ನಾನು ಯಾವತ್ತಿಗೂ ಆನಂದ್ ಶಿವರಾಜ್‌ಕುಮಾರ್ ಆಗಿರಲು ಬಯಸುತ್ತೇನೆ: ಸೆಂಚುರಿ ಸ್ಟಾರ್ ಶಿವಣ್ಣ

ಫೆಬ್ರವರಿ 19 ರಂದು ಹ್ಯಾಟ್ರಿಕ್ ಹೋರೋ ಶಿಶಿವರಾಜ್‌ಕುಮಾರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ 34 ವರ್ಷ ಪೂರೈಸುತ್ತಿದೆ. ಶಿವಣ್ಣ ಮೊಟ್ಟ ಮೊದಲ ಬಾರಿಗೆ ಮೆರಾವನ್ನು ಎದುರಿಸಿದ್ದು "ಆನಂದ್" ನಟನೆಗಾಗಿ. ಇದೇ ನಟ ಇಂದು ತಮ್ಮ 123 ನೇ ಯೋಜನೆಯಾದ ಆರ್ಡಿಎಕ್ಸ್ ಪ್ರಾರಂಭದ ಎದುರು ನೋಡುತ್ತಿದ್ದಾರೆ.ಮತ್ತು ಅಂದಿನ ಉತ್ಸಾಹ, ಕುತೂಹಲ ಅವರಲ್ಲಿ ಇಂದಿಗೂ ಉಳಿದಿದೆ.

Published: 19th February 2020 12:08 PM  |   Last Updated: 19th February 2020 02:59 PM   |  A+A-


ಶಿವರಾಜ್‌ಕುಮಾರ್

Posted By : Raghavendra Adiga
Source : The New Indian Express

ಫೆಬ್ರವರಿ 19 ರಂದು ಹ್ಯಾಟ್ರಿಕ್ ಹೋರೋ ಶಿಶಿವರಾಜ್‌ಕುಮಾರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ 34 ವರ್ಷ ಪೂರೈಸುತ್ತಿದೆ. ಶಿವಣ್ಣ ಮೊಟ್ಟ ಮೊದಲ ಬಾರಿಗೆ ಮೆರಾವನ್ನು ಎದುರಿಸಿದ್ದು "ಆನಂದ್" ನಟನೆಗಾಗಿ. ಇದೇ ನಟ ಇಂದು ತಮ್ಮ 123 ನೇ ಯೋಜನೆಯಾದ ಆರ್ಡಿಎಕ್ಸ್ ಪ್ರಾರಂಭದ ಎದುರು ನೋಡುತ್ತಿದ್ದಾರೆ.ಮತ್ತು ಅಂದಿನ ಉತ್ಸಾಹ, ಕುತೂಹಲ ಅವರಲ್ಲಿ ಇಂದಿಗೂ ಉಳಿದಿದೆ.

ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ರವಿ ಅರಸು ನಿರ್ದೇಶಿಸಿದ್ದಾರೆ.ಆರ್ಡಿಎಕ್ಸ್ ಚಿತ್ರದ ಮಹೂರ್ತ ಕಾರ್ಯಕ್ರಮ ಇಂದು (ಬುಧವಾರ) ನೆರವೇರಲಿದೆ.

"ಇದು ಭರವಸೆಯ ಯೋಜನೆಯಾಗಿದೆ ಮತ್ತು ಉತ್ತಮ ತಂಡದೊಂದಿಗೆ ಕೆಲಸ ಮಾಡಲು ನನಗೆ ಸಂತೋಷ.  ನಾನು ಆನಂದ್ ಮಾಡಿದಾಗ ಅನುಭವಿಸಿದ ಅದೇ ರೀತಿಯ ಅನುಭವವನ್ನು ಇವತ್ತಿಗೂ ಕಾಣುತ್ತಿದ್ದೇನೆ." ಶಿವಣ್ಣ ಹೇಳೀದ್ದಾರೆ.

ಶಿವರಾಜ್‌ಕುಮಾರ್ ಅವರು ತಮ್ಮ ವೃತ್ತಿಜೀವನದ ಪ್ರತಿ ವರ್ಷದಲ್ಲಿ ಅವರು ಅನುಭವಿಸಿದ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ವಿಶ್ಲೇಷಿಸುವ ಅಗತ್ಯವಿಲ್ಲ ಎನ್ನುತ್ತಾರೆ"ನಾನು ಆನಂದ್ ಜತೆಗೆ ಪ್ರಾರಂಭಿಸಿದಾಗ ಹೇಗಿದ್ದೆನೋ ಯಾವಾಗಲೂ ಅದೇ ಶಿವರಾಜ್‌ಕುಮಾರ್ ’ಆಗಬೇಕೆಂದು ಬಯಸುತ್ತೇನೆ. ವರ್ಷಗಳ ಅನುಭವದೊಂದಿಗೆ, ನಾನು ಹೆಚ್ಚು ಗುಣಮಟ್ಟದ ಚಲನಚಿತ್ರಗಳನ್ನು ಮತ್ತು ಹೆಚ್ಚು ಸಂದೇಶವನ್ನು ಸಾರುವ ಕಥೆಗಳನ್ನು ಮಾಡುವತ್ತ ನೋಡುತ್ತಿದ್ದೇನೆ ”ಎಂದು ಸೆಂಚುರಿ ಸ್ಟಾರ್ ಹೇಳುತ್ತಾರೆ.

ಆನಂದ್ ಚಿತ್ರದ ಮೊದಲ ದಿನದ ಚಿತ್ರೀಕರಣವನ್ನು ನೆನಪಿಸಿಕೊಂಡ ಶಿವಣ್ಣ, ತಾನು ಹೆದರಲಿಲ್ಲ ಎಂದಿದ್ದಾರೆ."ನಾನು ಅದನ್ನು ಮಾಡಲು ಸಾಧ್ಯವಾಗಿದೆ. ಹಾಗೊಮ್ಮೆ ಆದರೆ  ನಾನು ಹೇಗೆ ಕಾಣಿಸಿಕೊಳ್ಳಲಿದ್ದೇನೆ ಎನ್ನುವುದು ನನ್ನ ಕುತೂಹಲವಾಗಿತ್ತು.ನನ್ನ ಮನಸ್ಸಿನಲ್ಲಿರುವ ಪ್ರಶ್ನೆಗಳು, ನನಗೆ ನೆನಪಿದೆ. ದೇವರಿಗೆ ಧನ್ಯವಾದ ಹೇಳಬೇಕು. ಮೊದಲ ಸಂಭಾಷಣೆ ‘ನನ್ ಹಸರು ಆನಂದ್’ ಅನ್ನು ಸಿಂಗಿತಮ್ ಶ್ರೀನಿವಾಸ ರಾವ್ ಅವರು ನೀಡಿದರು, ಮತ್ತು ಇದು ಸಕಾರಾತ್ಮಕ ನೋಟ್ಸ್ ನಿಂದ ಪ್ರಾರಂಬವಾಗಿತ್ತು.ಎಲ್ಲರೂ ಚಪ್ಪಾಳೆ ತಟ್ಟಿದಾಗ ನಾನು ಸ್ವಲ್ಪ ಭಾವುಕನಾಗಿದ್ದೆ ಮತ್ತು ನಾನು ಸುಂದರವಾಗಿ ಕಾಣುತ್ತಿದ್ದೇನೆ ಎಂದು ಯಾರಾದರೂ ಹೇಳುವುದನ್ನು ಕೇಳಿದಾಗ ನಾನು ಉತ್ಸುಕನಾಗಿದ್ದೆ.  ಅದು ಸ್ಮರಣೀಯ ದಿನ ಮತ್ತು ಅನುಭವವಾಗಿತ್ತು, ”

ಕಳೆದ ಮೂರು ದಶಕಗಳಲ್ಲಿ, ಉದ್ಯಮವು ವಿವಿಧ ಹಂತಗಳು ಮತ್ತು ಬದಲಾವಣೆಗಳನ್ನು ಕಂಡಿದೆ. ಈ ದಿನದ ಚಿತ್ರೋದ್ಯಮ, ಮಾದ್ಯಮಗಳ ಬಗೆಗೆ ನಟ ಮಿಶ್ರಭಾವನೆ ತಾಳಿದ್ದಾರೆ."ತಾಂತ್ರಿಕವಾಗಿ, ನಾವು ಬಹಳ ಮುಂದುವರಿದಿದ್ದೇವೆ.  ಆದರೆ ನಾವು ಈ ಹಿಂದೆ ಹೊಂದಿದ್ದ ಸ್ವಾತಂತ್ರ ಈಗಿಲ್ಲ. ಇಂದು, ಕೆಲಸದ ವಾತಾವರಣದ ದೃಷ್ಟಿಯಿಂದ ಕೆಲವು ರೀತಿಯ ನಿರ್ಬಂಧಗಳಿವೆ. ಆದರೆ ಪ್ರೇಕ್ಷಕರು ಚಿತ್ರವನ್ನು ಸ್ವೀಕರಿಸಿದರೆ  ಅದು ನಮ್ಮ ಉದ್ಯಮದ ಸುಧಾರಣೆಯಾಗುವುದು.  ಆ ಸಮಯದಲ್ಲಿ, ಎಲ್ಲವೂ ಹೊಸದಾಗಿ ಕಾಣುತ್ತಿದ್ದವು, ಆದರೆ 34 ವರ್ಷಗಳಲ್ಲಿ ಎಲ್ಲಾ ಮಾಮೂಲಿ ಎನಿಸಿಕೊಳ್ಳುತ್ತಿದೆ. . ಆದ್ದರಿಂದ ಎಲ್ಲವನ್ನೂ ಇಂದು ಜಾಣತನದಿಂದ ನಿರ್ವಹಿಸಬೇಕು. ಆದರೆ ವೈಯಕ್ತಿಕವಾಗಿ, ನಾನು  ಹಾಗೆಯೇ ಇದ್ದೇನೆ. ನನ್ನ ಕಾರವಾನ್ ಅನ್ನು ಹೊರತುಪಡಿಸಿ ನನ್ನ ನಡವಳಿಕೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ, ವಿರಾಮದ ಸಮಯ ಒಮ್ಮೆ ಮಾತ್ರ ಸಿಗುತ್ತದೆ. ನನ್ನ ಎಲ್ಲಾ ಚಿತ್ರಗಳ ಸೆಟ್‌ಗಳಲ್ಲಿ ನಾನು ನೋಡಲು ಬಯಸುವ ಅದೇ ರೀತಿಯ ಜೀವಂತಿಕೆಯನ್ನು ನಾನು ಅನುಭವಿಸುತ್ತೇನೆ. ”

ಅವರನ್ನು ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಮತ್ತು ಕರುಣಾಡ ಚಕ್ರವರ್ತಿ ಎಂದು ಕರೆಯಲಾಗುತ್ತದೆ ಆದರೆ ನಟನಾಗಿ ಶಿವಣ್ಣ  ಎಂದು ಕರೆಯುವುದೇ ಅವರಿಗಿಷ್ಟ. ವರಾಜ್‌ಕುಮಾರ್ ಪ್ರಸ್ತುತ ಭಜರಂಗಿ  2 ಚಿತ್ರದ ಚಿತ್ರೀಕರಣದಲ್ಲಿದ್ದು ಇದು ಕೊನೆಯ ಹಂತವನ್ನು ತಲುಪಿದೆ. ಮುಂದೆ  ಆರ್‌ಡಿಎಕ್ಸ್ ಪ್ರಾರಂಭವಾದರೆ ಬಳಿಕ ಭೈರತಿ ರಣಗಲ್ ಸಹ ಬರಲಿದೆ.   ಆರ್‌ಡಿಎಕ್ಸ್ ಚಿತ್ರವನ್ನು ಮಾಡುವ ಮುನ್ನವೇ ನಟ ತಮ್ಮ  ಸೋದರಸಂಬಂಧಿ ಲಕ್ಷ್ಮಣ (ಲಕ್ಕಿ ಗೋಪಾಲ್) ಜತೆ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp