ಚಂದನವನದಲ್ಲಿ ಇನ್ನು ಮುಂದೆ ಹಸಿದ 'ಮದಗಜ'ದ ರೋರಿಂಗ್!

ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಹಸಿವು, ಇನ್ನಷ್ಟು, ಮತ್ತಷ್ಟು ಪ್ರತಿಭೆ ತೋರಿಸ್ಬೇಕು ಅನ್ನೋ ಹಸಿವು, ಹೊಟ್ಟೆಪಾಡಿನ ಹಸಿವು. ಇದೆಲ್ಲ ಸೇರಿ ಆಗ್ತಿರೋದು ‘ಮದಗಜ’ ಹೀಗೆ ಹೇಳಿದ್ದು, ಬೇರೆ ಯಾರೂ ಅಲ್ಲ, ‘ಮದಗಜ’ ಚಿತ್ರದ ನಾಯಕ ಶ್ರೀಮುರಳಿ. 
ಮದಗಜ ಸಿನಿಮಾ ಮುಹೂರ್ತ
ಮದಗಜ ಸಿನಿಮಾ ಮುಹೂರ್ತ

ಬೆಂಗಳೂರು: ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಹಸಿವು, ಇನ್ನಷ್ಟು, ಮತ್ತಷ್ಟು ಪ್ರತಿಭೆ ತೋರಿಸ್ಬೇಕು ಅನ್ನೋ ಹಸಿವು, ಹೊಟ್ಟೆಪಾಡಿನ ಹಸಿವು. ಇದೆಲ್ಲ ಸೇರಿ ಆಗ್ತಿರೋದು ‘ಮದಗಜ’ ಹೀಗೆ ಹೇಳಿದ್ದು, ಬೇರೆ ಯಾರೂ ಅಲ್ಲ, ‘ಮದಗಜ’ ಚಿತ್ರದ ನಾಯಕ ಶ್ರೀಮುರಳಿ. 


ನಗರದ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಅದ್ದೂರಿಯಾಗಿ ನೆರವೇರಿದ ಮುಹೂರ್ತದ ನಂತರ ಮಾತನಾಡಿದ ಮುರಳಿ. ಹೊಸ ಸ್ಟೈಲ್, ಹೊಸ ಬಗೆಯ ಕಥೆಯೊಂದಿಗೆ ‘ಮದಗಜ’ ಬರಲಿದೆ ಲವ್, ಎಮೋಷನ್ ಸೇರಿದಂತೆ ಪ್ರೇಕ್ಷಕರನ್ನು ಸೆಳೆಯಲು ಬೇಕಾದ ಎಲ್ಲ ಬಗೆಯ ರಸಗಳೂ ಇರಲಿವೆ ಎಂದರು.
 
ಶಿವನ ದಯೆಯಿಂದ ಶಿವರಾತ್ರಿಯ ದಿನವೇ ವಾರಾಣಾಸಿಯಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, 20 ದಿನಗಳ ಕಾಲ ನಡೆಯಲಿದೆ ಈ ಹಿಂದಿನ ಚಿತ್ರಗಳಲ್ಲಿ ಅಭಿಮಾನಿಗಳಿಗೆ ನೀಡಲು ಸಾಧ್ಯವಾಗದ್ದನ್ನು ಈ ಚಿತ್ರ ಮೂಲಕ ನೀಡಲಾಗುತ್ತೆ ಸಂಪೂರ್ಣ ತಯಾರಿ ಮಾಡಿಕೊಂಡೇ ಚಿತ್ರೀಕರಣಕ್ಕೆ ತಂಡ ಮುಂದಾಗಿದೆ ಎಂದು ಹೇಳಿದರು.
 
ಶ್ರೀಮುರಳಿ ಮುಹೂರ್ತದ ಸಂದರ್ಭದಲ್ಲಿ ತಲೆಗೆ ತೊಟ್ಟಿದ್ದ ಕ್ಯಾಪ್ ಬಿಲುಕುಲ್ ತೆಗೆಯಲಿಲ್ಲ ಯಾಕೇಂದ್ರೇ ಅದರ ಹಿಂದೆ ರಹಸ್ಯವಿದೆಯಂತೆ ಈ ಕ್ಯಾಪ್ ಹಾಕಿರೋ ಉದ್ದೇಶಾನೆ ಹೇರ್ ಸ್ಟೈಲ್ ಕಾಣಬಾರದು ಅಂತ ಹೇಳಿದ ಶ್ರೀ ಮುರಳಿ, ‘ಮದಗಜ’ದಲ್ಲಿ ತಮ್ಮ ಲುಕ್ ಹೇಗಿರಬಹುದು ಅನ್ನೋ ಕುತೂಹಲವನ್ನ ಮತ್ತಷ್ಟು ಹೆಚ್ಚಿಸಿದ್ದಾರೆ.
 
ಅಂದಹಾಗೆ ಈ ಚಿತ್ರದಲ್ಲಿ ಅಭಿಮಾನಿಗಳನ್ನು ಸೆಳೆಯೋಕೆ, ಪಾತ್ರಕ್ಕೆ ನ್ಯಾಯ ಒದಗಿಸೋಕೆ ಶ್ರೀ ಮುರಳಿ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ, ನಿರ್ದೇಶಕ ಸೂಚನೆಯ ಮೇರೆಗೆ ಕೊಂಚ ತೆಳ್ಳಗಾಗಿದ್ದಾರೆ ಪತಿಯನ್ನು ಚಂದಗಾಣಿಸೋಕೆ ಸ್ವತಃ ಶ್ರೀವಿದ್ಯಾ ಅವರೇ ವಸ್ತ್ರವಿನ್ಯಾಸದ ಹೊಣೆ ಹೊತ್ತಿದ್ದಾರಂತೆ.
 
ಈ ಚಿತ್ರದ ಟೈಟಲ್‌ ಘೋಷಣೆ ಆದಾಗಿನಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ 'ಮದಗಜ' ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಲಿದ್ದಾರೆ “ಲಂಗ ದಾವಣಿ ತೊಡುವ ಹಳ್ಳಿ ಹೆಣ್ಣಿನ ಪಾತ್ರ ಹಾಗಂದ ಮಾತ್ರಕ್ಕೆ ಅವಿದ್ಯಾವಂತೆಯೇನಲ್ಲ, ಕೃಷಿಗೆ ಒತ್ತು ಕೊಡುವ ಯುವತಿ” ಎಂದು ಆಶಿಕಾ ಹೇಳಿದ್ದಾರೆ.
 
ನಿರ್ದೇಶಕ ಮಹೇಶ್ ಕುಮಾರ್ ‘ಮದಗಜ’ದ ಸಾರಥ್ಯ ವಹಿಸಿಕೊಂಡಿದ್ದು, ನಿರ್ಮಾಪಕ ಉಮಾಪತಿ ಬಂಡವಾಳ ಹೂಡಿದ್ದಾರೆ ಈ ವರ್ಷವೇ ಚಿತ್ರ ಬಿಡುಗಡೆಯಾಗಲಿದೆ ಎಂದು ತಂಡ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com