ನಾನು ಚಿತ್ರ ನಿರ್ದೇಶನವನ್ನು ಮೊಬೈಲ್ ನೋಡಿ ಕಲಿತದ್ದಲ್ಲ: ನಿರ್ದೇಶಕ ಸೂರಿ

ಫೆಬ್ರವರಿ  ತಿಂಗಳಿಗೆ ಹಾಗೂ ನಿರ್ದೇಶಕ ಸೂರಿಗೆ ವಿಶೇಷ ನಂಟಿದೆ. ಈ ಹಿಂದೆ ಸೂರಿ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರ "ದುನಿಯಾ" ಇದೇ ಫೆಬ್ರವರಿ 23, 2007 ರಂದು ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲದೆ "ಇಂತಿ ನಿನ್ನ ಪ್ರೀತಿಯ", "ಜಂಗ್ಲಿ" ಹಾಗೂ "ಟಗರು" ಸಹ ಫೆಬ್ರವರಿಯಲ್ಲಿಯೇ ತೆರೆ ಕಂಡಿದ್ದವು. ಇದೀಗ ಸೂರಿ ನಿರ್ದೇಶನದ ಚಿತ್ರ " ಪಾಪ್‌ಕಾರ್ನ್ ಮಂಕಿ ಟೈಗರ್" ಈ ಶುಕ್ರ
ನಾನು ಚಿತ್ರ ನಿರ್ದೇಶನವನ್ನು ಮೊಬೈಲ್ ನೋಡಿ ಕಲಿತದ್ದಲ್ಲ: ನಿರ್ದೇಶಕ ಸೂರಿ

ಫೆಬ್ರವರಿ  ತಿಂಗಳಿಗೆ ಹಾಗೂ ನಿರ್ದೇಶಕ ಸೂರಿಗೆ ವಿಶೇಷ ನಂಟಿದೆ. ಈ ಹಿಂದೆ ಸೂರಿ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರ "ದುನಿಯಾ" ಇದೇ ಫೆಬ್ರವರಿ 23, 2007 ರಂದು ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲದೆ "ಇಂತಿ ನಿನ್ನ ಪ್ರೀತಿಯ", "ಜಂಗ್ಲಿ" ಹಾಗೂ "ಟಗರು" ಸಹ ಫೆಬ್ರವರಿಯಲ್ಲಿಯೇ ತೆರೆ ಕಂಡಿದ್ದವು. ಇದೀಗ ಸೂರಿ ನಿರ್ದೇಶನದ ಚಿತ್ರ " ಪಾಪ್‌ಕಾರ್ನ್ ಮಂಕಿ ಟೈಗರ್" ಈ ಶುಕ್ರವಾರ (ಫೆಬ್ರವರಿ 21) ತೆರೆಗೆ ಬರಲು ಸಿದ್ದವಾಗಿದೆ. ಆದರೆ ಸೂರಿ ಪ್ರಕಾರ ಇದೊಂದು ಕಾಕತಾಳೀಯವಾಗಿರುವ ಘಟನೆ.

“ನಾವು ಫೆಬ್ರವರಿ 14 ಪ್ರೇಮಿಗಳ ದಿನದಂದು ಚಿಒತ್ರ ಬಿಡುಗಡೆಗೆ ಯೋಜಿಸಿದ್ದೆವು.ಆದರೆ ಒಂದು ವಾರ ಮುಂದೂಡಿಕೆಯಾಗಿದೆ.ಹಾಗಾಗಿ ಚಿತ್ರ ಶಿವರಾತ್ರಿಯಂದು ತೆರೆ ಕಾಣುತ್ತಿದೆ" ಸೂರಿ ಹೇಳುತ್ತಾರೆ, ಪ್ರತಿಯೊಂದು ಸನ್ನಿವೇಶ ಮತ್ತು ಕ್ಷಣಕ್ಕೂ ಒಂದು ಅರ್ಥವಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಸೂರಿ  ಪ್ರತಿ ಚಿತ್ರದಲ್ಲಿಯೂ ಹೊಸ ಆಲೋಚನೆಯೊಡನೆ ಬರುತ್ತಾರೆ. ಪಾಪ್‌ಕಾರ್ನ್ ಮಂಕಿ ಟೈಗರ್‌ ಸಹ ಇದಕ್ಕೆ ಹೊರತಲ್ಲ.ಇದರಲ್ಲಿ ತಾವು ಕೆಲಸದ ಮಾದರಿಯನ್ನು ಬದಲಾಯಿಸಿಕೊಂಡಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.

"ಕಳೆದ ಕೆಲವು ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿದ ಕೆಲವರುರು ಉತ್ತಮ ವೃತ್ತಿಜೀವನದ ಭವಿಷ್ಯಕ್ಕಾಗಿ ನನ್ನಿಂದ ದೂರವಾದರು.ಅವರಿಗೆ ಶುಭ ಹಾರೈಸುವಾಗ, ಪಾಪ್‌ಕಾರ್ನ್ ಮಂಕಿ ಟೈಗರ್‌ ಚಿತ್ರಕಥೆ ಬರಹಗಾರ ಅಮೃತ ಕೆ ಭಾರ್ಗವ್, ಡಿಒಪಿ ಶೇಖರ್ ಮತ್ತು ಮಲ್ಲ ಸೇರಿದಂತೆ  ಹೊಸ ತಂತ್ರಜ್ಞರ ಜತೆಯಾದೆ. ನಾನು ಟಗರುವಿನಲ್ಲಿಸಂಗೀತ ನಿರ್ದೇಶಕ ಚರಣ್ ರಾಜ್ ಅವರೊಂದಿಗೆ ಕೆಲಸ ಮಾಡಿದ್ದು , ಅವರು ಪಾಪ್‌ಕಾರ್ನ್ ಮಂಕಿ ಟೈಗರ್‌ನೊಂದಿಗೆ ಸಹ ಇನ್ನೊಂದು ಬಾರಿ ನನ್ನ ಜತೆ ಸೇರಿಕೊಂಡಿದ್ದಾರೆ. ಜಯಂತ್ ಕಾಯ್ಕಿಣಿಅವರ ಪುತ್ರ ರಿತ್ವಿಕ್ ಕೂಡ ಈ ಚಿತ್ರದಲ್ಲಿ ನನ್ನೊಡನೆ ಕೂಡಿಕೊಂಡಿದ್ದಾರೆ.ಈ ಹೊಸ ಟೀಂಗೆ ಸಾಕಷ್ಟು ಕೆಲಸಗಳನ್ನು ನೀಡಲು ನನಗೆ ಸಂತೋಷವಾಗಿದೆ ಮತ್ತು ಇದು ನನಗೂ ಸಂಪೂರ್ಣ ಹೊಸ ಅನುಭವವನ್ನು ತಂದಿತು ”ಎಂದು ಸೂರಿ ಹೇಳುತ್ತಾರೆ, 

ಚಿತ್ರ ನಿರ್ಮಾಪಕರಾಗಿದ್ದ ಕೆಪಿ ಶ್ರೀಕಾಂತ್ ತಂಡವನ್ನು ತೊರೆದ ಕಾರಣ ನಿರ್ಮಾಪಕರು ಬದಲಾಗಿದ್ದಾರೆ.ಶ್ರೀಕಾಂತ್ ಜಾಗಕ್ಕೆ ಸುಧೀರ್ ಕೆ.ಎಂ.ಆಗಮನವಾಗಿದ್ದು ಅವರು  ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡು ಪ್ರೊಡಕ್ಷನಲ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. “ಇದು ಶ್ರೀಕಾಂತ್ ಮತ್ತು ನನ್ನ ನಡುವಿನ ನಿರ್ಧಾರ. ನಾನು  ಮತ್ತೆ ಹೇಳುತ್ತಿದ್ದೇನೆ.ಶ್ರೀಕಾಂತ್, ಶಿವಣ್ಣ (ನಟ ಶಿವರಾಜ್ ಕುಮಾರ್) ಮತ್ತು ನಾಗಿ ಅವರ ಬೆಂಬಲವಿಲ್ಲದೆ  ಟಗರು ನಂತಹಾ ದೊಡ್ಡ ಚಿತ್ರ ಅವರಿಗೆ ಸಿಕ್ಕುತ್ತಿರಲಿಲ್ಲವರು ಯಾವಾಗಲೂ ನನ್ನ ಪ್ರಸ್ತುತಿಯಲ್ಲಿ ಉತ್ತಮ ನಂಬಿಕೆಯನ್ನು ಹೊಂದಿದ್ದಾರೆ. ಭವಿಷ್ಯದಲ್ಲಿ ಸಾಧ್ಯವಾದರೆ ನಾವು ಬೇರೆ ಯೋಜನೆಯೊಂದರಲ್ಲಿ ಜತೆಯಾಗುತ್ತೇವೆ"ಅವರು ಹೇಳುತ್ತಾರೆ.

ಟೀಸರ್ ಮತ್ತು ‘ಮಾದೇವಾ’ ಹಾಡನ್ನು ಹೊರತುಪಡಿಸಿ ಸೂರಿ ಪಾಪ್‌ಕಾರ್ನ್ ಮಂಕಿ ಟೈಗರ್ ಬಗ್ಗೆ ಹೆಚ್ಚು ವಿಚಾರ ಬಹಿರಂಗವಾಗಿಲ್ಲ.ಚಿತ್ರದ ಕಥೆ ಮಾಫಿಯಾ ಪ್ರಪಂಚದ ಸುತ್ತ ಸುತ್ತುತ್ತದೆ ಮತ್ತು ಸೀನ ಹಾಗೂ ದೇವಿಕಾ ಎಂಬ ಎರಡು ಪಾತ್ರಗಳ ಮೂಲಕ ನಿರೂಪಿತವಾಗುತ್ತದೆ ಇದು ಮಾನವೀಯ ಮೌಲ್ಯಗಳನ್ನು ಆಧರಿಸಿದ ಚಿತ್ರವೆನ್ನಲಾಗಿದೆ."ಕೆಲವೇ ವಿವರಗಳನ್ನು ಬಹಿರಂಗಪಡಿಸುವ ಮೂಲಕ, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಸೆಳೆದೆ ಅಲ್ಲಿ ಹೊಸದನ್ನೇ ತೋರಿಸಲು ನಾನು ಬಯಸಿದ್ದೇನೆ.ವೀಕ್ಷಕರು ಚಲನಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಹೋಗಬೇಕು, ತಂತ್ರಜ್ಞಾನದ ಪ್ರಭಾವವು ಅವರನ್ನು ಟೇಬಲ್ ಮುಂದೆ ಕೂರಿಸಿದೆ. ಇಂದು, ಎಲ್ಲರೂ ಫಾಸ್ಟ್ ಫುಡ್ ಜೀವನಶೈಲಿಯನ್ನು ಅನುಸರಿಸುತ್ತಾರೆ. ಒಂದು ದಿನದಲ್ಲಿ ಯಾವುದೇ ಶೂಟಿಂಗ್ ನಡೆದರೂ ಯೂಟ್ಯೂಬ್‌ನಲ್ಲಿ ಅಪ್ ಆಗಬೇಕು. ನಾನು ಶೂಟಿಂಗ್ ಮಾಡುವಾಗ ಟಿವಿಯಲ್ಲಿ ಯಾವಾಗ ಬರುತ್ತದೆ ಎಂದು ಜನರು ನನ್ನನ್ನು ಕೇಳುತ್ತಿದ್ದರು. ಇಂದು, ನಾವು ಅದನ್ನು ಮೊಬೈಲ್‌ನಲ್ಲಿ ಯಾವಾಗ ನೋಡಬಹುದು ಎಂದು ಪ್ರೇಕ್ಷಕರು ಕೇಳುತ್ತಿದ್ದಾರೆ. ಪ್ರಸ್ತುತ, ನನಗೆ ಸವಾಲೆಂದರೆ ಚಲನಚಿತ್ರವನ್ನು  ಮೊಬೈಲ್ ನಲ್ಲಲ್ಲದೆ ಚಿತ್ರಮಂದಿರಗಳಲ್ಲಿ ಅನುಭವಿಸಲು ಜನರನ್ನು ಪ್ರೇರಿಸುವುದು.

" ಮೊಬೈಲ್‌ಗಳಲ್ಲಿ ಚಲನಚಿತ್ರಗಳನ್ನು ನೋಡುವ ಮೂಲಕ ನಾನು ಚಲನಚಿತ್ರ ತಯಾರಿಕೆಯನ್ನು ಕಲಿಯಲಿಲ್ಲ. ನಾನು ಚಿತ್ರಮಂದಿರಗಳಿಗೆ ಹೋಗಿ ಧ್ವನಿ ನಿರ್ದೇಶನ, ಕೆಲವು ಮಹಾನ್ ಚಿತ್ರ ನಿರ್ಮಾಣದ ದೃಶ್ಯಗಳು ಮತ್ತು ಕೃತಿಗಳನ್ನು ತಿಳಿದುಕೊಂಡೆ.ಚಿತ್ರಮಂದಿರಗಳಲ್ಲಿ ನಮ್ಮ ಪ್ರಯತ್ನವನ್ನು ಜನರು ಅನುಭವಿಸಬೇಕೆಂದು ನಾನು ಬಯಸುತ್ತೇನೆ. ಚಿತ್ರದ ಬಗ್ಗೆ ನಾನು ತುಂಬಾ ಕಡಿಮೆ ವಿಚಾರ ಹೇಳುವುದಕ್ಕೆ ಇದುವೇ ಕಾರಣವಾಗಿದೆ" ಸೂರಿ ಹೇಳಿದರು.

ಧನಂಜಯ್ ಮತ್ತು ನಿವೇದಿತಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪಾಪ್‌ಕಾರ್ನ್ ಮಂಕಿ ಟೈಗರ್‌ನ ಸಮಗ್ರ ತಾರಾಗಣದ ಬಗ್ಗೆ ಮಾತನಾಡಿದ ನಿರ್ದೇಶಕ ಸಪ್ತಮಿ ಗೌಡ, ಮೋನಿಷಾ ನದ್ಗೀರ್ ಮತ್ತು ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಎಂದು ಅವರು ಹೇಳಿದ್ದಾರೆ.  "ನನ್ನ ಎಲ್ಲಾ ಚಲನಚಿತ್ರಗಳು ಅತ್ಯುತ್ತಮ ಸಂಗೀತವನ್ನು ಪಡೆಯುತ್ತಿರುವಾಗ, ನಟರು ಯಾವಾಗಲೂ ನನ್ನ ಕ್ಯಾನ್ವಾಸ್‌ಗೆ ಮತ್ತು ಫ್ಲೈಯಿಂ ಕಲರ್ಸ್ ಜೀವ ತುಂಬಿದ್ದಾರೆ. ಇದು ಪಾಪ್‌ಕಾರ್ನ್ ಮಂಕಿ ಟೈಗರ್‌ನ ವಿಚಾರವೂ ಹೌದು. ಈ ಚಿತ್ರದ ಭಾಗವಾಗಿರುವ ಪ್ರತಿಯೊಬ್ಬ ನಟರೂ ಅತ್ಯುತ್ತಮ ಕೆಲಸ ಮಾಡಿದ್ದಾರೆ ”ಎಂದು ಅವರು ಹೇಳುತ್ತಾರೆ.

ಇನ್ನು ಸೂರಿ ತಮ್ಮ ಚಿತ್ರದಲ್ಲಿ ಂಆಫಿಯಾ ಜಗತ್ತನ್ನು ತೋರಿಸ ಹೊರಟಿದ್ದೇಕೆ ಎಂದರೆ "ಮಾಫಿಯಾ ಪ್ರಪಂಚವು ಬಹಳಷ್ಟು ಮಾರ್ಪಾಡುಗಳನ್ನು ಹೊಂದಿದೆ, ಮತ್ತು ಅಂತಹ ಸ್ಥಳಗಳಲ್ಲಿನ ಭಾವನೆಗಳು ಸಾವಿಗೆ ಹತ್ತಿರದಲ್ಲಿರುತ್ತದೆ.ಅದನ್ನು ನಾನು ಪರದೆಯ ಮೇಲೆ ಅನ್ವೇಷಿಸಲು ಬಯಸುತ್ತೇನೆ. ನಮ್ಮ ಚಿತ್ರದ ವಿಭಿನ್ನ ಕಂತುಗಳ ಮೂಲಕ ವಿವಿಧ ಜನರು ಹಂಚಿಕೊಂಡ ಭಾವನೆಗಳು ಪ್ರತಿಫಲಿಸಿರುವುದರಿಂದ ಚಿತ್ರವು ವಾಸ್ತವಕ್ಕೆ ಹತ್ತಿರವಾಗಲಿದೆ" 

ಪಾಪ್‌ಕಾರ್ನ್ ಮಂಕಿ ಟೈಗರ್‌ನಿಂದ ಪ್ರೇಕ್ಷಕರು ಏನನ್ನು ನಿರೀಕ್ಷಿಸಬೇಕು ಎಂದು ಕೇಳಿದಾಗ ಸಿನೆಮಾ ಎನ್ನುವುದು ಮನರಂಜನೆಯ ವಿಷಯವಾಗಿದೆ ಎಂದು ಅವರು ಹೇಳುತ್ತಾರೆ. “ನಾನು ಅದರ ಸರಿ ಮತ್ತು ತಪ್ಪು ಚರ್ಚಿಸಲು ಬಯಸುವುದಿಲ್ಲ. ಇವೆಲ್ಲವೂ ಪ್ರತಿ ಆಲೋಚನೆಯ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಅದು ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನಮಗೆ ಅಳೆಯಲು ಬರುವುದಿಲ್ಲ”ಎಂದು ನಿರ್ದೇಶಕರು ಹೇಳುತ್ತಾರೆ. "ಪ್ರೇಕ್ಷಕರು ನನ್ನನ್ನು ನಂಬುತ್ತಾರೆ, ಮತ್ತು ಮನರಂಜನೆಯ ವಿಷಯಕ್ಕೆ ಬಂದಾಗ, ನಾನು ಅವರಿಗೆ ಮೋಸ ಮಾಡುವುದಿಲ್ಲ ಎಂದು ಅವರಿಗೆ ತಿಳಿದಿದೆ. ಮನರಂಜನೆಯ ಹೆಸರಿನಲ್ಲಿ ನಾನು ಪ್ರೇಕ್ಷಕರನ್ನು ಮೋಸ ಮಾಡಬಾರದು ಹಾಗಾಗಿ ಅವರು ಯಾವುದೇ ನಿರೀಕ್ಷೆಗಳಿಲ್ಲದೆ ಪಾಪ್‌ಕಾರ್ನ್ ಮಂಕಿ ಟೈಗರ್ ಅನ್ನು ನೋಡಬೇಕೆಂದು ನಾನು ಬಯಸುತ್ತೇನೆ, ”ಎಂದು ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com