ಶಿವಣ್ಣನ 'ಆರ್‌ಡಿಎಕ್ಸ್' ಗೆ ಜತೆಯಾದ ಪ್ರಿಯಾ ಆನಂದ್

ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ ಆನಂದ್ ರವಿ ಅರಸು ನಿರ್ದೇಶನದ ಶಿವರಾಜ್‌ಕುಮಾರ್ ಅಭಿನಯದ ಆರ್‌ಡಿಎಕ್ಸ್ ಚಿತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಗೋಲ್ಡನ್ ಸ್ಟಾರ್ ಗನೇಶ್ ನಟನೆಯ ಆರೆಂಜ್ ಬಳಿಕ ಪ್ರಿಯಾ ಪಾಲಿನ ಮೂರನೇ ಕನ್ನಡ ಸಿನಿಮಾ ಆಗಿದೆ.

Published: 19th February 2020 11:40 AM  |   Last Updated: 19th February 2020 11:40 AM   |  A+A-


ಪ್ರಿಯಾ ಆನಂದ್

Posted By : Raghavendra Adiga
Source : The New Indian Express

ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ ಆನಂದ್ ರವಿ ಅರಸು ನಿರ್ದೇಶನದ ಶಿವರಾಜ್‌ಕುಮಾರ್ ಅಭಿನಯದ ಆರ್‌ಡಿಎಕ್ಸ್ ಚಿತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಗೋಲ್ಡನ್ ಸ್ಟಾರ್ ಗನೇಶ್ ನಟನೆಯ ಆರೆಂಜ್ ಬಳಿಕ ಪ್ರಿಯಾ ಪಾಲಿನ ಮೂರನೇ ಕನ್ನಡ ಸಿನಿಮಾ ಆಗಿದೆ.

“ನನ್ನ ವೃತ್ತಿಜೀವನದಲ್ಲಿ, ನಾನು ಬಹಳಷ್ಟು ಭಾಷೆಗಳಲ್ಲಿ ಅಭಿನಯಿಸುವ ಅದೃಷ್ಟ ಪಡೆದಿದ್ದೇನೆ.ನಾನು ಇನ್ನೂ ಒಂದು ಅಥವಾ ಎರಡು ಕನ್ನಡ ಚಲನಚಿತ್ರಗಳನ್ನು ಮಾಡಿದರೆ, ನನಗಾಗಿ ಡಬ್ ಮಾಡಲು ಸಾಧ್ಯವಾಗುತ್ತದೆ. ಇದು ನಾನು ಎದುರು ನೋಡುತ್ತಿದ್ದೇನೆ ” ನಟಿ ಹೇಳಿದರು.

"ರಾಜಕುಮಾರದಲ್ಲಿ ಪುನೀತ್ ಅವರಂತಹಾ ದೊಡ್ಡ ನಟ  ಮತ್ತು ಹೆಸರಾಂತ ಪ್ರೊಡಕ್ಷನ್ ಹೌಸ್ ಜೊತೆಗೆ ನನ್ನ ಚೊಚ್ಚಲ ಪ್ರವೇಶ ಮಾಡಿದ ನಂತರ, ನಾನು ಯಾವಾಗಲೂ ನನ್ನ ಹೃದಯದಲ್ಲಿ ಸ್ಯಾಂಡಲ್ ವುಡ್ ಗೆ ವಿಶೇಷ ಸ್ಥಳವನ್ನು ನೀಡಿದ್ದೇನೆ. ಆರ್‌ಡಿಎಕ್ಸ್  ನಲ್ಲಿಯೂ ಸಹ, ನಾನು ಸತ್ಯ ಜ್ಯೋತಿ ಫಿಲ್ಮ್ಸ್ ಜೊತೆಯಾಗುತ್ತಿದ್ದು  ಕನ್ನಡದ ಅತ್ಯಂತ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಇದು ಒಂದಾಗಿದೆ. ಅಲ್ಲದೆ ರವಿ ಅರಸು. ಓರ್ವ ಸಂವೇದನಾಶೀಲ ನಿರ್ದೇಶಕರಾಗಿದ್ದಾರೆ.

"ನಾನು ಶಿವಣ್ಣ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಮತ್ತು ಅದು ನನಗೆ ಸಿಕ್ಕ ಗೌರವವೆಂದು ನಾನು ಭಾವಿಸುವೆ. ನಾನು ಅವರ ಬಗೆಗೆ ಅದ್ಭುತ ವಿಷಯಗಳನ್ನು ಕೇಳಿದ್ದೇನೆ. ನಾನು ರಾಜಕುಮಾರ ಆಡಿಯೊ ಲಾಂಚ್‌ನಲ್ಲಿ  ಶಿವಣ್ಣನನ್ನು  ಭೇಟಿಯಾದೆ ಮತ್ತು ಅವರ ನಮ್ರತೆ ನನಗೆ ಇಷ್ಟವಾಗಿದೆ. ಅಲ್ಲದೆ ಅವರೊಬ್ಬ ಅದ್ಭುತ ಡ್ಯಾನ್ಸರ್ ಕೂಡ ಹೌದು" ನಟಿ ಹೇಳಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp