ರಶ್ಮಿಕಾ ನಾಯಿ ಬಿಸ್ಕೆಟ್ ತಿಂತಾರಾ? ಕಿರಿಕ್ ಬೆಡಗಿಗೆ ಈ ಪರಿಸ್ಥಿತಿ ಬಂದಿದ್ದೇಕೆ?

ಟಾಲಿವುಡ್ ನಲ್ಲಿ ಮಿಂಚುತ್ತಿರುವ ಸಾಂಡಲ್ ವುಡ್ ಬೆಡಗಿ ರಶ್ಮಿಕಾ ಮಂದಣ್ಣ, ಪ್ರಸ್ತುತ ‘ಭೀಷ್ಮ’ ಸಿನಿಮಾದ ಪ್ರಚಾರಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ

Published: 18th February 2020 08:35 AM  |   Last Updated: 18th February 2020 08:35 AM   |  A+A-


Rashmika Mandanna

ರಶ್ಮಿಕಾ ಮಂದಣ್ಣ

Posted By : Shilpa D
Source : UNI

ಬೆಂಗಳೂರು: ಟಾಲಿವುಡ್ ನಲ್ಲಿ ಮಿಂಚುತ್ತಿರುವ ಸಾಂಡಲ್ ವುಡ್ ಬೆಡಗಿ ರಶ್ಮಿಕಾ ಮಂದಣ್ಣ, ಪ್ರಸ್ತುತ ‘ಭೀಷ್ಮ’ ಸಿನಿಮಾದ ಪ್ರಚಾರಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ

ಇದೇ 21ರಂದು ‘ಭೀಷ್ಮ’ ಬಿಡುಗಡೆಯಾಗುತ್ತಿದ್ದು, ಇದೇ ಸಂಭ್ರಮದಲ್ಲಿ ತೇಲುತ್ತಿರುವ ರಶ್ಮಿಕಾ ಹಾಗೂ ಚಿತ್ರದ ನಾಯಕ ನಟ ನಿತಿನ್ ಖಾಸಗಿ ದೃಶ್ಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಿದ್ದ ವೇಳೆ ರಶ್ಮಿಕಾ ನಾಯಿ ಬಿಸ್ಕೆಟ್ ತಿನ್ನುವ ವಿಚಾರವನ್ನು ನಿತಿನ್ ಬಯಲು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತುಂಬ ವರ್ಷಗಳ ನಂತರ ಅನಂತ್‌ನಾಗ್ ಕೂಡ ಈ ಚಿತ್ರದ ಮೂಲಕ ತೆಲುಗು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರತಂಡ ಕೂಡ ತಮ್ಮ ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಸಿಕ್ಕಾಪಟ್ಟೆ ಬಿಜಿಯಿದೆ. ಈ ವೇಳೆ ಸಂದರ್ಶನವೊಂದರಲ್ಲಿ ನಿತಿನ್ ಅವರು ರಶ್ಮಿಕಾ ಅವರ ಡರ್ಟಿ ಸೀಕ್ರೇಟ್ ಹೇಳಿದ್ದಾರೆ.

ಶ್ಮಿಕಾ ಅವರ ಡರ್ಟಿ ಸೀಕ್ರೇಟ್ ಬಗ್ಗೆ ನಿತಿನ್ ಹೇಳುತ್ತೇನೆ ಎಂದಾಗ ರಶ್ಮಿಕಾ ಅವರು ತಡೆದಿದ್ದಾರೆ. ಇವರ ಮಾತನ್ನು ಕೇಳದೆ ನಿತಿನ್ "ನಾವು ಸಾಮಾನ್ಯ ಜನರು ಹಸಿವಾದರೆ ದೋಸೆ, ಬ್ರೆಡ್ ರೀತಿಯ ತಿಂಡಿ ತಿನ್ನುತ್ತೇವೆ. ಆದರೆ ರಶ್ಮಿಕಾ ನಾಯಿ ಬಿಸ್ಕೇಟ್ ತಿಂದಿದ್ದರು" ಎಂದು ಅವರು ಹೇಳಿದ್ದಾರೆ. 

ಆಗ ವಿವರಣೆ ನೀಡಿದಾ ರಶ್ಮಿಕಾ "ಅದು ನಾಯಿ ಬಿಸ್ಕೇಟ್ ಎಂದು ಗೊತ್ತಿರಲಿಲ್ಲ, ನಾನು ಒಂದೇ ಒಂದು ಸಲ ಅದನ್ನು ತಿಂದಿದ್ದೆ" ಎಂದಿದ್ದಾರೆ. ಆಗ ಮತ್ತೆ ಮಾತನಾಡಿದ ನಿತಿನ್ "ಪೆಡಿಗ್ರಿ ಕಂಪೆನಿಯರು ರಶ್ಮಿಕಾ ಅವರನ್ನು ತಮ್ಮ ಕಂಪೆನಿಯ ಉತ್ಪನ್ನದ ಪ್ರಚಾರಕ್ಕಾಗಿ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಬಹುದು" ಎಂದು ನಿತಿನ್ ನಗೆಚಟಾಕಿ ಹಾರಿಸಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp