವಿಶೇಷ ಎಪೆಕ್ಟ್ ಮತ್ತಿತರ ಎಲ್ಲಾ ತಾಂತ್ರಿಕ ವಿಭಾಗಗಳು  ನನ್ನ ಬೆನ್ನಿಗೆ ನಿಂತಿದ್ದು, ಉತ್ತಮ ಚಿತ್ರ ನಿರ್ಮಿಸಿರುವ ಬಗ್ಗೆ ಚಿತ್ರತಂಡಕ್ಕೆ ಹೆಮ್ಮೆಯ ಭಾವನೆ ಇರುವುದಾಗಿ ತಿಳಿಸಿದರು.

ಕೆಲಸದ ಬಗ್ಗೆ ತೃಪ್ತಿಯಿದ್ದು, ಪ್ರೇಕ್ಷಕರು ಚಿತ್ರವನ್ನು ಸ್ವೀಕರಿಸುವ ವಿಶ್ವಾಸವಿದೆ. ಇದೊಂದು ರೀತಿಯ ವಿಶೇಷ ಚಿತ್ರವಾಗಿದೆ ಎಂದು ಆಕಾಶ್ ಶ್ರೀವತ್ಸ ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com