'ನಿನ್ನ ಶ್ರೇಷ್ಠ ಗುಣ ನನ್ನ ಹೃದಯದಲ್ಲಿ ಅಚ್ಚಾಯಿತು ನೂರ್ಕಾಲ ಸುಖವಾಗಿ ಬಾಳಿ'

ಕನ್ನಡ ಚಿತ್ರರಂಗ ದೊಡ್ಡ ಕುಟುಂಬದಂತೆ ಎಂಬ ಮಾತು ಆಗಾಗ ಕೇಳಿಬರುತ್ತದೆ ಅದು ನಿಜ ಎಂಬುದನ್ನು ಅನೇ ಘಟನೆಗಳು ಆಗಾಗ್ಗೆ ಸಾಬೀತುಪಡಿಸುತ್ತವೆ .ಇಂದೂ ಸಹ ಅಂತಹುದೇ ಸಂಗತಿಯೊಂದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದಾಹರಣೆಯಾಗಿದ್ದಾರೆ.
ದರ್ಶನ್
ದರ್ಶನ್

ಬೆಂಗಳೂರು: ಕನ್ನಡ ಚಿತ್ರರಂಗ ದೊಡ್ಡ ಕುಟುಂಬದಂತೆ ಎಂಬ ಮಾತು ಆಗಾಗ ಕೇಳಿಬರುತ್ತದೆ ಅದು ನಿಜ ಎಂಬುದನ್ನು ಅನೇ ಘಟನೆಗಳು ಆಗಾಗ್ಗೆ ಸಾಬೀತುಪಡಿಸುತ್ತವೆ .ಇಂದೂ ಸಹ ಅಂತಹುದೇ ಸಂಗತಿಯೊಂದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದಾಹರಣೆಯಾಗಿದ್ದಾರೆ.

ಹಿರಿಯ ನಟ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಕಿಲ್ಲರ್ ವೆಂಕಟೇಶ್ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಕೆಲ ದಿನಗಳ ಹಿಂದೆ ನಟನ ಹೆಸರು ಹೇಳದೆಯೇ ಹಂಚಿಕೊಂಡಿದ್ದರು. ಬಳಿಕ ನಟ ವೆಂಕಟೇಶ್ ಜತೆಗಿನ ಭಾವಚಿತ್ರವನ್ನೂ ಟ್ವಿಟರ್ ಮೂಲಕ ಪೋಸ್ಟ್ ಮಾಡಿದ್ದರು.

ಅಷ್ಟೇ ಅಲ್ಲದೆ ತಮ್ಮ ಗೆಳೆಯನ ಚಿಕಿತ್ಸೆಗೆ ಸಹಕರಿಸುವಂತೆ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಆರೋಗ್ಯ ಸಚಿವ ಬಿ ಶ್ರೀರಾಮುಲು ಮೊದಲಾದವರಿಗೆ ಮನವಿ ಮಾಡಿದ್ದರಿಂದ ಅವರೆಲ್ಲರೂ ಸ್ಪಂದಿಸಿದ್ದರು.

ಇದೇ ಸಂದರ್ಭದಲ್ಲಿ ನಟ ದರ್ಶನ್ ಅವರಿಗೂ ಕರೆ ಮಾಡಿದ್ದ ಜಗ್ಗೇಶ್ ಸಹಾಯ ಕೋರಿದ್ದರು ಕೂಡಲೇ ಸ್ಪಂದಿಸಿದ ದರ್ಶನ್ ಒಂದು ಲಕ್ಷ ರೂಪಾಯಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, “ಕಿಲ್ಲರ್ ವೆಂಕಟೇಶ ವಿಷಯವಾಗಿ ನಾನು ಕರೆ ಮಾಡಿದ 1 ಗಂಟೆಯಲ್ಲಿ 1 ಲಕ್ಷ ರೂಪಾಯಿ ಕಳುಹಿಸಿಕೊಟ್ಟ ಕಲಾಬಂಧು ನಿನ್ನ ಶ್ರೇಷ್ಠ ಗುಣ ನನ್ನ ಹೃದಯದಲ್ಲಿ ಅಚ್ಚಾಯಿತು ನೂರ್ಕಾಲ ಸುಖವಾಗಿ ಬಾಳಿ” ಎಂದು ಮನದುಂಬಿ ಧನ್ಯವಾದ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com